ಕಾಳಿದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
 
== ಕಾಳಿದಾಸನ ಸ್ಥಳ, ಕಾಲ ಪರಿಚಯ ==
ಈತನ ಸ್ಥಳ ಮತ್ತು ಕಾಲದ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಬಹಳ ಚರ್ಚೆಗಳು ನಡೆದಿವೆ. ಅನೇಕ ದಂತಕತೆಗಳೂ ಇವೆ. ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿಯೇ ಈತನು ಇದ್ದನು ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವು ವಿದ್ವಾಂಸರು ಈತನು ೬ನೇ ಶತಮಾನದಲ್ಲಿ [[ಉಜ್ಜಯಿನಿ]]ಯ ರಾಜ [[ವಿಕ್ರಮಾದಿತ್ಯ]]ನ ಆಸ್ಥಾನದಲ್ಲಿದ್ದನು ಎಂದು ಹೇಳುತ್ತಾರೆ. ಈತನು [[ಭೋಜರಾಜ]]ನ ಆಸ್ಥಾನ ಕವಿಯಾಗಿದ್ದನು ಎಂದೂ ಹೇಳುವವರಿದ್ದಾರೆ.
 
 
ಈ ದಂತ ಕತೆಗಳಲ್ಲಿ ಮುಖ್ಯವಾದ ಮೂರನ್ನು ಗಮನಿಸಬಹುದು.
 
 
ಮೊದಲನೆಯದು ಇವನು ಕುರುಬನಾಗಿದ್ದು ಕಾಳಿಕಾದೇವಿಯ ವರದಿಂದ ವರಕವಿಯಾದನೆಂದು. ರಾಜಕುಮಾರಿಯೊಬ್ಬಳು ತನ್ನ ತಂದೆಯ ಆಸ್ಥಾನದ ಮಂತ್ರಿಯೊಬ್ಬನ ಕುಟಿಲತೆಯಿಂದ ಈ ಅವಿದ್ಯಾವಂತ ಕುರುಬನನ್ನು ಮದುವೆಯಾಗಿದ್ದು, ವಸ್ತುಸ್ಥಿತಿ ತಿಳಿದ ಬಳಿಕ ರಾತ್ರಿಯಿಡೀ ಕಾಳಿಯ ನಾಮಸ್ಮರಣೆ ಮಾಡೆಂದು ಅವನಿಗೆ ಹೇಳಿ, ಅದರಂತೆ ಮಾಡಿದವನು ಬೆಳಗಾಗುವಾಗ ವಿದ್ವಾಂಸನಾಗಿ ಶ್ರೇಷ್ಠಕವಿಯಾದನೆಂದರೆ ನಂಬಲಾಗದು. ಅವನ ಕೃತಿಗಳನ್ನು ಅಭ್ಯಾಸ ಮಾಡಿದವರಿಗೆ ಅವನು ವೇದ, ಶಾಸ್ತ್ರ, ಪುರಾಣ, ಮೊದಲಾದವುಗಳ ಪರಿಚಯವಿರುವದು ಸ್ಪಷ್ಟವಾಗುತ್ತದೆ. ಅಲ್ಲದೆ, ಅವನ ಕಾವ್ಯ್ಗಳಿಂದ ಕವಿತೆ ಬೆಳೆದ ಹಂತಗಳನ್ನು ಗುರುತಿಸಬಹುದು. ‘ಕಾಳಿದಾಸ’ ಎಂಬ ಹೆಸರಿನ ಮೇಲೆ ಹುಟ್ಟಿದ ಈ ಕತೆ ನಂಬಲು ಅರ್ಹವಲ್ಲ. <Ref>ಅವಲೋಕನ - ಬಸಪ್ಪಶಾಸ್ತ್ರೀ (ವಿರಚಿತ) ಕರ್ಣಾಟಕ ಶಾಕುಂತಲ ನಾಟಕಂ - ಸಂಪಾದಕ: ಎಚ್ ಎಮ್ ಶಂಕರನಾರಾಯಣರಾವ್ - ಶಾರದಾ ಮಂದಿರ, ಪ್ರಕಾಶಕರು, ಮೈಸೂರು - ಐದನೆಯ ಮುದ್ರಣ: ೧೯೭೯ </Ref>
 
 
ಎರಡನೆಯದು ಈತನು ಧಾರಾಪುರದ ಅರಸ [[ಭೋಜರಾಜ]]ನ ಆಸ್ಥಾನ ಕವಿಯಾಗಿದ್ದು, ಸಮಸ್ಯಾಪೂರ್ಣಮಾಡುತ್ತಿದ್ದನಂತೆ. ಧಾರಾಪುರದ ಭೋಜರಾಜನು ಹನ್ನೊಂದನೆಯ ಶತಮಾನದವನು. ಕಾಳಿದಾಸನು ಅವನಿಂತಲೂ ಐದಾರು ಶತಮಾನಗಳಿಗೆ ಮೊದಲಿದ್ದವನು. ಆದ್ದರಿಂದ ಈ ಕತೆಯೂ ಅಸತ್ಯವೇ. <Ref>ಅವಲೋಕನ - ಬಸಪ್ಪಶಾಸ್ತ್ರೀ (ವಿರಚಿತ) ಕರ್ಣಾಟಕ ಶಾಕುಂತಲ ನಾಟಕಂ - ಸಂಪಾದಕ: ಎಚ್ ಎಮ್ ಶಂಕರನಾರಾಯಣರಾವ್ - ಶಾರದಾ ಮಂದಿರ, ಪ್ರಕಾಶಕರು, ಮೈಸೂರು - ಐದನೆಯ ಮುದ್ರಣ: ೧೯೭೯ </Ref>
 
 
ಮೂರನೆಯದು ಕುಮಾರಗುಪ್ತನ ಕಾಲದಲ್ಲಿ ಕಳಿದಾಸನು ಲಂಕಾದ್ವೀಪಕ್ಕೆ ಹೋಗಿ ಅಲ್ಲಿ ವೇಶ್ಯೆಯೊಬ್ಬಳಿಂದ ಹತನಾದನಂತೆ. ಈ ಕತೆಯು ಅವನ ಶೃಂಗಾರಪ್ರಿಯತೆಯಿಂದಾಗಿ ಹುಟ್ಟಿರಬಹುದೆಂದು ವಿದ್ವಾಂಸರ ಅಭಿಪ್ರಾಯ.
 
 
ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿಯೇ ಈತನು ಇದ್ದನು ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವು ವಿದ್ವಾಂಸರು ಈತನು ೬ನೇ ಶತಮಾನದಲ್ಲಿ [[ಉಜ್ಜಯಿನಿ]]ಯ ರಾಜ [[ವಿಕ್ರಮಾದಿತ್ಯ]]ನ ಆಸ್ಥಾನದಲ್ಲಿದ್ದನು ಎಂದು ಹೇಳುತ್ತಾರೆ.
 
 
Line ೩೪ ⟶ ೪೯:
 
ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರಾಹಮಿಹಿರ ಮತ್ತು ವರರುಚಿ ಎಂಬವರು ವಿಕ್ರಮಾದಿತ್ಯನ ಆಸ್ಥಾನದಲ್ಲಿ ನವರತ್ನಗಳೆಂದು ಪ್ರಸಿದ್ಧರಾಗಿದ್ದರು.
 
 
==ಜನನ ಮತ್ತು ವಿದ್ಯಾಭ್ಯಾಸ==
"https://kn.wikipedia.org/wiki/ಕಾಳಿದಾಸ" ಇಂದ ಪಡೆಯಲ್ಪಟ್ಟಿದೆ