ಕಾಳಿದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೫ ನೇ ಸಾಲು:
ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರಾಹಮಿಹಿರ ಮತ್ತು ವರರುಚಿ ಎಂಬವರು ವಿಕ್ರಮಾದಿತ್ಯನ ಆಸ್ಥಾನದಲ್ಲಿ ನವರತ್ನಗಳೆಂದು ಪ್ರಸಿದ್ಧರಾಗಿದ್ದರು.
 
== ಕಾಳಿದಾಸನ ಪ್ರಮುಖ ಕೃತಿಗಳು ==
 
ಸಂಸ್ಕೃತ ಸಾಹಿತ್ಯದಲ್ಲಿ ಮಹೋತ್ತಮನೆಂದು ಹೆಸರು ಪಡೆದವರಲ್ಲಿ ಮೊಟ್ಟಮೊದಲನೆಯವನು ಅಶ್ವಘೋಷ. ಇವನ ಕಾಲದ ಸುಮಾರು ಮೂರು ಶತಮಾನಗಳ ನಂತರ ಬಂದನೆನ್ನಲಾದ ಕಾಳಿದಾಸನ ಕೃತಿಗಳಲ್ಲಿ ಇವನ ಪ್ರಭಾವವು ಗಾಢವಾಗಿ ಬೀರಿರುವದನ್ನು ಗಮನಿಸಲಾಗಿದೆ.
 
ಅಗಣಿತ ಸಾಹಿತ್ಯರಚನೆಗಳನ್ನು ಕಾಳಿದಾಸನ ಹೆಸರಿನೊಂದಿಗೆ ಜೋಡಿಸಲ್ಪಟ್ಟಿರುವದು ಗೋಚರವಾದರೂ, ಕಾರಣಾಂತರಗಳಿಂದ ಹಲವು ಅನಾಮಧೇಯ ಕೃತಿಕಾರರ ಹಾಗೂ ಅವನ ಹೆಸರನ್ನೇ ಹೋಲುವವರ ರಚನೆಗಳವು, ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಏಳು ಕೃತಿಗಳನ್ನು ಮಾತ್ರ ಅವನಿಂದ ರಚಿತವಾದವೆಂದು ತೀರ್ಮಾನವಾಗಿದೆ.
 
 
==== ಮಹಾ ಕಾವ್ಯಗಳು ====
* [[ರಘುವಂಶಮ್]]
Line ೪೬ ⟶ ೫೨:
==== ನಾಟಕಗಳು ====
* [[ಅಭಿಜ್ಞಾನಶಾಕುಂತಲಮ್]]
* [[ಮಾಲವಿಕಾಗ್ನಿಮಿತ್ರಮ್]]
* [[ಮಾಳವಿಕಾಗ್ನಿಮಿತ್ರಮ್]]
* [[ವಿಕ್ರಮೋರ್ವಶೀಯಮ್]]
 
 
ಮೇಘದೂತವು ಸಂಸ್ಕೃತ ಸಾಹಿತ್ಯದಲ್ಲಿದೂತಕಾವ್ಯವೆಂದೂ, ಸಂದೇಶಕಾವ್ಯವೆಂದೂ ಪ್ರಖ್ಯಾತವಾಗಿದೆ. ಅಭಿಜ್ಞಾನಶಾಕುಂತಲವಂತೂ ವಿಶ್ವದ ಅತ್ಯುತ್ತಮ ನಾಟಕಗಳಲ್ಲೊಂದು ಎಂದು ಪ್ರಸಿದ್ಧ. ಇದನ್ನು ಓದಿದ ಜರ್ಮನ್ ಪ್ರಸಿದ್ಧ ಕವಿ ಗೋಏಟೇ ಅತ್ಯಂತ ವಿಮುಗ್ಧನೂ ಪರಮಾನಂದಿತನೂ ಆಗಿದ್ದದು ಸರ್ವಶ್ರುತ. ಈ ನಾಟಕವು ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಉಪಮಾಲಂಕಾರವನ್ನು ಪ್ರಯೋಗಿಸುವದರಲ್ಲಿ ಕಾಳಿದಾಸನ ಶ್ರೇಷ್ಠತೆಯು ಸರ್ವತ್ರ ಪ್ರಸಿದ್ಧಿಯಾಗಿದೆ.
 
== '''ಕಾಳಿದಾಸನ ಐತಿಹ್ಯದ ಬಗ್ಗೆ ಚಲನಚಿತ್ರಗಳು''' ==
"https://kn.wikipedia.org/wiki/ಕಾಳಿದಾಸ" ಇಂದ ಪಡೆಯಲ್ಪಟ್ಟಿದೆ