ಕಾಳಿದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
 
== ಕಾಳಿದಾಸನ ಸ್ಥಳ, ಕಾಲ ಪರಿಚಯ ==
ಈತನ ಸ್ಥಳ ಮತ್ತು ಕಾಲದ ಬಗ್ಗೆ ಖಚಿತವಾದ ಮಾಹಿತಿಯಿಲ್ಲ. ಬಹಳ ಚರ್ಚೆಗಳು ನಡೆದಿವೆ. ಅನೇಕ ದಂತಕತೆಗಳೂ ಇವೆ. ಕ್ರಿಸ್ತ ಪೂರ್ವದಲ್ಲಿಯೇಪೂರ್ವ ಒಂದನೇ ಶತಮಾನದಲ್ಲಿಯೇ ಈತನು ಇದ್ದನು ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವು ವಿದ್ವಾಂಸರು ಈತನು ೬ನೇ ಶತಮಾನದಲ್ಲಿ [[ಉಜ್ಜಯಿನಿ]]ಯ ರಾಜ [[ವಿಕ್ರಮಾದಿತ್ಯ]]ನ ಆಸ್ಥಾನದಲ್ಲಿದ್ದನು ಎಂದು ಹೇಳುತ್ತಾರೆ. ಈತನು [[ಭೋಜರಾಜ]]ನ ಆಸ್ಥಾನ ಕವಿಯಾಗಿದ್ದನು ಎಂದೂ ಹೇಳುವವರಿದ್ದಾರೆ.
 
 
ಕಾಳಿದಾಸನ ಕುರಿತ ಮೊಟ್ಟಮೊದಲ ಉಲ್ಲೇಖ ಕ್ರಿಸ್ತಶಕ ೬೩೪ರ ಶಿಲಾಲೇಖವೊಂದಲ್ಲಿ ಸಿಗುತ್ತದೆ. ಈ ಶಾಸನವು ಕರ್ನಾಟಕದ ಐಹೊಳೆಯಲ್ಲಿ ದೊರೆತಿದೆ. <Ref>Gaurīnātha Śāstrī (1987). A Concise History of Classical Sanskrit Literature.p 80. Motilal Banarsidass Publ. ISBN 978-81-208-0027-4. {from en.wikipedia}</Ref> ಇದರಲ್ಲಿ ಕಾಳಿದಾಸ ಮತ್ತು ಭಾರವಿಯರಿಬ್ಬರನ್ನೂ ಪ್ರಸಿದ್ಧ ಕವಿಗಳೆಂದು ತಿಳಿಸಲಾಗಿದೆ. ಆ ಶ್ಲೋಕ ಹೀಗಿದೆ:
 
 
ಯೇನಾಯೋಜಿ ನ ವೇಶ್ಮ, ಸ್ಥಿರಮರ್ಥವಿಧೌ ವಿವೇಕನಾ ಜಿನವೇಶ್ಮ |
 
ಸ ವಿಜಯತಾಂ ರವಿಕೀರ್ತಿ: ಕವಿತಾಶ್ರಿತಕಾಲಿದಾಸಭಾರವಿಕೀರ್ತಿ: ||
 
 
ಬಾಣನ ಹರ್ಷಚರಿತದ ಆರಂಭದಲ್ಲಿ ಕಾಳಿದಾಸನ ಉಲ್ಲೇಖವಿದೆ. ಬಾಣನ ಕಾಲವು ಕ್ರಿಸ್ತಶಕದ ಆರನೆಯ ಶತಾಬ್ಧಿಯ ಉತ್ತರಾರ್ಧ ಅಥವಾ ಏಳನೇ ಶತಾಭ್ಧಿಯ ಪೂರ್ವಾರ್ಧವೆಂದು ಹೇಳಲಾಗುವದರಿಂದ ಕಾಳಿದಾಸನು ಇವನಿಗಿಂತ ಮೊದಲಿದ್ದವನೆಂದು ಹೇಳಬಹುದು.
 
 
ಕಾಳಿದಾಸನ ಮೇಘದೂತ ಕಾವ್ಯದ ವ್ಯಾಖ್ಯೆಯನ್ನು ಬರೆದ ಮಲ್ಲಿನಾಥನು ಆರನೇ ಶತಮಾನದ ಮಧ್ಯದಲ್ಲಿದ್ದ ನಿಚುಲ ಮತ್ತು ದಿಙ್ನಾಗರು ಕಾಲಿದಾಸನ ಸಮಕಾಲೀನರೆಂದು ಹೇಳಿದ್ದಾನೆ. ಆದರೆ ಮಲ್ಲಿನಾಥನ ಈ ಹೇಳಿಕೆಯ ಕುರಿತು ಬಹಳ ಸಂದೇಹಗಳಿವೆ.
 
 
ಕಾಳಿದಾಸನು ತಾನು ವಿಕ್ರಮ ರಾಜನ ಆಸ್ಥಾನದಲ್ಲಿದ್ದವನೆಂದು ಬರೆದಿದ್ದಾನೆ. ಆದರೆ ವಿಕ್ರಮ ಎಂಬ ಹೆಸರಿದ್ದ ಕೆಲವಾರು ರಾಜರಲ್ಲಿ ಯಾರೆಂದು ನಿರ್ಣಯಿತವಾಗಿಲ್ಲ. ಪ್ರಚಲಿತವಾಗಿರುವಂತೆ ವಿಕ್ರಮಶಕೆಯು ಕ್ರಿಸ್ತಪೂರ್ವ ೫೬ರಲ್ಲಿ ಆರಂಭವಾಗಿದೆ. ಕಾಳಿದಾಸನು ಉಜ್ಜಯಿನಿಯಲ್ಲಿದ್ದ ಈ ವಿಕ್ರಮನ ಆಸ್ಥಾನದಲ್ಲಿದ್ದನೆಂದರೆ ಅವನು ಕ್ರಿಸ್ತಪೂರ್ವ ಒಂದನೆಯ ಶತಾಬ್ಧಿಯಲ್ಲಿದ್ದನೆನ್ನಬಹುದು.
 
 
ಆದರೆ ಇತ್ತೀಚೆಗೆ ಕೆಲವು ವಿದ್ವಾಂಸರು ವಿಕ್ರಮಶಕೆಯು ಕೋರೂರಿನ ಮಹಾಯುದ್ಧವನ್ನು ಆಧರಿಸಿರುವದಾಗಿ ತೀರ್ಮಾನಿಸಿದ್ದಾರೆ. ಕ್ರಿಸ್ತಶಕ ೫೪೪ರಲ್ಲಿ ವಿಕ್ರಮನು ಮ್ಲೇಚ್ಛರನ್ನು ಸೋಲಿಸಿದ್ದ. ಆ ಸಮಯದ ೬೦೦ ವರ್ಷಗಳ ಹಿಂದಿನಿಂದ ವಿಕ್ರಮಶಕೆಯನ್ನು ಆರಂಭಿಸಲಾಗಿದೆಯೆಂದೂ ನಿರ್ಧರಿಸಿದ್ದಾರೆ. ಇದು ನಿಜವಾದರೆ ಕಾಳಿದಾಸನು ಆರನೇ ಶತಮಾನದಲ್ಲಿದನೆಂದು ತಿಳಿಯಬೇಕು. ಇನ್ನೂ ಇವೆಲ್ಲದರ ಬಗ್ಗೆ ಏಕಮತವಿಲ್ಲ. <ref> ಸಂಸ್ಕೃತ-ಹಿಂದೀ ಕೋಶ; ವಾಮನ ಶಿವರಾಮ ಆಪ್ಟೆ, ಮೋತೀಲಾಲ್ ಬನಾರಸೀದಾಸ್ ಪ್ರಕಾಶನ, ದೆಹಲಿ - ೧೯೮೯</ref>
 
 
ಬಹಳಷ್ಟು ವಿದ್ವಾಂಸರು ಇಮ್ಮಡಿ ಚಂದ್ರಗುಪ್ತ ವಿಕ್ರಮಾದಿತ್ಯ ಮತ್ತು ಅವನ ಉತ್ತರಾಧಿಕಾರಿಯಾದ ಕುಮಾರಗುಪ್ತನ ಕಾಲದಲ್ಲಿ, ಅಂದರೆ ಕ್ರಿಸ್ತ ಪೂರ್ವ ನಾಲ್ಕನೇ ಮತ್ತು ಐದನೇ ಶತಮಾನಗಳ ನಡುವಿನ ಕಾಲದಲ್ಲಿ ಕಾಳಿದಾಸನಿದ್ದನೆಂದು ಅಭಿಪ್ರಾಯಪಡುತ್ತಾರೆ. <Ref>Encyclopedia Americana, Walter Harding Maurer, University of Hawaii at Manoe</Ref>
 
 
ಇಮ್ಮಡಿ ಚಂದ್ರಗುಪ್ತ(ಕ್ರಿಸ್ತಪೂರ್ವ ೩೮೦-೫೧೫)ನಿಗೂ ಸ್ಕಂದಗುಪ್ತ(ಕ್ರಿಸ್ತಪೂರ್ವ ೪೫೫-೪೮೦)ನಿಗೂ ವಿಕ್ರಮಾದಿತ್ಯನೆಂಬ ಬಿರುದಿತ್ತು. ಕಾಳಿದಾಸನು ಇವರ ಕಾಲದಲ್ಲಿದ್ದನೆಂದೂ ಹೇಳುತ್ತಾರೆ. <Ref>Gaurīnātha Śāstrī (1987). A Concise History of Classical Sanskrit Literature.p 78. Motilal Banarsidass Publ. ISBN 978-81-208-0027-4. {from en.wikipedia}</ref>ಆದರೆ ಈಗ ಕಾಳಿದಾಸನ ಕಾಲವು ಕ್ರಿಸ್ತಶಕ ೫ನೇ ಮತ್ತು ೬ನೇ ಶತಕಗಳ ನಡುವೆಯಿತ್ತೆಂಬುದನ್ನು ಅಂಗೀಕರಿಸಲಾಗಿದೆ. <Ref>Gaurīnātha Śāstrī (1987). A Concise History of Classical Sanskrit Literature.p 77. Motilal Banarsidass Publ. ISBN 978-81-208-0027-4. {from en.wikipedia}</ref>
 
 
ಧನ್ವಂತರಿ, ಕ್ಷಪಣಕ, ಅಮರಸಿಂಹ, ಶಂಕು, ವೇತಾಲಭಟ್ಟ, ಘಟಕರ್ಪರ, ಕಾಳಿದಾಸ, ವರಾಹಮಿಹಿರ ಮತ್ತು ವರರುಚಿ ಎಂಬವರು ವಿಕ್ರಮಾದಿತ್ಯನ ಆಸ್ಥಾನದಲ್ಲಿ ನವರತ್ನಗಳೆಂದು ಪ್ರಸಿದ್ಧರಾಗಿದ್ದರು.
 
== ಕಾಳಿದಾಸನ ಪ್ರಮುಖ ಕೃತಿಗಳು ==
"https://kn.wikipedia.org/wiki/ಕಾಳಿದಾಸ" ಇಂದ ಪಡೆಯಲ್ಪಟ್ಟಿದೆ