ಸೂರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು fixing dead links
೧೩೯ ನೇ ಸಾಲು:
ಸೂರ್ಯನ ಬೆಳಕನ್ನು ನಿಸ್ತೇಜಗೊಳಿಸುವ [[:en:neutral density filter|ಸೋಸಕ]]ವಿಲ್ಲದೆ, ಬೆಳಕನ್ನು ಕೇಂದ್ರೀಕರಿಸುವ [[ದುರ್ಬೀನು|ದುರ್ಬೀನಿನಂಥ]] ಉಪಕರಣಗಳಿಂದ ಸೂರ್ಯನನ್ನು ನೋಡುವುದು ಬಹಳ ಅಪಾಯಕಾರಿ. ಸೋಸಕಗಳಿಲ್ಲದ ದುರ್ಬೀನುಗಳು ಬರಿಗಣ್ಣಿಗಿಂತ ೫೦೦ ಪಟ್ಟು ಹೆಚ್ಚು ಬೆಳಕನ್ನು ಅಕ್ಷಿಪಟಲದ ಮೇಲೆ ಕೇಂದ್ರೀಕರಿಸಿ, ಅಕ್ಷಿಪಟಲದ ಜೀವಕೋಶಗಳನ್ನು ತಕ್ಷಣವೇ ನಾಶಗೊಳಿಸಬಹುದು. ನಡುದಿನದ ಸೂರ್ಯನತ್ತ ಈ ರೀತಿ ಒಂದು ಕ್ಷಣವೇ ಕಣ್ಣು ಹಾಯಿಸಿದರೂ ಶಾಶ್ವತ ಕುರುಡು ಉಂಟಾಗಬಹುದು.<ref name="Marsh">{{cite journal |last=Marsh |first=J. C. D. |url=http://articles.adsabs.harvard.edu/cgi-bin/nph-iarticle_query?1982JBAA...92..257M&amp;data_type=PDF_HIGH&amp;type=PRINTER&amp;filetype=.pdf |title=Observing the Sun in Safety |journal=J. Brit. Ast. Assoc. |year=1982 |volume=92 |pages=6}}</ref> ಸೂರ್ಯನನ್ನು ಸುರಕ್ಷಿತವಾಗಿ ನೋಡುವ ಒಂದು ವಿಧಾನವೆಂದರೆ, ದುರ್ಬೀನನ್ನು ಬಳಸಿ ಸೂರ್ಯನ ಚಿತ್ರವನ್ನು ಒಂದು ತೆರೆ/ಪರದೆಯ ಮೇಲೆ ಬೀಳಿಸಿ, ಆ ಚಿತ್ರವನ್ನು ವೀಕ್ಷಿಸುವುದು. ಶುಚಿಯಾದ ಅಕ್ಷಿ ಕಾಚಕವನ್ನು ಹೊಂದಿರುವ ಸಣ್ಣ ದೂರದರ್ಶಕ/ದುರ್ಬೀನುಗಳೊಂದಿಗೆ ಮಾತ್ರ ಈ ರೀತಿ ಮಾಡಬಹುದು. ಬೇರೆ ಥರದ ದೂರದರ್ಶಕಗಳು ಇದರಿಂದ ಹಾನಿಗೊಳಗಾಗಬಹುದು.
 
ಕಣ್ಣಿನ [[:en:pupil|ಪಾಪೆ]]ಯು ಕಾಂತಿಯ ಅಸಾಮಾನ್ಯವಾದ ವೈದೃಶ್ಯತೆಗೆ ಹೊಂದಿಕೊಳ್ಳದರಿಂದ, [[:en:solar eclipse|ಸೂರ್ಯನ ಖಂಡ ಗ್ರಹಣ]]ವನ್ನು ಬರಿಗಣ್ಣಿನಿಂದ ನೋಡುವುದು ಅಪಾಯಕರ: ಪಾಪೆಯು ದೃಷ್ಟಿ ವಲಯದಲ್ಲಿ ಕಾಣುವ ಒಟ್ಟು ಬೆಳಕಿನ ಆಧಾರದ ಮೇಲೆ ಹಿಗ್ಗುತ್ತದೆ - ದೃಷ್ಟಿವಲಯದಲ್ಲಿ ಕಾಣುವ ಅತಿ ಪ್ರಕಾಶಮಾನವಾದ ವಸ್ತುವಿನ ಆಧಾರದ ಮೇಲಲ್ಲ. ಖಂಡ ಗ್ರಹಣದ ಸಮಯದಲ್ಲಿ ಬಹುತೇಕ ಸೂರ್ಯರಶ್ಮಿಯನ್ನು ಚಂದ್ರನು ತಡೆಹಿಡಿದರೂ, ದ್ಯುತಿಗೋಳದ ಕಾಣುವ ಭಾಗಗಳು ಸಾಮಾನ್ಯ ದಿನದಲ್ಲಿರುವಷ್ಟೇ ಕಾಂತಿಯುತವಾಗಿರುತ್ತವೆ. ಗ್ರಹಣದ ಒಟ್ಟು ಅಂಧಕಾರದಲ್ಲಿ ಪಾಪೆಯು ~೨-ಮಿ.ಮೀ. ಇಂದ ~೬-ಮಿ.ಮೀ.ವರೆಗೆ ಹಿಗ್ಗಿ, ಸಾಮಾನ್ಯ ದಿನದಂದು ಸೂರ್ಯನನ್ನು ನೋಡಿದಾಗ ಬೀಳುವುದಕ್ಕಿಂತ ೧೦ ಪಟ್ಟು ಹೆಚ್ಚು ಬೆಳಕು ಅಕ್ಷಿಪಟಲದ ಮೇಲೆ ಬೀಳುತ್ತದೆ. ಇದು ಅಕ್ಷಿಪಟಲದ ಜೀವಕೋಶಗಳಿಗೆ ಹಾನಿಯುಂಟುಮಾಡಿ ಅಥವ ಅವುಗಳನ್ನು ನಾಶಗೊಳಿಸಿ, ವೀಕ್ಷಕನ ದೃಷ್ಟಿವಲಯದಲ್ಲಿ ಶಾಶ್ವತವಾದ ಕುರುಡು ಚುಕ್ಕೆಗಳನ್ನು ಉಂಟುಮಾಡಬಹುದು.<ref name="Espenak">{{cite web |last=Espenak |first=F. |title=Eye Safety During Solar Eclipses - adapted from NASA RP 1383 Total Solar Eclipse of 1998 February 26, April 1996, p. 17 |url=http://sunearth.gsfc.nasa.gov/eclipse/SEhelp/safety.html |accessdate=2006-03-22 |publisher=NASA|archiveurl=https://archive.is/F2Jd|archivedate=2012-07-16}}</ref> ಇದು ನೋವನ್ನು ಉಂಟುಮಾಡುವುದಿಲ್ಲವಾದ್ದರಿಂದ, ಅನುಭವವಿಲ್ಲದ ವೀಕ್ಷಕರಿಗೆ ಮತ್ತು ಮಕ್ಕಳಿಗೆ ಬಹಳ ಅಪಾಯಕಾರಿ: ತಮ್ಮ ದೃಷ್ಟಿಯು ಹಾಳಾಗುತ್ತಿದೆಯೆಂದು ವೀಕ್ಷಕರಿಗೆ ತಕ್ಷಣವೇ ಗೊತ್ತಾಗುವುದಿಲ್ಲ.
 
[[ಸೂರ್ಯೋದಯ]] ಮತ್ತು [[ಸೂರ್ಯಾಸ್ತ|ಸೂರ್ಯಾಸ್ತಗಳ]] ಸಮಯದಲ್ಲಿ ಬೆಳಕು ವಾಯುಮಂಡಲದ ಮೂಲಕ ಹೆಚ್ಚು ದೂರ ಕ್ರಮಿಸುವುದರ ಕಾರಣ, [[:en:Rayleigh scattering|ರ್ಯಾ‌ಲಿ]] ಮತ್ತು [[:en:mie theory|ಮೀ]] ಚದುರಿಕೆಗಳು ಬೆಳಕನ್ನು ದುರ್ಬಲಗೊಳಿಸುತ್ತವೆ. ಈ ಸನ್ನಿವೇಶಗಳಲ್ಲಿ ಕೆಲವೊಮ್ಮೆ ಸೂರ್ಯವು ಬರಿಗಣ್ಣಿನಿಂದ ನೇರವಾಗಿ ನೋಡಬಹುದಾದಷ್ಟು ಮಂದವಾಗಿರುತ್ತದೆ. ಮಂಜು, ವಾಯುಮಂಡಲದಲ್ಲಿ ಧೂಳು ಮತ್ತು ಗಾಳಿಯಲ್ಲಿ ಹೆಚ್ಚು ತೇವಾಂಶಗಳೂ ಬೆಳಕನ್ನು ದುರ್ಬಲಗೊಳಿಸುತ್ತವೆ.
"https://kn.wikipedia.org/wiki/ಸೂರ್ಯ" ಇಂದ ಪಡೆಯಲ್ಪಟ್ಟಿದೆ