ಗಿಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q31431 (translate me)
೧೭ ನೇ ಸಾಲು:
[[ಚಿತ್ರ:AmazonFeathers.jpg|thumb|right|ಹಳದಿ ತಲೆಯ ಗಿಳಿಯ ಗರಿಗಳು]]
ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲೇಷ್ಯಾಗಳಲ್ಲಿ ಕಾಣಬರುವ ಗಿಳಿಗಳ ವೈವಿಧ್ಯದಿಂದ ಇವುಗಳು ಮೂಲತಃ [[ಗೊಂಡ್ವಾನಾ]]ಗೆ ಸೇರಿರಬಹುದೆಂದು ತಿಳಿಯಲಾಗಿದೆ. ಸುಮಾರು ೭ ಕೋಟಿ ವರ್ಷಗಳಷ್ಟು ಹಳೆಯದಾದ ಗಿಳಿಯ ಪಳೆಯುಳಿಕೆಯೊಂದು ಈವರೆಗೆ ದೊರೆತಿರುವ ಅತಿ ಪ್ರಾಚೀನ ಮಾದರಿ. ಕೊಕ್ಯಾಟೂ ತಳಿಯ ಗಿಳಿಗಳನ್ನು ಸುಲಭವಾಗಿ ಗುರುತಿಸಬಹುದಾಗಿದ್ದು ತಲೆಯ ಮೇಲೆ ಪುಕ್ಕಗಳ ಗುಚ್ಛವನ್ನು ಹೊಂದಿರುತ್ತವೆ. ಇತರ ಜಾತಿಯ ಗಿಳಿಗಳಿಗಿಂತ ಇವುಗಳ ರಕ್ತನಾಳಗಳ ರಚನೆ, ತಲೆಬುರುಡೆ ಬೇರೆ ರೀತಿಯವಾಗಿವೆ. ಅಲ್ಲದೆ ಇವುಗಳ ಗರಿಗಳ ರೂಪುರೇಷೆಗಳು ಭಿನ್ನವಾಗಿದ್ದು ಬೆಳಕನ್ನು ಚದುರಿಸುವಲ್ಲಿ ಅಸಮರ್ಥವಾಗಿವೆ. ಈ ಕಾರಣದಿಂದಾಗಿ ಕೊಕ್ಯಾಟೂ ಗಿಳಿಗಳು ಸಿಟ್ಟಸೀಡೇ ಗಿಳಿಗಳಂತೆ ಹೊಳೆಯುವ ವಿಭಿನ್ನ ಆಕರ್ಷಕ ಬಣ್ಣವನ್ನು ಹೊಂದಿರುವುದಿಲ್ಲ. ಅಮೆಜಾನ್ ಗಿಳಿ, ಮಕಾವ್, ದೊಡ್ಡ ಕೊಕ್ಯಾಟೂ ಇಂತಹ ಗಿಳಿಗಳ ಜೀವಿತಾವಧಿ ೮೦ ವರ್ಷಗಳವರೆಗೆ ಇರುತ್ತದೆ. ನೂರು ವರ್ಷ ಬಾಳಿದ ಗಿಳಿಗಳ ಬಗ್ಗೆ ದಾಖಲೆಗಳು ಲಭ್ಯ. ಸಣ್ಣ ಜಾತಿಯ ಗಿಳಿಗಳು ಸಾಮಾನ್ಯವಾಗಿ ೧೫ ರಿಂದ ೨೦ ವರ್ಷಗಳವರೆಗೆ ಬಾಳುತ್ತವೆ.
== ವ್ಹಕ್ಕಿಗಳಾಗಿವೆ.
== ವ್ಯಾಪ್ತಿಯಾಪ್ತಿ ಮತ್ತು ವಿತರಣೆ ==
ಈ ಮೊದಲೇ ತಿಳಿಸಿದಂತೆ ಗಿಳಿಗಳು ಜಗತ್ತಿನ ಉಷ್ಣವಲಯದಾದ್ಯಂತ ಹಾಗೂ ದಕ್ಷಿಣ ಸಮಶೀತೋಷ್ಣ ವಲಯದಲ್ಲಿ ಕಾಣಬರುತ್ತವೆ. ಮುಖ್ಯವಾಗಿ [[ಆಸ್ಟ್ರೇಲೇಷ್ಯಾ]], [[ಭಾರತ]], [[ಶಾಂತಸಾಗರ]]ದ ದ್ವೀಪಗಳು, ಆಗ್ನೇಯ [[ಏಷ್ಯಾ]], [[ಉತ್ತರ ಅಮೆರಿಕ]]ದ ದಕ್ಷಿಣ ಭಾಗಗಳು, [[ದಕ್ಷಿಣ ಅಮೆರಿಕ]] ಮತ್ತು [[ಆಫ್ರಿಕಾ]]ಗಳಲ್ಲಿ ಹೆಚ್ಚಾಗಿ ಗಿಳಿಗಳು ಜೀವಿಸಿವೆ. ಈ ಪೈಕಿ ಆಸ್ಟ್ರೇಲೇಷ್ಯಾ ಮತ್ತು ದಕ್ಷಿಣ ಅಮೆರಿಕಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ತಳಿಗಳು ಕಾಣಬರುತ್ತವೆ. ಲೋರಿ ಮತ್ತು ಲೋರಿಕೀಟ್‌ಗಳು ಹೆಚ್ಚಾಗಿ ಉತ್ತರದಲ್ಲಿ [[ಸುಲವೇಸಿ]] ಮತ್ತು [[ಫಿಲಿಪ್ಪೀನ್ಸ್]] ಇಂದ ಉತ್ತರ [[ಆಸ್ಟ್ರೇಲಿಯಾ]]ವರೆಗೆ ಮತ್ತು ಶಾಂತಸಾಗರದ ಎಲ್ಲ ದ್ವೀಪಗಳಲ್ಲಿ ವಾಸಿಸುತ್ತವೆ. ಇವುಗಳ ಪೈಕಿ ಅತಿ ಹೆಚ್ಚಿನ ವೈವಿಧ್ಯ [[ನ್ಯೂ ಗಿನಿ]]ಯಲ್ಲಿ ಕಾಣುವುದು. [[ಅರೀನೇ]] ಎಂಬ ಉಪಜಾತಿಯ ಗಿಳಿಗಳು ಅಮೆಜಾನ್ ಗಿಳಿಗಳು, ಮಕಾವ್ ಮತ್ತು ಕೊನ್ಯೂರ್ ತಳಿಗಳನ್ನು ಒಳಗೊಂಡಿದ್ದು [[ಮೆಕ್ಸಿಕೋ]]ದಿಂದ ತೊಡಗಿ ದಕ್ಷಿಣ ಅಮೆರಿಕದ ಎಲ್ಲ ಭಾಗಗಳಲ್ಲಿ ಕಂಡುಬರುವುವು. ಪಿಗ್ಮಿ ಗಿಳಿ ಎಂದು ಹೆಸರಾಗಿರುವ ಅತಿ ಪುಟ್ಟ ಗಾತ್ರದ ಗಿಳಿಗಳು ನ್ಯೂ ಗಿನಿಯಲ್ಲಿ ಮಾತ್ರ ಜೀವಿಸಿವೆ. ಅಗಲ ಪುಚ್ಛವುಳ್ಳ ಪ್ಲಾಟಿಸೆರ್ಸಿನೇ ಉಪಕುಟುಂಬಕ್ಕೆ ಸೇರಿದ್ದು ಅವು ಆಸ್ಟ್ರೇಲಿಯಾ , [[ನ್ಯೂಜಿಲ್ಯಾಂಡ್]] ಮತ್ತು ಸುತ್ತಲಿನ ದ್ವೀಪಗಳಲ್ಲಿ ಕಾಣುತ್ತವೆ. ಕೆಲ ಜಾತಿಯ ಗಿಳಿಗಳು ಒಂದೇ ಸ್ಥಳದಲ್ಲಿ ಶಾಶ್ವತವಾಗಿ ನೆಲೆಯಾದರೆ ಇನ್ನು ಕೆಲವು ತಳಿಗಳು ವಲಸೆಗಾರ ಪಕ್ಷಿಗಳ ಗುಂಪಿಗೆ ಸೇರುತ್ತವೆ. ಹೆಚ್ಚಿನ ತಳಿಗಳ ಗಿಳಿಗಳು ಆಗಾಗ ವಲಸೆಹೋಗುವ ಹಕ್ಕಿಗಳಾಗಿವೆ.
 
== ಶರೀರದ ರಚನೆ ==
[[ಚಿತ್ರ:Rainbow Lorikeet Trichoglossus haematodus Perched 1900px.jpg|thumb|right|ರೈನ್‌ಬೋ ಲೋರಿಕೀಟ್]]
"https://kn.wikipedia.org/wiki/ಗಿಳಿ" ಇಂದ ಪಡೆಯಲ್ಪಟ್ಟಿದೆ