ಕೇರಳ ವಿಶ್ವವಿದ್ಯಾನಿಲಯದ ಭಾಷಾವಿಜ್ಞಾನ ವಿಭಾಗ ನಡೆಸಿದ ಅಧ್ಯಯನದಲ್ಲಿ ಒಟ್ಟು ೧೨ ಪ್ರಾದೇಶಿಕ ಭೇದಗಳು ಮಲೆಯಾಳದಲ್ಲಿವೆಯಂದು ತಿಳಿದುಬಂದಿತು. <br/> ದಕ್ಷಿಣ ಕೇರಳ (ತಿರುವಾಂಕೂರು), ಮಧ್ಯಕೇರಳ (ಕೋಟ್ಟಯಂ), ತ್ರಿಶೂರು, ಮಲಬಾರ್ ಎಂಬ ನಾಲ್ಕು ಭಾಷಾಭೇದಗಳು ಪ್ರಮುಖವಾಗಿ ಮಲೆಯಾಳದಲ್ಲಿವೆ. ಈ ಭೇದಗಳು <br/>ಉಚ್ಚಾರಣೆಯಲ್ಲಿ ಮಾತ್ರವೇ ನೆಲೆಗೊಂಡಂಥವು. ಮುದ್ರಣದ ಭಾಷೆಯಲ್ಲಿ ಕೋಟ್ಟಯಂ ಪ್ರಭೇದದ ಪ್ರಾಧಾನ್ಯ ಎದ್ದುಕಾಣುತ್ತದೆ.