ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೪ ನೇ ಸಾಲು:
 
ಕೌಲಾಲಂಪುರ/ಕೀವ್: ಮಲೇಷ್ಯಾ ಏರ್‌ಲೈನ್ಸ್ ಬೋಯಿಂಗ್ 777 ವಿಮಾನವು ರಷ್ಯಾ ಗಡಿ ಸಮೀಪದ ಯುದ್ಧಪೀಡಿತ ಪೂರ್ವ ಉಕ್ರೇನ್‌ನಲ್ಲಿ ಗುರುವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 295 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್‌ನ ಒಳಾಡಳಿತ ಸಚಿವಾಲಯ ಹೇಳಿದೆ. ರಷ್ಯಾ ಪರ ಇರುವ ಉಕ್ರೇನ್ ಬಂಡುಕೋರರು ಈ ಕೃತ್ಯದ ಹೊಣೆ ಹೊತ್ತುಕೊಂಡಿದ್ದಾರೆ.
{{Quote_box| width=40%|align=right|quote='''ಉಕ್ರೇನ್ ರಾಜಕೀಯ''' -- ಉಕ್ರೇನ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗ ಅದನ್ನು ನಿವಾರಿಸುವ ದಿಸೆಯಲ್ಲಿ ಅಮೆರಿಕ ಮತ್ತು ಇತರ ದೇಶಗಳು ನಡೆಸಿದ ಪ್ರಯತ್ನ ಒಳ್ಳೆಯದೇ ಆಗಿತ್ತು. ಆದರೆ ಅಂಥ ಪ್ರಯತ್ನದಲ್ಲಿ ರಷ್ಯಾವನ್ನೂ ಸೇರಿಸಿಕೊಳ್ಳದಿದ್ದುದು ದೊಡ್ಡ ತಪ್ಪು. ರಷ್ಯಾವನ್ನು ದೂರ ಇಟ್ಟು ಉಕ್ರೇನ್ ದೇಶದ ಮೇಲೆ ಹಿಡಿತ ಸಾಧಿಸಲು ಯೂರೋಪ್ ಮತ್ತು ಅಮೆರಿಕ ಪ್ರಯತ್ನಿಸಿದವು. ನೂರಾರು ವರ್ಷಗಳಿಂದ ಉಕ್ರೇನ್ ಮತ್ತು ರಷ್ಯಾ ಜತೆಯಲ್ಲಿಯೇ ಬೆಳೆದುಕೊಂಡು ಬಂದಿವೆ. ಇಂಥ ಬಾಂಧವ್ಯ ಮುರಿಯುವ ಯತ್ನ ಸಹಜವಾಗಿಯೇ ರಷ್ಯಾಕ್ಕೆ ಅಸಮಾಧಾನ ಉಂಟುಮಾಡಿದೆ. ಇದು ಬೇರೆ ದೇಶಗಳಿಗೆ ತಿಳಿಯದಿರುವುದೇನಲ್ಲ. ರಷ್ಯಾದ ಮಗ್ಗುಲಿಗೇ ಹೋಗಿ ಕುಳಿತುಕೊಳ್ಳುವ ಲೆಕ್ಕಾಚಾರ ಅಮೆರಿಕ ಮತ್ತು ಯೂರೋಪಿನ ಕೆಲವು ದೇಶಗಳಿಗೆ ಇತ್ತು. ಇದನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ ಬಂಡಾಯಕ್ಕೆ ರಷ್ಯಾ ಪ್ರೋತ್ಸಾಹ ನೀಡುತ್ತ ಬಂದಿದೆ. ಹೀಗಾಗಿ ರಷ್ಯಾದ ಜತೆ ಇರಬೇಕೆಂದು ಬಯಸುವವರು ಹೋರಾಡುತ್ತಿದ್ದಾರೆ. ಈ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡು ನರಳುತ್ತಿರುವುದು ಉಕ್ರೇನ್. ವಿಮಾನ ದುರಂತ ಸಂಭವಿಸಿದ ಪ್ರದೇಶ ಉಕ್ರೇನ್‌ನಲ್ಲಿರುವುದರಿಂದ ಆ ಸಂಬಂಧವಾದ ಎಲ್ಲ ಜವಾಬ್ದಾರಿಯನ್ನು ಉಕ್ರೇನ್ ಹೊರಬೇಕು ಎಂದು ಪುಟಿನ್ ವಾದ ಮಾಡುತ್ತಾರೆ. ಉಕ್ರೇನ್ ವಿಚಾರವನ್ನು ಮುಂದಿಟ್ಟುಕೊಂಡು ಈಗಾಗಲೇ ರಷ್ಯಾದ ಮೇಲೆ ಅಮೆರಿಕ ಹಲವು ರೀತಿಯ ನಿರ್ಬಂಧಗಳನ್ನು ಹೇರಿದೆ.|| "|source=ವಿಜಯ ಕರ್ನಾಟಕ.([[೪]])|-}}
 
ಎಂಎಚ್370ಎಂಎಚ್ 370 ಮಲೇಷ್ಯಾ ವಿಮಾನವು ನಿಗೂಢವಾಗಿ ಕಣ್ಮರೆಯಾದ ನಾಲ್ಕು ತಿಂಗಳ ನಂತರ ಮತ್ತೊಂದು ಮಹಾನ್ ದುರಂತವನ್ನು ಮಲೇಷ್ಯಾ ಕಂಡಂತಾಗಿದೆ. 33 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನವನ್ನು 77 ಸಾವಿರ ಆಡಿ ಎತ್ತರ ಜಿಗಿಯಬಲ್ಲ ಸಾಮರ್ಥ್ಯವಿರುವ ಕ್ಷಿಪಣಿಯಿಂದ ಹೊಡೆದುರುಳಿಸಲಾಗಿದೆ.
 
ಅಮ್‌ಸ್ಟರ್‌ಡಮ್‌ನಿಂದ ಕೌಲಾಲಂಪುರಕ್ಕೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 280 ಪ್ರಯಾಣಿಕರು ಮತ್ತು 15 ವಿಮಾನ ಸಿಬ್ಬಂದಿ ಸೇರಿದಂತೆ 295 ಜನ ಪ್ರಯಾಣಿಸುತ್ತಿದ್ದು ಎಲ್ಲರೂ ಸಾವಿಗೀಡಾಗಿದ್ದಾರೆ. ಮೃತ ಶರೀರದ ಚೂರುಗಳು 15 ಕಿಮೀ ವರೆಗೆ ಚೆಲ್ಲಿ ಬಿದ್ದಿದ್ದವು. ರಷ್ಯಾ ಗಡಿಗೆ 40 ಕಿ.ಮೀ ದೂರದ ರಷ್ಯಾ ಪರ ಬಂಡುಕೋರರ ಪ್ರದೇಶವಾದ ಗ್ರಾಬೋವೊ ಗ್ರಾಮದಲ್ಲಿ ವಿಮಾನ ಹೊತ್ತಿಉರಿಯುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ