ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨ ನೇ ಸಾಲು:
[[ಚಿತ್ರ:1-PA190143.JPG|thumb|right|300px|'ತಾಳ್ಯದ ಆಂಜನೇಯಸ್ವಾಮಿ ದೇವಸ್ಥಾನ' (೨೦೧೩)]]
[[ಚಿತ್ರ:1-Shimoga visit (2012-13) HP 142.JPG|thumb|right|300px|'ತಾಳ್ಯದ ಆಂಜನೇಯಸ್ವಾಮಿ']]
ತಾಳ್ಯ, ಚಿತ್ರದುರ್ಗ ಜಿಲ್ಲೆಯ ಇತರ ಹಳ್ಳಿಗಳಂತೆ, ಕುಡಿಯುವ ನೀರಿನವ್ಯವಸ್ಥೆಯೂ ಇಲ್ಲದ ಒಂದು ಅತ್ಯಂತ ಚಿಕ್ಕಹಳ್ಳಿಯಾಗದೆ ಇರಲು ಕಾರಣ, ಇಲ್ಲಿಯ ವಿಶಾಲವಾದ ಕೆರೆಯ ಅಸ್ತಿತ್ವದಿಂದ. ಹೋಬಳಿ ಕೇಂದ್ರವಾದ ತಾಳ್ಯದ ಸುತ್ತಮುತ್ತಲೂ ಅನೇಕ ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದು ಅರ್ಥಚಂದ್ರಾಕೃತಿಯ ಮಾದರಿಯ ಭೂಭಾಗದಲ್ಲಿ ಗ್ರಾಮದ ಪೂರ್ವದಿಕ್ಕಿನಲ್ಲಿ ಸುಂದರವಾದ ಹಾಗೂ ವಿಶಾಲವಾದ ಕೆರೆಯನ್ನು ಹೊಂದಿದೆ. ಈ ಕೆರೆಯು ೧೮೦ ಎಕರೆ ೨೩ ಗುಂಟೆ ವಿಸ್ತೀರ್ಣವನ್ನು ಹೊಂದಿದ್ದು ಇದರ ಅಂಕು-ಡೊಂಕಾದ ಏರಿ ೭೦೦-೮೦೦ ಮೀಟರ್ ವ್ಯಾಪ್ತಿ ಹೊಂದಿದೆ. ಈ ಕೆರೆ ಬತ್ತಿದ ದಿನಗಳೇ ಅಪರೂಪವೆಂದು ಗ್ರಾಮದ ಜನ ನೆನೆಸಿಕೊಳ್ಳುತ್ತಾರೆ. ಇಂಥ ತಾಣದಲ್ಲಿ ಹನುಮಪ್ಪ ಅಥವಾ ಆಂಜನೇಯಸ್ವಾಮಿಯ ದೇವಸ್ಥಾನವಿದ್ದು ಜಿಲ್ಲೆಯಲ್ಲಿ ಪ್ರಸಿದ್ಧಿಯಾಗಿದೆ. ತಾಳ್ಯದ ತೇರು ಸಾಮಾನ್ಯವಾಗಿ ಎಪ್ರಿಲ್ ತಿಂಗಳಿನಲ್ಲಿ ಅಂದರೆ, ಬೆಂಗಳೂರಿನಲ್ಲಿ ಕರಗವಾಗುವ ಸಮಯದಲ್ಲಿ ನಡೆಯುತ್ತದೆ.ಹೊಳಲ್ಕೆರೆ ಚಿತ್ರದುರ್ಗ ಬಸ್ ಮಾರ್ಗದಲ್ಲಿ ಸಿಗುವ ಶಿವಗಂಗ ಗ್ರಾಮದಿಂದ ೮ ಕಿ.ಮೀ.ದೂರದಲ್ಲಿದೆ. ತಾಳ್ಯ ಗ್ರಾಮದ ಆರಂಭದಲ್ಲೇ ಆಂಜನೇಯ ಸ್ವಾಮಿಯ ಗುಡಿಯಿದೆ. <ref>[http://www.prajavani.net/article/%E0%B2%A4%E0%B2%BE%E0%B2%B3%E0%B3%8D%E0%B2%AF%E0%B2%A6-%E0%B2%B9%E0%B2%A8%E0%B3%81%E0%B2%AE%E0%B2%A8-%E0%B2%A8%E0%B3%8B%E0%B2%A1%E0%B2%BF%E0%B2%A6%E0%B2%BF%E0%B2%B0%E0%B2%BE ತಾಳ್ಯದ ಹನುಮನ ನೋಡಿದಿರಾ Tue, 05/08/2012 M. Ahalya, prajavani]</ref>
[[ಚಿತ್ರ:Image (56) (1).jpg|thumb|right|150px|'ಹನುಮ ಬಂಧು,ವಜ್ರ ಮಹೋತ್ಸವ ಸ್ಮರಣ ಸಂಚಿಕೆ']]
==ದೇವಸ್ಥಾನದ ವೈಶಿಷ್ಟ್ಯಗಳು==
೫೮ ನೇ ಸಾಲು:
==’ಲಜ್ಜಾ ಗೌರಿ'==
ದೇವಾಲಯದ ಹೊರಭಾಗ ಸಾಧಾರಣ. ತಳಭಾಗದ ಆದಿಷ್ಠಾನವು ಚಚ್ಚೌಕಾರದ ಅಲಂಕಾರವಿಲ್ಲದ ಮೌಲ್ಡ್ ಗಳಿಂದ ಸೇರಿಸಲ್ಪಟ್ಟಿದೆ. ಭಿತ್ತಿಯ ಭಾಗಗಳು ಸಾಧಾರಣ. ಚಜ್ಜದ ಭಾಗ ಇಳಿಜಾರಾಗಿದೆ. ದೇವಾಲಯದ ಹೊರಭಾಗದಲ್ಲಿ ಉಬ್ಬುಶಿಲ್ಪದಲ್ಲಿ 'ನಗ್ನ ಹೆಣ್ಣೊಬ್ಬಳು' ತಾನೆ ಹೆರಿಗೆ ಮಾಡಿಕೊಳ್ಳುತ್ತಿರುವ, ’ಲಜ್ಜಾಗೌರಿ' ವಿಗ್ರಹವಿದೆ. ಹಿಂದೆ ಇಲ್ಲಿನ ಮನೆಗಳಲ್ಲಿ ಹೆರಿಗೆ ಸಂಕಷ್ಟದಲ್ಲಿರುವವರಿಗೆ ಈ ವಿಗ್ರಹವನ್ನು ಪೂಜಿಸಿ ಅದರ ಮೇಲಿನ ನೀರನ್ನು ಕುಡಿಸಿದರೆ ಹೆರಿಗೆ ಸುಲಭವಾಗಿ ಆಗುವುದೆಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಮೇಲಿನ ಗೋಪುರ, ಅಥವಾ ವಿಮಾನವು ಗಚ್ಚುಗಾರೆ ಮತ್ತು ಇಟ್ಟಿಗೆಗಳನ್ನು ಬಳಸಿ ನಿರ್ಮಿಸಲಾಗಿದೆ. ಮೂರ್ತಿ ಶಿಲ್ಪಗಳಿವೆ. ವಿಮಾನ ಮಧ್ಯಭಾಗದಲ್ಲಿ ಎರಡು ಹಂತಗಳಲ್ಲಿ ಚಿಕ್ಕ ಚಿಕ್ಕ ರಂಧ್ರಗಳ ಮಾದರಿಯ ಗೂಡುಗಳಿವೆ. ತನ್ನದೇ ಆದ ವಿಶಿಷ್ಟ ಲಕ್ಷಣಳ ಜೊತೆಗೆ ಹೊಂದಿಸಿರುವ, ಪ್ರಾದೇಶಿಕ ಶೈಲಿಗೆ ಇದೊಂದು ಅತ್ಯುತ್ತಮ ಉದಾಹರಣೆ.
==ಉಲ್ಲೇಖಗಳು==
 
<References />
 
* ೧. ತಾಳ್ಯ ಇತಿಹಾಸ ಪರಿಚಯ-ಎಸ್.ಎಲ್.ಗೌಡ, ತಾಳ್ಯ, ’ಹನುಮ ಬಂಧು’,’ವಜ್ರಮಹೋತ್ಸವ ಸ್ಮರಣ ಸಂಚಿಕೆ’, ಪುಟ, ೩೮-೩೯