ವೇದವ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಇತರ ಕೃತಿಗಳು: ಚಿತ್ರ ಅಳವಡಿಕೆ
No edit summary
೨ ನೇ ಸಾಲು:
{{ಹಿಂದೂ ತತ್ವಶಾಸ್ತ್ರ}}
 
'''ವ್ಯಾಸ''' ಅಥವಾ '''ವೇದವ್ಯಾಸ''' [[ಹಿಂದೂ ಧರ್ಮ]] ಪರಂಪರೆ ಮತ್ತು ಸಾಹಿತ್ಯದಲ್ಲಿ ಬಹಳ ಪ್ರಮುಖರು. [[ಬ್ರಹ್ಮ]]ನ ಸಾರ್ಥಕತೆಯನ್ನು ತಿಳಿದ ಇವರನ್ನು ಆದರ್ಶ [[ಬ್ರಹ್ಮರ್ಷಿ]] ಎಂದು ಕರೆಯಲಾಗುತ್ತದೆ.
 
==ವ್ಯಾಸರ ಪುರಾಣ ಕಥೆ==
ವ್ಯಾಸರು ಬಹುಮುಖ್ಯ ಹಿಂದೂ ಮಹಾಕಾವ್ಯವಾದ [[ಮಹಾಭಾರತ]]ದ ಕರ್ತೃ. ಶತಮಾನಗಳಷ್ಟು ಹಳೆಯದಾದ ಭಾರತದ ಚಾರಿತ್ರಿಕ ಘಟನೆಗಳನ್ನು ಆಧರಿಸಿ ಮಹಾಭಾರತವು ರಚಿತವಾಗಿದ್ದರೂ ಕೂಡ, ಇದು ಪ್ರಾಚೀನ ಭಾರತದ ದಂತಕಥೆಗಳು, ಪುರಾಣಗಳು, ದಾರ್ಶನಿಕತೆ ಮತ್ತು ಅರೆಚಾರಿತ್ರಿಕ ಘಟನೆಗಳ ಒಂದು ಬೃಹತ್ ಕಾವ್ಯ. ಈ ಕಾರಣದಿಂದ ಚಾರಿತ್ರಿಕವಾಗಿ ವ್ಯಾಸರ ಕಾಲ ಮತ್ತು ದೇಶಗಳನ್ನು ದಂತಕಥೆಗಳಿಂದ ಬೇರ್ಪಡಿಸುವುದು ಬಹಳ ಕಷ್ಟ.
 
ಮಹಾಭಾರತದ ಪ್ರಕಾರ, ವ್ಯಾಸರು [[ಪರಾಶರ]] ಮುನಿ ಮತ್ತು ಮೀನುಗಾರನ ಮಗಳಾದ [[ಸತ್ಯವತಿ]]ಯ ಪುತ್ರ. ಜನ್ಮ [[ಯಮುನಾ]] ನದಿಯ ಒಂದು ದ್ವೀಪದಲ್ಲಿ. ಇದು ಈಗಿನ ಕಾಲದ [[ಉತ್ತರ ಪ್ರದೇಶ]]ದ ಜಲುವಾ ಜಿಲ್ಲೆಯ ಕಲ್ಪಿ ಎನ್ನುವ ಸ್ಥಳದ ಬಳಿಯಿದೆ. ವ್ಯಾಸರ ಬಣ್ಣ ಕಪ್ಪಾಗಿದ್ದ ಕಾರಣ 'ಕೃಷ್ಣ' ಎಂದು ಕರೆಯಲಾಗುತ್ತಿತ್ತು. ದ್ವೀಪದಲ್ಲಿ ಜನಿಸಿದ ಕಾರಣ 'ದ್ವೈಪಾಯನ' ಎಂದೂ ಹೆಸರಿತ್ತು. ಈ ಕಾರಣದಿಂದ ಇವರನ್ನು "ಕೃಷ್ಣ-ದ್ವೈಪಾಯನ" ಎಂದೂ ಕರೆಯಲಾಗುತ್ತದೆ. ಮಗುವಾಗಿ ಹುಟ್ಟಿದ ಕ್ಷಣವೇ ದೊಡ್ಡವರಾಗಿ ಬೆಳೆದು, ತಾಪಸ ಜೀವನ ನಡೆಸಿ ಅತಿ ಪ್ರಮುಖ [[ಋಷಿ]]ಗಳಲ್ಲಿ ಒಬ್ಬರಾಗಿ ಪರಿಗಣಿತರಾಗಿದ್ದಾರೆ.
 
[[ಪುರಾಣ]]ಗಳಲ್ಲಿ ಇವರನ್ನು [[ವಿಷ್ಣು]]ವಿನ ಒಂದು [[ಅವತಾರ]]ವೆಂದೇ ಪರಿಗಣಿಸಲಾಗಿದೆ. ಹಿಂದೂ ಪುರಾಣದ ಪ್ರಕಾರ ಇವರು ಏಳು [[ಚಿರಂಜೀವಿ]]ಗಳಲ್ಲಿ ಒಬ್ಬರು.
೧೩ ನೇ ಸಾಲು:
 
=='ವೇದ' ವ್ಯಾಸ==
ಹಿಂದೂಗಳು ನಂಬುವ ಪ್ರಕಾರ ಇವರು ಪ್ರಾಚೀನ ಕಾಲದ ಒಂದು [[ವೇದ]]ವನ್ನು ನಾಲ್ಕು ವೇದಗಳನ್ನಾಗಿ ವಿಂಗಡಿಸಿದ ಕಾರಣ '''ವೇದ ವ್ಯಾಸವೇದವ್ಯಾಸ''' ಎಂಬ ಹೆಸರು ಬಂತು. ಈ ಹೆಸರಿನಲ್ಲಿಯೇ ಇವರು ಬಹಳ ಪರಿಚಿತರು.
 
ವ್ಯಾಸರು ಒಬ್ಬ ವ್ಯಕ್ತಿಯೇ ಅಥವಾ ಮೇಧಾವಿಗಳ ಗುಂಪೇ ಎಂದು ತರ್ಕಿಸಲಾಗಿದೆ. ವಿಷ್ಣು ಪುರಾಣದಲ್ಲಿ ಇದರ ಬಗ್ಗೆ ಒಂದು ಕುತೂಹಲಕಾರೀ ವಿವರಣೆಯಿದೆ. ಇದರ ಪ್ರಕಾರ:
೧೯ ನೇ ಸಾಲು:
''ಪ್ರತಿ ಮೂರನೇ (ದ್ವಾಪರ)ಯುಗದಲ್ಲಿ ವಿಷ್ಣು ವ್ಯಾಸರ ರೂಪದಲ್ಲಿ ಬಂದು ಮಾನವಕುಲದ ಉದ್ಧಾರಕಾಗಿ ವೇದವನ್ನು ವಿಂಗಡಿಸುತ್ತಾನೆ.''
 
''ವೇದವನ್ನು ಇಪ್ಪತ್ತೆಂಟು ಬಾರಿ ವೈವಸ್ವತ ಮನ್ವಂತರದ ಮಹರ್ಷಿಗಳಿಂದ ವಿಂಗಡಿಸಲಾಗಿದೆ. ಆದ್ದರಿಂದ ಇಪ್ಪತ್ತೆಂಟು ವ್ಯಾಸರು ಬಂದು ಹೋಗಿದ್ದಾರೆ. ಇದರಲ್ಲಿ ಪ್ರಥಮವಾಗಿ ವೇದವನ್ನು ವಿಂಗಡಿಸಿದ ಸ್ವಯಂಭೂ ([[ಬ್ರಹ್ಮ]]); ಅದರ ನಂತರ ವೇದವನ್ನು ವಿಂಗಡಿಸಿದ್ದು ಪ್ರಜಾಪತಿ... (ಹೀಗೇ ಇಪ್ಪತ್ತೆಂಟು ಬಾರಿ).''
 
==[[ಮಹಾಭಾರತ]]ದ ಲೇಖಕ==
[[File:Angkor Wat 006.JPG|thumb|ವ್ಯಾಸ ಗಣೇಶನಿಗೆ ಮಹಾಭಾರತವನ್ನು ವಿವರಿಸುತ್ತಿರುವುದು, [[ಆಂಗ್‌ಕರ್ ವಾಟ್]].]]
 
ಪಾರಂಪರಿಕವಾಗಿ ವ್ಯಾಸರು ಈ ಮಹಾಕಾವ್ಯದ ಲೇಖಕರು. ಆದರೆ ಈ ಮಹಾಕಾವ್ಯದಲ್ಲಿ ಇವರ ಒಂದು ಪಾತ್ರವೂ ಇದೆ. ಇವರ ತಾಯಿ ನಂತರ [[ಹಸ್ತಿನಾಪುರ]]ದ ರಾಜ ಶಂತನುವನ್ನು ಮದುವೆಯಾಗಿ ಇಬ್ಬರು ಗಂಡು ಮಕ್ಕಳನ್ನು ಹೆತ್ತಳು. ಈ ಇಬ್ಬರೂ ಸಂತಾನವಿಲ್ಲದೇ ತೀರಿಕೊಂಡರು. ಪ್ರಾಚೀನ ಪದ್ಧತಿ [[ನಿಯೋಗ]]ವನ್ನು ಅನುಸರಿಸಿ ಸತ್ಯವತಿಯು ವ್ಯಾಸರಿಗೆ ತನ್ನ ಸತ್ತ ಮಗನಾದ [[ವಿಚಿತ್ರವೀರ್ಯ]]ನ ಪರವಾಗಿ ಗಂಡು ಮಕ್ಕಳನ್ನು ಹುಟ್ಟಿಸುವಂತೆ ಕೋರುತ್ತಾಳೆ. ಈ ಪ್ರಕಾರ ವ್ಯಾಸರು ತೀರಿಕೊಂಡ ರಾಜನ ಪತ್ನಿಯರಾದ [[ಅಂಬಿಕೆ]] ಮತ್ತು [[ಅಂಬಾಲಿಕೆ]]ಯಿಂದ [[ಧೃತರಾಷ್ಟ್ರ]] ಮತ್ತು [[ಪಾಂಡು]]ವಿನ ತಂದೆಯಾಗುತ್ತಾರೆ. ಇದೇ ಸಂಪ್ರದಾಯದಿಂದ ರಾಣಿಯರ ಸೇವಕಿಯಿಂದ [[ವಿದುರ]]ನ ಜನ್ಮವಾಗುತ್ತದೆ.
 
ಪೂರ್ಣಶಃ ಈ ಮೂರು ಜನ ವ್ಯಾಸರ ಪುತ್ರರಾಗಿ ಪರಿಗಣಿತರಾಗುವುದಿಲ್ಲ. ಇವರ ಇನ್ನೊಬ್ಬ ಪುತ್ರ [[ಶುಕ]]ನು ಇವರ ನಿಜವಾದ ಆಧ್ಯಾತ್ಮಿಕಪುತ್ರನೆಂದು ಕರೆಸಿಕೊಳ್ಳುತ್ತಾನೆ.
೩೦ ನೇ ಸಾಲು:
ಈ ಪ್ರಕಾರ ವ್ಯಾಸರು ಮಹಾಭಾರತ ಯುದ್ಧದಲ್ಲಿ ಕಾದಾಡಿದ [[ಕೌರವ]]ರು ಮತ್ತು [[ಪಾಂಡವ]]ರ ತಾತರಾಗುತ್ತಾರೆ. ತದನಂತರ ಮಹಾಭಾರತದಲ್ಲಿ ಆಧ್ಯಾತ್ಮಿಕ ಗುರುವಾಗಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ.
 
ಮಹಾಭಾರತದ ಮೊದಲ ಗ್ರಂಥದಲ್ಲಿ ಇವರು ಈ ಮಹಾಕಾವ್ಯವನ್ನು ರಚಿಸಲು [[ಗಣೇಶ]]ನನ್ನು ಕೇಳಿಕೊಂಡರು. ಈ ಪ್ರತೀತಿಯ ಪ್ರಕಾರ ಗಣೇಶನು ವ್ಯಾಸರಿಗೆ ಮಹಾಕಾವ್ಯವನ್ನು ಒಂದು ಕ್ಷಣವನ್ನೂ ನಿಲ್ಲಿಸಿದೇ ಹೇಳಲು ಷರತ್ತು ವಿಧಿಸಿದನು. ಇದಕ್ಕೆ ಪ್ರತಿಯಾಗಿ ವ್ಯಾಸರು ಹಾಕಿದ ಷರತ್ತೇನೆಂದರೆ ತಾವು ಹೇಳಿದ ಪ್ರತಿ ಶ್ಲೋಕವನ್ನು ಗಣೇಶನು ಅರ್ಥಮಾಡಿಕೊಂಡಅರ್ಥ ಮಾಡಿಕೊಂಡ ನಂತರವಷ್ಟೇ ಬರೆಯಬೇಕೆಂದು. ಹೀಗೆ ವ್ಯಾಸರಿಗೆ ವಿಶ್ರಾಂತಿ ಬೇಕಿದ್ದಾಗ ಕಷ್ಟಕರವಾದ [[ಸಂಸ್ಕೃತ]] ಶ್ಲೋಕಗಳನ್ನು ಹೇಳುತ್ತಿದ್ದರು.
 
==ಇತರ ಕೃತಿಗಳು==
* ಇವರಿಗೆ ಹದಿನೆಂಟು '''ಮಹಾಪುರಾಣ'''ಗಳನ್ನು ಬರೆದ ಕೀರ್ತಿಯೂ ಕೊಡಲಾಗುತ್ತದೆ. ಇವರ ಮಗನಾದ ಶುಕನು ಭಾಗವತ ಪುರಾಣದ ನಿರೂಪಕ.
 
* '''ಬ್ರಹ್ಮ ಸೂತ್ರ'''ವನ್ನು ಬರೆದ ಕವಿ ಬಾದರಾಯಣ. ವ್ಯಾಸರು ಹುಟ್ಟಿದ ದ್ವೀಪದಲ್ಲಿ ಬಾದರವೃಕ್ಷಗಳಿದ್ದ ಕಾರಣ ಇವರಿಗೆ ಬಾದರಾಯಣ ಎಂಬ ಹೆಸರೂ ಇದೆ. ಆದರೆ ಇತಿಹಾಸಕಾರರ ಪ್ರಕಾರ ಇವರಿಬ್ಬರೂ ಬೇರೆ ವ್ಯಕ್ತಿಗಳು.
 
* [[ಯೋಗಭಾಷ್ಯ]] [[ಪತಂಜಲಿ]]ಯ [[ಯೋಗಸೂತ್ರಗಳು]] ಎಂಬ ಕೃತಿಯ ವ್ಯಾಖ್ಯಾನ. ವ್ಯಾಸರ ಚಿರಂಜೀವತ್ವವನ್ನು ನಂಬಿದರೆ ಮಾತ್ರ ಅವರನ್ನು ಯೋಗ ಭಾಷ್ಯದ ಲೇಖಕ ಎಂದು ಹೇಳಬಹುದು. ಏಕೆಂದರೆ ಇದು ವ್ಯಾಸರ ಕಾಲದ ನಂತರ ಬರೆದದ್ದು.
[[File:Ganesa writing the Mahabharat.jpeg|thumb|left|ಮಹಾಭಾರತವನ್ನು ಬರೆಯುತ್ತಿರುವ ಗಣೇಶ]]
 
Line ೪೬ ⟶ ೪೮:
==ಉಲ್ಲೇಖಗಳು==
* ಕೃಷ್ಣದ್ವೈಪಾಯನ ವ್ಯಾಸರ ಮಹಾಭಾರತ - ಕೇಸರಿ ಮೋಹನ ಗಂಗೂಲಿಯವರಿಂದ ಅನುವಾದ, ೧೮೮೩-೧೮೯೬
 
* ಅರ್ಥಶಾಸ್ತ್ರ, ಶಾಮಶಾಸ್ತ್ರಿಯವರಿಂದ ಅನುವಾದ, ೧೯೧೫
 
* ವಿಷ್ಣುಪುರಾಣ, ಎಚ್.ಎಚ್. ವಿಲ್ಸನ್ ರಿಂದ ಅನುವಾದ, ೧೮೪೦
 
* ಭಾಗವತ ಪುರಾಣ, ಭಕ್ತಿವೇದಾಂತಸ್ವಾಮಿ ಪ್ರಭುಪಾದ ಅನುವಾದ, ೧೯೮೮
 
* ಬುದ್ಧನ ಪೂರ್ವ ಜನ್ಮಗಳ ಜಾತಕ ಕಥೆಗಳು, ಸಂಕಲನ ಇ.ಬಿ. ಕೊವೆಲ್, ೧೮೯೫
 
Line ೬೧ ⟶ ೬೭:
 
[[ವರ್ಗ:ಚಿರಂಜೀವಿಗಳು]]
 
[[ವರ್ಗ:ಕವಿಗಳು]]
 
[[ವರ್ಗ:ಹಿಂದೂ ಋಷಿಗಳು]]
 
[[ವರ್ಗ:ಮಹಾಭಾರತ]]
 
[[ವರ್ಗ:ಮಹಾಭಾರತದ ಪಾತ್ರಗಳು]]
 
[[ವರ್ಗ:ಹಿಂದೂ ಧರ್ಮ]]
 
[[ವರ್ಗ:ಮಹಾಭಾರತದ ಪಾತ್ರಗಳು]]
"https://kn.wikipedia.org/wiki/ವೇದವ್ಯಾಸ" ಇಂದ ಪಡೆಯಲ್ಪಟ್ಟಿದೆ