ಟೊಮೇಟೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಔಷಧೀಯ ಗುಣ: ಮುಂದುವರೆದಿದೆ
೪೪ ನೇ ಸಾಲು:
ಹೃದಯದ ರಕ್ತ ನಾಳದಲ್ಲಿರುವ ಕೊಬ್ಬು ನಿವಾರಣೆಗೆ ಟೊಮೆಟೋ ಸಾರದ ಮಾತ್ರೆ ಉಪಯೋಗಕರ.
[[ಚರ್ಚೆಪುಟ:ಟೊಮೇಟೊ]]
== ಕರ್ನಾಟಕ ಮತ್ತು ಟೊಮೇಟೋ ==
ಕರ್ನಾಟಕದಲ್ಲಿ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಅರ್ಕಾರಕ್ಷಕ್‌’ ಟೊಮೆಟೊ ಬೆಳೆ ರೈತರ ಪಾಲಿಗೆ ವರದಾನವಾಗಿದೆ.ಅರ್ಕಾರಕ್ಷಕ್‌ ಟೊಮೆಟೊ ತಳಿಯು ಅತಿ ಹೆಚ್ಚು ಇಳುವರಿ ನೀಡುವ ಹಾಗೂ ಮೂರು ಮುಖ್ಯ ರೋಗಗಳನ್ನು ತಡೆಯುವ ಸಾಮರ್ಥ್ಯವುಳ್ಳ ತಳಿ ಇದು ಎಂದು ಈ ತಳಿಯನ್ನು ಅಭಿವೃದ್ಧಿಪಡಿಸಿರುವ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಎ.ಟಿ. ಸದಾಶಿವ ಹೇಳುತ್ತಾರೆ.ಟೊಮೆಟೊ ಬೆಳೆಗೆ ಬರುವ ಸೊರುಗು ರೋಗ, ಎಲೆಮುರುಟು ರೋಗ ಹಾಗೂ ಎಲೆಚುಕ್ಕೆ ರೋಗಗಳನ್ನು ತಡೆಯುವ ಶಕ್ತಿ ಅರ್ಕಾರಕ್ಷಕ್‌ ತಳಿಗಿದೆ ಎನ್ನುತ್ತಾರೆ.ಈ ತಳಿಯಿಂದ
ಹೆಕ್ಟೇರ್‌ಗೆ 40 ರಿಂದ 50 ಸಾವಿರ ಟನ್‌ (?) ಇಳುವರಿ ದೊರೆಯುತ್ತದೆ. ಗಿಡವೊಂದಕ್ಕೆ ಕನಿಷ್ಠ 10 ರಿಂದ 12 ಕೆ.ಜಿ ಫಸಲು ಸಿಗುತ್ತದೆ. ಎಂದರೆ ಒಂದು ಎಕರೆಗೆ ೧೬/16 ಸಾವಿರ ಟನ್ !!.ಗಾತ್ರ ಹಾಗೂ ಆಕಾರ , ಹಣ್ಣಿನ ಬಣ್ಣ ಆಕರ್ಷಣೀಯವೂ ಆಗಿದ್ದು ಮತ್ತು ಗಟ್ಟಿಯಾಗಿದ್ದು ಮಾರಾಟಕ್ಕೆ ಅನುಕೂಲಕರವಾಗಿದೆ. ಫಸಲು ಕೊಯ್ದ ನಂತರ 15–20 ದಿನಗಳಷ್ಟು ಕಾಲ ಕೆಡದೇ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಆಧುನಿಕ ಬೇಸಾಯ ಪದ್ಧತಿಯಿಂದ ಕಡಿಮೆ ನೀರಿದ್ದರೂ ಇದನ್ನು ಬೆಳೆಯಬಹುದು.
:ಬೀಜವನ್ನು ತಂದು 25 ದಿನಗಳ ಕಾಲ ನರ್ಸರಿಯಲ್ಲಿ ಬೆಳೆಸಿದ ನಂತರ ನಾಟಿ ಮಾಡಬೇಕು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಔಷಧಿಯನ್ನು ತಿಂಗಳಿಗೊಮ್ಮೆ ಸಿಂಪರಣೆ ಮಾಡಬೇಕು.ಸಾಲಿನಿಂದ ಸಾಲಿಗೆ ನಾಲ್ಕು ಅಡಿಗಳ ಅಂತರವಿರಬೇಕು. ಗಿಡದಿಂದ ಗಿಡಕ್ಕೆ 2 ಅಡಿಗಳ ಅಂತರದಂತೆ ಒಂದು ಎಕರೆಯಲ್ಲಿ ಅಂದಾಜು 6 ಸಾವಿರ ಗಿಡಗಳನ್ನು ನಾಟಿ ಮಾಡಬೇಕು (ವಿಜ್ಞಾನಿ ಡಾ.ಎ.ಟಿ. ಸದಾಶಿವ).ಟೊಮೆಟೊ ಬೆಳೆಯಲು ಹನಿ ನೀರಾವರಿಗೆ ವೆಚ್ಚ ಬರಬಹುದು. ಇದಕ್ಕೆ ಸರ್ಕಾರ ಶೇ 90 ರಷ್ಟು ಸಬ್ಸಿಡಿ ನೀಡುವುದು.ಇತರೆ ಕೃಷಿ ವೆಚ್ಚ ಸೇರಿ ಆಧುನಿಕ ಕೃಷಿಗೆ ಎಕರೆಗೆ ₨ 4 ಲಕ್ಷ ಆಗಬಹುದು (2014).ಬೆಂಗಳೂರು ಸಂಶೋಧನಾ ಸಂಸ್ಥೆಯಲ್ಲಿ ಈ ಟೊಮೆಟೊ ಬೀಜ ಅರ್ಧ ಬೆಲೆಗೆ ಸಿಗುತ್ತದೆ. 10 ಗ್ರಾಂಗೆ ₨ 300 ನಿಗದಿ ಪಡಿಸಿದ್ದಾರೆ (2014).ಅರ್ಕಾರಕ್ಷಕ್‌’ ಟೊಮೆಟೊ ಬೆಳೆಯನ್ನು ಹೆನ್ನಾಗರದ ಪ್ರಗತಿಪರ ರೈತ ಹಾಗೂ ಹಾಪ್‌ಕಾಮ್‌್ಸ ನಿರ್ದೇಶಕ ಎಂ.ಬಾಬು ಅವರ ಐದು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದು ಭರ್ಜರಿ ಬೆಳೆ ತೆಗೆದಿದ್ದಾರೆ (2014).([[ಸದಸ್ಯ:Bschandrasgr/ಪರಿಚಯ|ನೋಡಿ]])
 
== ಹೊರಗಿನ ಸಂಪರ್ಕಗಳು ಹಾಗೂ ಉಲ್ಲೇಖಗಳು ==
"https://kn.wikipedia.org/wiki/ಟೊಮೇಟೊ" ಇಂದ ಪಡೆಯಲ್ಪಟ್ಟಿದೆ