ಮಕರಂದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q171934 (translate me)
No edit summary
 
೧ ನೇ ಸಾಲು:
[[ಚಿತ್ರ:Nectar.jpg|thumb|250px|ಕೆಮೆಲ್ಲಿಯಾ ಹೂವಿನಲ್ಲಿ ಮಕರಂದ]]{{unref}}
'''''ಮಕರಂದ''''' ಸಸ್ಯಗಳು ಉತ್ಪಾದಿಸುವ ಒಂದು ಶರ್ಕರಭರಿತ ದ್ರವ. ಸಸ್ಯಗಳಲ್ಲಿ ಮಕರಂದವು [[ಹೂವು|ಹೂವಿನಿಂದ]] ಅಥವಾ [[ಎಲೆ]]ಗಳ ಬುಡದಲ್ಲಿ ಉತ್ಪನ್ನವಾಗುತ್ತದೆ. ಹೂವಿನಿಂದ ಸ್ರವಿಸುವ ಮಕರಂದವು [[ಪರಾಗಸ್ಪರ್ಶ]] ಕ್ರಿಯೆಯಲ್ಲಿ ಸಹಕರಿಸುವ ಪ್ರಾಣಿಗಳನ್ನು (ಸಾಮಾನ್ಯವಾಗಿ [[ಕೀಟ]]ಗಳು ಮತ್ತು [[ಪಕ್ಷಿ]]ಗಳು) ಆಕರ್ಷಿಸಿದರೆ ಎಲೆಯ ಭಾಗದಲ್ಲಿ ಸ್ರವಿಸುವ ಮಕರಂದವು ಸಸ್ಯಾಹಾರಿ ಪ್ರಾಣಿಗಳಿಂದ ತನಗಾಗುವ ಹಾನಿಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ಸಸ್ಯವು ಹೂಡಿಕೊಂಡಿರುವ ನೈಸರ್ಗಿಕ ಉಪಾಯವಾಗಿದೆ. ಈ ರೀತಿಯಲ್ಲಿ ತನ್ನನ್ನು ಭಕ್ಷಿಸಲೋಸುಗ ಬರುವ ಪ್ರಾಣಿಗಳನ್ನು ಎಲೆಯ ಬುಡದ ಮಕರಂದದಿಂದ ತೃಪ್ತಿಗೊಳಿಸಿ ತನ್ನ ಪ್ರಮುಖ ಅಂಗಗಳಾದ ಹೂವು, ಕಾಯಿ ಇತ್ಯಾದಿಗಳನ್ನು ರಕ್ಷಿಸಿಕೊಳ್ಳುತ್ತದೆ. ಮಕರಂದವನ್ನು ಸ್ರವಿಸುವ ಸಸ್ಯಗ್ರಂಥಿಯನ್ನು ನೆಕ್ಟರಿ ಎಂದು ಕರೆಯಲಾಗುತ್ತದೆ. ಮಕರಂದವು ಹಲವು ರಾಸಾಯನಿಕಗಳ ಸಂಯುಕ್ತವಾಗಿದ್ದು ಸಾಮಾನ್ಯ [[ಸಕ್ಕರೆ]] (ಗ್ಲೂಕೋಸ್,ಸುಕ್ರೋಸ್) ಅತಿ ಹೆಚ್ಚಿನ ಪ್ರಮಾಣದಲ್ಲಿರುವುದು. ಮಕರಂದವು ಆರ್ಥಿಕವಾಗಿ ಸಹ ಒಂದು ಪ್ರಮುಖ ವಸ್ತು. [[ಜೇನು|ಜೇನಿನ]] ಮೂಲ ಮಕರಂದವಾಗಿದೆ.
[[ಚಿತ್ರ:Cherry petiole glands.JPG|thumb|right|250px|ಎಲೆಯ ಬುಡದಿಂದ ಸ್ರವಿಸಿರುವ ಮಕರಂದ]]
"https://kn.wikipedia.org/wiki/ಮಕರಂದ" ಇಂದ ಪಡೆಯಲ್ಪಟ್ಟಿದೆ