ಕೇಶಿರಾಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೪ ನೇ ಸಾಲು:
 
==ಶಬ್ದಮಣಿದರ್ಪಣ==
*'''ಕೇಶಿರಾಜ'''ನ "ಶಬ್ದಮಣಿದರ್ಪಣ"ವು ಸಮಗ್ರವೂ ಸ್ವಾರಸ್ಯವೂ ಆದ ಉತ್ತಮ ವ್ಯಾಕರಣ ಗ್ರಂಥ. ಇಡೀ ಕೃತಿ ಕಂದಪದ್ಯಗಳ ರೂಪದಲ್ಲಿದೆ. ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಇಲ್ಲಿ ಅಧ್ಯಾಯಗಳಿಗೆ ಪ್ರಕರಣ ಎನ್ನಲಾಗುತ್ತದೆ. ಕಂದಪದ್ಯಗಳಿಗೆ 'ಸೂತ್ರ'ವೆಂದೂ, ಗದ್ಯರೂಪದ ವಿವರಣೆಗೆ 'ವೃತ್ತಿ'ಯೆಂದೂ, ವ್ಯಾಕರಣದ ಉದಾಹರಣೆಗಳಿಗೆ 'ಪ್ರಯೋಗ'ವೆಂದು ಕರೆದು, ತನ್ನ ಗ್ರಂಥಕ್ಕೆ ೨ನೇ ನಾಗವರ್ಮನ "ಶಬ್ದಸ್ಪೃತಿ ಮತ್ತು ಕಾವ್ಯಾವಲೋಕನ" ಗ್ರಂಥಗಳ 'ಸೂತ್ರ', 'ವೃತ್ತಿ' ಮತ್ತು 'ಪ್ರಯೋಗ'ಗಳನ್ನು ಆಧರಿಸಿದ್ದಾನೆ.
 
*"ಶಬ್ದಮಣಿದರ್ಪಣ"ವು ೧೩ನೇ ಶತಮಾನಕ್ಕೆ ಮೊದಲು ಹಳಗನ್ನಡ ಭಾಷಾಸ್ಥಿತಿಗತಿಗಳು ಹೇಗಿದ್ದುವೆಂಬುದನ್ನು ಸವಿಸ್ತಾರವಾಗಿ, ಸಪ್ರಮಾಣ ವಿವೇಚನೆಯಿಂದ ವರ್ಣಿಸುತ್ತದೆ. ಇದರೊಳಗೆ ಸಂಧಿ, ನಾಮ, ಸಮಾಸ, ತದ್ಧಿತ, ಆಖ್ಯಾತ, ಧಾತು, ಅಪಭ್ರಂಶ, ಅವ್ಯಯ ಎಂಬ ಹೆಸರಿನ ಎಂಟು ಪ್ರಕರಣಗಳಿವೆ.
 
*ಪೂರ್ವಕವಿಗಳ ಪ್ರಯೋಗಗಳನ್ನು ಯಥೋಚಿತವಾಗಿ ಉದಾಹರಿಸುವ ಕ್ರಮವನ್ನು ಇಲ್ಲಿ ಅನುಸರಿಸಲಾಗಿದೆ.
 
[[ವರ್ಗ:ಕನ್ನಡ ವ್ಯಾಕರಣ]]
"https://kn.wikipedia.org/wiki/ಕೇಶಿರಾಜ" ಇಂದ ಪಡೆಯಲ್ಪಟ್ಟಿದೆ