ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
 
== ಅಡಿಕೆಯಲ್ಲಿ ವಿಧಗಳು ==
*ಸೇವಿಸುವ ಅಡಿಕೆ ತಯಾರಿಸಲು ಅದಕ್ಕೆ ಅನೇಕ ಬಗೆಯ ಸಂಸ್ಕರಣೆ ಮಾಡಬೇಕಾಗುವುದು. ಒಂದು ಮರದಿಂದ ಕೊಯಿದ ಅಡಿಕೆ ಸುಮಾರು 2 -4 ಸೆಂ ಮೀ.ಉದ್ದ 3-4/5ಸೆಂ.ಮೀ. ಸುತ್ತಳತೆ ಇರುವುದು. ಮರದಿಂದ ಕೊಯಿದು ತಂದ ಹಸಿರು ಅಡಿಕೆಯನ್ನು ಸುಲಿದು ಬೇಯಿಸಿ 8-10ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದು ರಾಶಿ ಅಡಿಕೆ , ಅದರಲ್ಲಿ ಬೆಳೆದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ =ಬೆಟ್ಟೆ ಸಿಪ್ಪೆ ಪೂರ್ಣ ಬಿಡದ ಅಡಿಕೆ =ಕೆಂಪುಗೋಟು, ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ, ಸುರಿಟಿಕೊಂಡ ಎಳೆಯ ಅಡಿಕೆ =ಚಿಕಣಿ, ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ=ಆಪಿ ಅಡಿಕೆ ,ಹೀಗೆ ಬೇರೆ ಬೇರೆ ವಿಧಗಳ ಅಡಿಕೆಯನ್ನು ಆಯ್ದು ಬೇರ್ಪಡಿಸಲಾಗುವುದು. ಶಿವಮೊಗ್ಗ ಮತ್ತು ಕೆಲವುಕಡೆ ಎಳೆಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳುಮಾಡಿ ಬೇಯಿಸಿ ಒಣಗಿಸಲಾಗುವುದು ;ಇದಕ್ಕೆ 'ಸರಕು' ಅಥವಾ ಹೋಳು ಅಡಿಕೆ ಎನ್ನುವರು. ಇದರಲ್ಲೂ ಬೇರೆ ಬೇರೆ ವಿಧಗಳನ್ನು ವಿಂಗಡಿಸಲಾಗುವುದು ಇದಕ್ಕೆ ಬೆಲೆ ಎಲ್ಲದಕ್ಕಿಂತ ಹೆಚ್ಚು
*(2014ಜೂನ್ ಬೆಲೆ-)ಕೆಂಪು ದುಂಡು ಅಡಿಕೆ;
# ಸುರಿಟಿಕೊಂಡ ಎಳೆಯ ಅಡಿಕೆ =ಚಿಕಣಿ :ಮೊದಲ ದರ್ಜೆ;
# ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ=ಆಪಿ :ಮೊದಲ ದರ್ಜೆ;
# ಚಿಕಣಿ +ಆಪಿ+ಬೆಟ್ಟೆ = ಸೇರಿರುವುದು =ರಾಶಿ :ಎರಡನೇ ದರ್ಜೆ(ರೂ.೩೫,೦೦೦-೪೪,೦೦೦)
# ಬೆಳದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ =ಬೆಟ್ಟೆ :ಮೂರನೇ ದರ್ಜೆ (೩೫೦೦೦ -೪೪,೦೦೦)
# ನೆರಿ-ನೆರಿ ಇರುವ ಬೆಳೆದ ಅಡಿಕೆ=ನುರಿಅಡಿಕೆ,:ನಾಲ್ಕನೇ ದರ್ಜೆ
# ಸಿಪ್ಪೆ ಪೂರ್ಣ ಬಿಡದ ಅಡಿಕೆ =ಕೆಂಪುಗೋಟು :ಐದನೇ ದರ್ಜೆ(೨೦,೦೦೦-- ೨೭,೦೦೦/20000-27,000)
::'''ಚಾಲಿ'''
*ಬೇಯಿಸದ ಹಣ್ಣುಅಡಿಕೆಯನ್ನು ಸುಮರು ನಲವತ್ತು ದಿನ ಒಣಗಿಸಿದರೆ ಸಿಪ್ಪೆಕಳಚಿ ಕೊಬ್ಬರಿಯಂತಾಗುವುದು;ಅದನ್ನು ಸುಲಿದರೆ 'ಚಾಲಿ' ಅನ್ನುವ ಬಿಳಿ ಅಡಿಕೆ ಸಿಗುವುದು , ಅದನ್ನುಮತ್ತೆ ಗುಣಕ್ಕೆ ತಕ್ಕಂತೆ ವಿಂಗಡಿಸಲಾಗುವುದು. ಇದಕ್ಕೆ ಕೆಂಪು ಅಡಿಕೆಗಿಂತ ಬೆಲೆ ಸಾಮಾನ್ಯವಾಗಿ ಸ್ವಲ್ಪ ಕಡಿಮೆ ಇರುವುದು ಉದಾಹರಣೆಗೆ ಚಾಲಿ ರಾಶಿ=2014ಜೂನ್ 1ಕ್ವಿಂಟಲ್ ಗೆ ರೂ.20000-22,000.
 
== ಅಡಿಕೆ ಉತ್ಪಾದನೆ ಮತ್ತು ದರ/ಧಾರಣೆ ==
*ಕರ್ನಾಟಕ ರಾಜ್ಯದ್ದೇ ಸಿಂಹಪಾಲು
"https://kn.wikipedia.org/wiki/ಅಡಿಕೆ" ಇಂದ ಪಡೆಯಲ್ಪಟ್ಟಿದೆ