"ಎಚ್.ಎಂ. ತಿಮ್ಮಪ್ಪ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ==ಜೀವನ== ತಂದೆ ಶ್ರೀ ಹೆಗಡೆ ಮರಿಯಪ್ಪನವರು ಮತ್ತು ತಾಯಿ ಶ್ರೀಮತಿ ಎಂ. ದೇವಕಮ್ಮ...)
 
==ಜೀವನ==
[[File:VCA 001.JPG|thumb|VCA 001]]
ತಂದೆ ಶ್ರೀ ಹೆಗಡೆ ಮರಿಯಪ್ಪನವರು ಮತ್ತು ತಾಯಿ ಶ್ರೀಮತಿ ಎಂ. ದೇವಕಮ್ಮ ನವರ ಮಗನಾಗಿ ದಿ. 08-11-1939 ರಂದು [[ಕರ್ನಾಟಕ]]ದ [[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲೋಕಿನ ಕಲಸಿಯಲ್ಲಿ ಜನಿಸಿದರು.
ಸ್ವಗ್ರಾಮವಾದ ಕಲಸಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಿಲ್ಲದ್ದರಿಂದ ಕೆಲವು ಕಾಲ ಮನೆಯಲ್ಲಿಯೇ ವಾಸ. ತದನಂತರ ವಾರನ್ನ ಮಾಡಿಕೊಂಡು ಲಿಂಗದಹಳ್ಳಿ ವೇದಪಾಠ ಶಾಲೆಯಲ್ಲಿ ವೇದಾಧ್ಯಯನ. ಆ ವೇದಪಾಠ ಶಾಲೆಯೂ ಹೆಚ್ಚುಕಾಲ ನಡೆಯದೇ ಇದ್ದರಿಂದ ಪುನಃ ಮನೆಗೆ ಮರಳಿ ಅಣ್ಣಂದಿರೊಡನೆ ಕೃಷಿ ಕೆಲಸ. ಓದಬೇಕೆಂಬ ತುಡಿತವಿದ್ದರೂ ಅನುಕೂಲವಾದ ಅವಕಾಶವಿರಲಿಲ್ಲ. ಸಂಸ್ಕೃತ ವಿದ್ವಾಂಸರೂ ಅವರ ಒತ್ತಿನ ಅಣ್ಣನವರೂ ಆದ ವೆಂಕಟಗಿರಿಯಣ್ಣನ ವಿವಾಹವಾದ ಬಳಿಕ ಅವರೊಂದಿಗೆ ಬಂಗಾರಪೇಟೆಯಲ್ಲಿ ಅವರ ಮನೆಯಲ್ಲಿಯೇ ಇದ್ದುಕೊಂಡು ಖಾಸಗಿಯಾಗಿ ಸ್ವಪ್ರಯತ್ನದಿಂದ ಕನ್ನಡ ಪಂಡಿತ್ ಪರೀಕ್ಷೆ, ಹಿಂದಿ ರತ್ನ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣ. ಗಮಕ ಪ್ರೌಢ ಪರೀಕ್ಷೆಯಲ್ಲಿ ಉತ್ತೀರ್ಣ. ಚಿಕ್ಕಂದಿನಿಂದಲೂ ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ.
==ಸಾಹಿತ್ಯ ಕೃಷಿ==
===ಪ್ರಕಟವಾದವು===
#ಹವ್ಯಕರ[[ಹವ್ಯಕ]]ರ ಇತಿಹಾಸ (ಸಂಶೋಧನಾ ಗ್ರಂಥ) 1990 (ಪ್ರತಿಗಳು ಇಲ್ಲ)
#ಚಿನ್ನದ ಚೆಂಡು (ಗೀತಾರೂಪಕ) 2006 (ಪ್ರತಿಗಳು ಇಲ್ಲ)
#ವೈದಿಕ ಸಂಸ್ಕಾರ ಸಾರ ಸಂಗ್ರಹ 2006 (ಪೂರ್ವ ಷೋಡಶ ಸಂಸ್ಕಾರ - ಅಪರ ಷೋಡಶ ಸಂಸ್ಕಾರಗಳು) ಪ್ರತಿಗಳು ಇಲ್ಲ
#ಭರ್ತೃಹರಿ ನೀತಿ ಶತಕಂ - 2010 (ಪದ್ಯರೂಪ ಭಾಮಿನಿ ಷಟ್ಪದಿ)
#ಹವ್ಯಕರ[[ಹವ್ಯಕ]]ರ ಇತಿಹಾಸ ದರ್ಶನ -2012 (ಸಂಶೋಧನಾ ಗ್ರಂಥ)
#ಚೆನ್ನುಡಿ ಶತಕ
#ಹಲವಾರು ಪ್ರಸಿದ್ಧ ಕನ್ನಡ ಪತ್ರಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ, ಅಭಿನಂದನಾ ಗ್ರಂಥಗಳಲ್ಲಿ, ಬಿಡಿ ಲೇಖನಗಳು, ಕವಿತೆಗಳು ಪ್ರಕಟ.
===ಅಪ್ರಕಟಿತ ಗ್ರಂಥಗಳು===
#ನಾಟಕಗಳು
#ಹವ್ಯಕರ[[ಹವ್ಯಕ]]ರ ಆಡುಭಾಷೆ - ಒಂದು ಅಧ್ಯಯನ
#ಹವ್ಯಕರ[[ಹವ್ಯಕ]]ರ ಆಡುಭಾಷೆ ನುಡಿಮುತ್ತುಗಳು
#ಭರ್ತೃಹರಿಯ ಶೃಂಗಾರ ಶತಕ ಕನ್ನಡಾನುವಾದ - ಭಾಮಿನಿ ಷಟ್ಪದಿ.
#ಕಾವ್ಯ ವಾಹಿನಿ (ಬಿಡಿ ಕವನಗಳ ಸಂಗ್ರಹ)
೧,೮೬೬

edits

"https://kn.wikipedia.org/wiki/ವಿಶೇಷ:MobileDiff/484106" ಇಂದ ಪಡೆಯಲ್ಪಟ್ಟಿದೆ