ಹಾ.ಮಾ.ನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
ಮೇಗರವಳ್ಳಿ, ತೀರ್ಥಹಳ್ಳಿಗಳಲ್ಲಿ ಪ್ರಾಥಮಿಕ,ಮಾಧ್ಯಮಿಕ ಶಿಕ್ಷಣ ಮುಗಿಸಿ ಶಿವಮೊಗ್ಗದಲ್ಲಿ ಇಂಟರ್ ಮುಗಿಸಿದರು. ಮೈಸೂರು ಮಹರಾಜಾ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಗಳಿಸಿದ ನಂತರ ತುಮಕೂರು, ಶಿವಮೊಗ್ಗದಲ್ಲಿ ಅಧ್ಯಾಪಕರಾಗಿದ್ದು, [[೧೯೬೧]]ರಲ್ಲಿ [[ ಮೈಸೂರು ವಿಶ್ವವಿದ್ಯಾಲಯ]] ಸೇರಿದರು.
 
ಮೈಸೂರು ವಿಶ್ವವಿದ್ಯಾಲಯದ ವ್ಯಾಸಂಗ ವೇತನ ಪಡೆದು, [[ಕಲ್ಕತ್ತಾ]] ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞ್ನಾನದಲ್ಲಿ ಎಂ.ಎ. ಸ್ನಾತಕೋತ್ತರ ಪಡೆದರು.ಫುಲ್‍ಬ್ರೈಟ್ ವಿದ್ಯಾರ್ಥಿ ವೇತನ ಪಡೆದು, '''ಕನ್ನಡ ಸಾಹಿತ್ಯ ಮತ್ತು ಅಡುಭಾಷೆ''' ಎಂಬ ಮಹಾಪ್ರಬಂಧವನ್ನು ಸಾದರ ಪಡಿಸಿ, [[ಅಮೆರಿಕಾ]]ದ [[ಇಂಡಿಯಾನಾ]] ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು. <ref>https://archive.org/details/epigraphiacarnat014759mbp</ref>
 
==ಸಾಧನೆ==
ಹದಿನಾರು ವರ್ಷಗಳ ಕಾಲ [[ಮೈಸೂರು]] [[ಮಾನಸ ಗಂಗೋತ್ರಿ]]ಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. [[೧೯೮೪]]ರಲ್ಲಿ [[ಗುಲ್ಬರ್ಗಾ]] ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.
"https://kn.wikipedia.org/wiki/ಹಾ.ಮಾ.ನಾಯಕ" ಇಂದ ಪಡೆಯಲ್ಪಟ್ಟಿದೆ