ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೫ ನೇ ಸಾಲು:
"ಸೊಗಸು ಇರುವುದೇ ನೇರವಾಗಿ ಹೇಳುವುದರಲ್ಲಿ. ಪತ್ರಕರ್ತರು ಹಾಗು ಹಳ್ಳಿಗಾಡು ಮಂದಿ ಮಾತ್ರ ಹಾಗೆ ಹೇಳುತ್ತಾರೆ".
==ಒಂದು ನೂರು ವರ್ಷಗಳ ಏಕಾಂತ==
ಆತ್ಮಕ್ಕೆ ತಟ್ಟುವ ಸತ್ಯ, ಅನುಕಂಪ, ಕಾವ್ಯಾತ್ಮಕ ಮಾಂತ್ರಿಕತೆಯಿಂದ ತುಂಬಿ ತುಳುಕುವ ಅವನ ಪ್ರಮುಖ ಕೃತಿ, 'ಒಂದು ನೂರು ವರ್ಷಗಳ ಏಕಾಂತ' ಲ್ಯಾಟಿನ್ ಅಮೇರಿಕಾದ ಗುಡ್ಡದ ತಪ್ಪಲಿನ ಹಳ್ಳಿಯೊಂದರ ಕತೆ. ವ್ಯಸನ, ಕ್ರೌರ್ಯ, ಪ್ರೇತಗಳ ಮತ್ತು ಕನಸುಗಳ ಕಲ್ಪನಾಕಾವ್ಯ ಈ ಕಥನ. ಕಾಲದ ಜೋಕಾಲಿಯಲ್ಲಿ ಜೀಕುವ ಮಾಕ್ರ್ವೆಜ್‍ನ ಹೆಣೆಗೆಗಳು ರೀವಾಜಿನ, ಕ್ರಮಬದ್ಧವಾದ ಕಾಲಗತಿಯನ್ನು ಉಲ್ಲಂಘಿಸುತ್ತವೆ. ಅತಿಲೌಕಿಕವಾದ ಮತ್ತು ದಿನನಿತ್ಯದ ಜೀವನವೆರಡನ್ನು ಕೂಡಿಸಿ ಕಲ್ಪನೆ ಕಟ್ಟುವ ಮಾಕ್ರ್ವೆಜ್‍ನ ರೀತಿಗೆ ಇಡೀ ಪ್ರಪಂಚ ಮಾರುಹೋಯಿತು. ಕಾಳ್ಗಿಚ್ಚಿನಂತೆ 'ಮಾಂತ್ರಿಕ ವಾಸ್ತವವಾದ' (ಒಚಿgiಛಿ ಖeಚಿಟism) ಬಗ್ಗೆ ಆಸಕ್ತಿ ಮೂಡಿತು. ಮಾಕ್ವೆಜ್, ಪದಗಳ ಆಡಂಬರದ ಬಳಕೆಯಿಂದ ಸಣ್ಣ ಘಟನೆಯನ್ನು ವೈಭವೀಕರಿಸುತ್ತ, ಪವಿತ್ರವಾದದ್ದನ್ನು ಕ್ಷುಲಕವಾಗಿಸುತ್ತಾ ನಿರಂತರವಾಗಿ ಕತೆ ಹೆಣೆಯುತ್ತಾನೆ. ಸಣ್ಣ ಘಟನೆಯೊಂದು ಅವನ ಕೈಯಲ್ಲಿ ಜೀವಸೆಲೆ ಉಕ್ಕಿಸುವ ಮಹಾಕಾವ್ಯವಾಗಿ ಬದಲಾಗುತ್ತದೆ. ಅವನು ಹೆಣೆಯುವ ಕಥೆ, ಬದುಕುವ, ಮಾತಾಡುವ ರೀತಿಯಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ.<ref>http://economictimes.indiatimes.com/et-now/daily/gabriel-garcia-marquez-nobel-laureate-dies-at-87/videoshow/33917758.cms</ref>
==ರಾಜಕಾರಣಿಯಾಗಿಯೂ ಪ್ರಸಿದ್ಧ==
ನಂಬಲೇ ಅಸಾಧ್ಯವಾದ ಪ್ರತಿಭೆಯುಳ್ಳ ಈ ಲ್ಯಾಟಿನ್ ಅಮೇರಿಕಾದ ಕ್ರಾಂತಿಕಾರಿ ಲೇಖಕ, ರಾಜಕಾರಣೀ ಕೂಡಾ ಹೌದು. ಸಾಹಿತ್ಯಕ್ಕಾಗಿ ಇರುವ ನೋಬಲ್ ಪಾರಿತೋಷಕವನ್ನು 1982ರಲ್ಲಿ ಪಡೆದಾಗ ಮಾಡಿದ ಭಾಷಣದಲ್ಲಿ ಲ್ಯಾಟಿನ್ ಅಮೇರಿಕಾದ ಜನರ ನೋವು, ಏಣೆಯಿಲ್ಲದ ಅವರ ಸಂಕಟ ಹಾಗು ಬಂಡವಾಳಶಾಹಿ ಯಜಮಾನಿಕೆಯಿಂದ ಬೇಕಂತಲೇ ತಪ್ಪಾಗಿ ‘ಅರ್ಥೈಸಲ್ಪಡುತ್ತಿರುವ ತನ್ನ ಜನರ ಔuಣsizeಜ ಡಿeಚಿಟiಣಥಿ’ ಕುರಿತು ಹೇಳುವ ಮಾತುಗಳು ದಾಖಲಾರ್ಹ: ನನ್ನ ಜನರದ್ದು "ಕಾಗದದ ಮೇಲಿನ ವಾಸ್ತವವಲ್ಲ, ಆದರೆ ನಮ್ಮೊಳಗೆ ಬದುಕುವ ಮತ್ತು ನಾವು ದಿನಾದಿನಾ ಸಾಯುವ ಎಣೆಯಿಲ್ಲದ ಸಾವುಗಳ ಕ್ಷಣಕ್ಷಣಗಳನ್ನು ನಿರ್ಧರಿಸುವ ವಾಸ್ತವ, ಆದರೆ ಈ ವಾಸ್ತವವೇ ನಮ್ಮ ತಣಿಸಲಾಗದ ಸೃಜನಶೀಲತೆಯ ಸೆಲೆಯನ್ನು ಪೋಷಿಸುತ್ತಿರುವುದು, ಅಲೆಮಾರಿಯಂತೆ, ಮೈದುಂಬಿದವನಂತೆ ಕಾಣುವ ನಾನೇ ಅದರ ಗೂಢ ಸಂಕೇತ, ಅದೃಷ್ಟವಶಾತ್ ಪ್ರತ್ಯೇಕವಾಗಿದ್ದೇನೆ". ಕ್ಯೂಬಾದ ಸರ್ವಾಧಿಕಾರಿ, 'ಫಿಡಲ್ ಕ್ಯಾಸ್ಟ್ರೋ', ಮಾರ್ಕ್ವೆಜ್ ರಿಗೆ ಪ್ರಿಯ ಮಿತ್ರರಾಗಿದ್ದರು.
==ನಿಧನ==
೮೭ ವರ್ಷ ಪ್ರಾಯದ 'ಮಾರ್ಕ್ವೆಜ್' <ref>http://epaper.timesofindia.com/Default/Scripting/ArticleWin.asp?From=Archive&Source=Page&Skin=ETNEW&BaseHref=ETM/2014/04/19&PageLabel=10&EntityId=Ar01001&ViewMode=HTML</ref>ರವರು 'ನ್ಯೂಮೋನಿಯಾ ಜ್ವರ'ದಿಂದ ನರಳುತ್ತಿದ್ದರು. ೨೦೧೪ ರ ಮಾರ್ಚ್, ೩೧ ರಂದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲುಮಾಡಲಾಯಿತು. ಒಂದು ವಾರದ ಚಿಕಿತ್ಸೆಯಿಂದ ಸ್ವಲ್ಪ ಗುಣಮುಖರಾಗಿ ಮನೆಗೆ ಕಳಿಸಲ್ಪಟ್ಟರು. ಅಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾಗಲೇ ಏಪ್ರಿಲ್, ೧೭ ರಂದು, ಕೊನೆಯುಸಿರೆಳೆದರು.<ref>http://www.prajavani.net/article/%E0%B2%AE%E0%B2%BE%E0%B2%B0%E0%B3%8D%E0%B2%95%E0%B3%8D%E0%B2%B5%E0%B3%86%E0%B2%9C%E0%B3%8D%E2%80%8C%E0%B2%97%E0%B3%86-%E0%B2%95%E0%B2%82%E0%B2%AC%E0%B2%A8%E0%B2%BF-%E0%B2%AE%E0%B2%B9%E0%B2%BE%E0%B2%AA%E0%B3%82%E0%B2%B0</ref>
===ಅಡಿಟಿಪ್ಪಣಿಗಳು===
 
==ಉಲ್ಲೇಖಗಳು==
{{reflist}}