ಕಣಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
'ಕಣಜ' - ಒಂದುನುಡಿನಡೆನೋಟ
೮ ನೇ ಸಾಲು:
[[ವರ್ಗ:ಜಾನಪದ]]
[[ವರ್ಗ:ಕೃಷಿ]]
 
‘ಕಣಜ’ - ಒಂದು ನುಡಿನಡೆನೋಟ :
 
 
ಬಿದಿರು*ಸೀಳುಗಳಿಂದ ಆಳೆತ್ತರಕ್ಕೆ ಕೊೞವೆ ಪರಿಜಿಗೆ ಎಣೆದು ಸಗಣಿ ಅಲ್ಲದಿದ್ದರೆ ಕೆಮ್ಮಣ್ಣಿಂದ ಸಾರಿಸಿ ದವಸಗಳನ್ನು ಕೂಡಿಡಲು ಮಾಡಿದ கூடை ಕೂಡೈ(ತ) > ಗೂಡೆ ‘ಕಣಜ’ ಎನಿಸುತ್ತದೆ. ಇದನ್ನು ಮನೆಯ ಒಳಗಾಗಲೀ ಹೊಱಗೆ ಜಗಲಿಯಲ್ಲಾಗಲೀ ಇಡುವುದು ವಾಡಿಕೆ. ಈ ಕಣಜ ತಮಿೞಿನಲ್ಲಿ களஞ்சியம் ಕಳಞ್ಜಿಯಮ್, தொம்பை ತೊಮ್ಬೈ ಎಂದು ಕರೆಸಿಕೊಳ್ಳುತ್ತದೆ. ತೊಮ್ಬೈ ಕನ್ನಡಕ್ಕೆ ಬರುವಾಗ ತೊಂಬೆ ಆಗುತ್ತದೆ.
 
 
ಇನ್ನೂ ಹೆಚ್ಚು ದವಸ ಉಳ್ಳವರು ಆಱೆಂಟು ಅಡಿಗಳ ಹಲಗೆಗಳನ್ನು ಪೆಟ್ಟಿಗೆಯ ಪರಿಜಿಗೆ ಹೊಂದಿಸಿ ದವಸಗಳನ್ನು ಕೂಡಿಡಲು ಅಲ್ಲದೆ ಬೞಸಲು ಬೇಕಾದಾಗ ತಳಮಟ್ಟದಲ್ಲಿ ಹೊಂದಿಸಿರುವ ಎರಡು ಹಿಡಿಗಳಲ್ಲಿ ಮೇಲಿನದನ್ನು ಎೞೆದು ಮತ್ತೆ ಅದನ್ನು ಒಳತಳ್ಳಿದಾಗ ಅದಱ ಕೆಳಕ್ಕೆ ತಳವಿರುವ ಒಂದು ಅಡಿ ಚಚ್ಚೌಕದ ಚೌಕಟ್ಟಿಗೆ ದವಸ ತುಂಬಿಕೊಳ್ಳುತ್ತದೆ. ಇದನ್ನು ಹೊಱ ಎೞೆದು ದವಸವನ್ನು ಹೊಱ ಹಾಕಿ ತಳಚೌಕಟ್ಟನ್ನ ಒಳತಳ್ಳಿ ಬಿಡಬಹುದು, ಇಲ್ಲವೆ ಮುಂದುರಿಸಬಹುದು. ಹೀಗೆ ಕಣಜದ ಬೞಕೆಯಾಗುತ್ತದೆ.
 
 
ಇನ್ನೂ ಹೆಚ್ಚಿನ ದವಸ ಇದ್ದಲ್ಲಿ ಮನೆಯ ಹೊಱಗೆ, ಕಲ್ಲುನೆಲದಲ್ಲಿ, ಬಾಯಿ ಕಿಱಿದಾಗಿ ಒಳಗೆ ಅಗಲವಾಗಿ ಗುಡಾಣದ ಪಾಂಗಿನಲ್ಲಿ, ಗುಂಡಿ ಅಗೆದು, ಅವುಗಳಲ್ಲಿ ರಾಗಿ ಜೋೞ ಮುಂತಾದವುಗಳನ್ನು ಕೂಡಿಟ್ಟು ಮೇಲೆ ಕಲ್ಲ ಮುಚ್ಚಳ ಮುಚ್ಚಿ ಅದಱ ಮೇಲೆ ಮೞೆಯ ನೀರು ಇೞಿಯದಂತೆ ಜೇಡಿಮಣ್ಣು ಎೞೆದು ಕೂಡಿ ಇಡುವ ಕಣಜ ಅಗೇವು ಎನಿಸುತ್ತದೆ. ಬಱಗಾಲದಲ್ಲಿ ಬಡವರಿಗೆ ಹಂಚಲೂ ಒದಗುತ್ತದೆ.
 
 
 
ಕಡಿಮೆ ಅಳವಿನಲ್ಲಿ ಅಕ್ಕಿ, ಕಾೞುಗಳನ್ನು ಕೂಡಿಡಲು ಬೞಸುವ ಹಿತ್ತಾಳೆ ಮುಂತಾದವುಗಳಿಂದಾದ ಗುಡಾಣವೂ ಒಂದು ಸಣ್ಣ ಕಣಜ; ಇದಕ್ಕೆ ಕನ್ನಡದಲ್ಲಿ ‘ ಮಣಿಕ ’ ಎಂಬ ಮತ್ತೊಂದು ಹೆಸರೂ ಉಂಟು. ಕಾೞುಗಳ ತೆನೆ (ಕ.ತ.)ಗಳಲ್ಲಿ ‘ கதிர் ಕದಿರ್ ’ ಎನಿಸಿದರೆ ಕಾೞುಗಳನ್ನು ಕೂಡಿಡುವ ಮಣ್ಣಿನ ಗುಡಾಣ ತಮಿೞಿನಲ್ಲಿ ‘ குதிர் ಕುದಿರ್ ’ ಎನಿಸುತ್ತದೆ.
 
 
ಕುಟುಕುವ ಕೊಂಡಿ, ಹಾಱುವ ಱೆಕ್ಕೆ ಎರಡೂ ಉಳ್ಳ ( ಕೆಮ್ + ಚಿಗಿ=ಕೆಞ್ಜಿಗಿ )ವ =ಕೆಂಚನೆಯ ಬಣ್ಣದ ಹಾಱುವ ಕೆಂಜಿಗ ಇಱವೆಯೂ ಕಣಜ ಎನಿಸುತ್ತದೆ. ಕಾಡುವ ಈ ಕಣಜವನ್ನು ‘ ಕಡಜ ’ ಎಂದೂ ಕರೆಯಲಾಗುತ್ತದೆ. ಕಾಟ ಕೊಟ್ಟು ಕಾಡುವ ಮಕ್ಕಳನ್ನು ಕಡಜ ಎಂದು ತಾಯಂದಿರು ಕರೆಯುತ್ತಾರೆ.
 
 
ಕನ್ನಡದ ಕೇಶಿರಾಜರು ಸಂಸ್ಕೃತವಿಬುಧರಿಗೆ ಧಾತುಪಾಠವನ್ನು ಹೇೞುವಲ್ಲಿ ‘ ಕುಡುಕು ’ ಎನ್ನುವುದಕ್ಕೆ ‘ಧಾನ್ಯಾದಿ ದ್ರವ್ಯೇ ಚ ’ ಎಂದಿರುತ್ತಾರೆ ; ಅಂದರೆ ಧನತೀತಿ – ಚರಿಸಿದಪುದೆಂದುಬು - ಧನಃ – ಪಶು ; ಧನಂ – ದ್ರವ್ಯಂ ; ಧಾನ್ಯಂ - ದವಸ ಮೊದಲಾದ ಬೞಕೆಯವುಗಳನ್ನು ಒಟ್ಟುಕೂಡಿಸಿ ಇಡುವಲ್ಲಿ ಈ ‘ಕಡುಕು’ ಸೊಲ್ಲಿನ ನಡೆಬೞಕೆ ಎನ್ನುವರು ಹಿರಿಯರು. ಈ ಕುಡುಕು ತಮಿೞಾಗುವಾಗ ‘ கொடுக்கு ಕೊಡುಕ್ಕು ’ ಎಂದೂ ಆಮೇಲೆ ಕನ್ನಡದಲ್ಲಿ ‘ ಕುಡಿಕೆ ’ ಎಂದೂ ಆಗುತ್ತದೆ. ‘ಕೂತು ಉಂಬವನಿಗೆ ಕುಡಿಕೇ ಹಣವೂ ಸಾಲದು.’ ಎನ್ನುವ ಗಾದೆ ಕಣಜ ಎಂಬದು ಹಣಕೂಡಿ ಇಡುವ ಕುಡಿಕೆಗೂ ಆಗತ್ತದೆ ಎಂಬುದನ್ನು ತಿಳಿಗೊಳಿಸುತ್ತದೆ.
 
 
பண்ட ಪಣ್ಡ (ತ) ಎನ್ನುವದು ಸರಕು. ಒಂದು ಸರಕು ಕೊಟ್ಟು ಮತ್ತೊಂದು ಸರಕು ಕೊಳ್ಳುವ ಮಾಱಾಟ, ಸಾಟಿ > ಚಾಟಿ ಎನಿಸತ್ತದೆ. ಇದಕ್ಕೆ ಬಂಡವಾಳ ಬೇಕಿಲ್ಲ. பண்ட> ಬಂಡ ಎನ್ನುವದು ರೊಕ್ಕ. ರೊಕ್ಕವನ್ನು ಸೇರಿಸಿ ಇಡುವ ಎಡೆ ‘ ಬೊಕ್ಕಸ ’ ಎನಿಸುತ್ತದೆ. ‘ಬಂಡಾರ’ ಎನ್ನುವದು ರೊಕ್ಕದ ಮನೆ. ಅವನೇ பண்டாரம் ಪಣ್ಡಾರಮ್(ತ). ಆಡಳಿತ ನಡೆಸುವವನು ‘ಬಂಡಾರಿ’ ; ಇಲ್ಲಿ ಬಂಡಾರಿ ಬಸವೇಶ್ವರರನ್ನು ನೆನಯಬಹುದು. ಬಂಡಾರ > भण्डार ಭಂಡಾರ ಆಗಿ ಸಂಸ್ಕೃತಗೊಂಡು कोश ಕೋಶ ಆಗಿದೆ. ಅಲ್ಲಿಯೂ ಕೋಶಕ್ಕೆ श ಶ ಇರಬೇಕೋ ष ಷ ಇರಬೇಕೋ ಅನ್ನುವ ಗಲಬಿಲಿಯೂ ಈಗಲೂ ಉಂಟು.
 
 
 
ಮುಂದೆ ಎಂದಿಗಾದರೂ ಯಾರಿಗಾದರೂ ತಿಳಿಯಬೇಕೆಂದಿರುವದಱ ಬಗೆಗೆ ಹೇೞಿಕೊಡುವ - ಡಿಕ್ಷ್ನರಿ, ಬಱಗಾಲಕ್ಕೆ ಇರಲಿ ಎಂದು *ಕಾೞುಕೂಡಿಡುವ - ಗ್ರಾನರಿ, ಕಡುಬಡತನ ಬಂದಾಗ ಒದಗಲಿ ಎಂದು ಹಣಕಾಸು ಸೇರಿಸಿ ಕೂಡಿಡುವ – ಟ್ರೆಷರಿ ಈ ಮೂಱೂ ಆದುದು ‘ಕಣಜ.’ ಇಲ್ಲಿ *ಕಾೞು ಅಂದದು ಗಟ್ಟಿನಾಡನುಡಿಯ ನಯನಾಣಿಯ(ಣ್ಯ)ಗಳ ಅಱಿವಿನ ತಿಳಿವು ಮೈದೋಱುವ ನಾಣ್ಣುಡಿ ಜಾಣ್ಣುಡಿಬೊಕ್ಕಸವೇ ‘ಕಣಜ.’ ಎಂಬ ಇದು ಮುಡಿವು.
 
 
ಈ ಲೇಖನ ‘ಕಣಜ ಅಂತರ ಜಾಲ ತಾಣ’ ಸ್ವೀಕರಿಸಿತಾದರೂ ಇದರ ಪ್ರಯೋಜನ ಪಡೆಯಲಿಲ್ಲವಾಗಿ ವಿಕಿಪಿಡಿಯ ನೋಟಕರ ಅವಗಾಹನೆಗೆ ಇಡಲಾಗಿದೆ.
 
* ‘ಬಿದಿರು’- ಮುಂದಿನ ಲೇಖನ
wikipedia A/c.: Nataraj.Leela
Date : 10-4-2014
e-mail: natarajchannabasavappa356#gmail.com
"https://kn.wikipedia.org/wiki/ಕಣಜ" ಇಂದ ಪಡೆಯಲ್ಪಟ್ಟಿದೆ