ಸಿ. ರಾಜಗೋಪಾಲಚಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬ ನೇ ಸಾಲು:
 
==ಕಾಂಗ್ರೆಸ್ಸಿನಲ್ಲಿ==
[[ಜವಹರಲಾಲ್ ನೆಹರೂ]], [[ಸರ್ದಾರ್ ವಲ್ಲಭಭಾಯ್ ಪಟೇಲ್ | ಸರ್ದಾರ ವಲ್ಲಭಭಾಯ್ ಪಟೇಲ್]], [[ರಾಜೇಂದ್ರ ಪ್ರಸಾದ್]] ಹಾಗೂ [[ಮೌಲಾನಾ ಅಬುಲ್ ಕಲಮ್ ಆಜಾದ್]] ರೊಂದಿಗೆ ಸ್ವಾತಂತ್ರ್ಯ ಪೂರ್ವ ಭಾರತದ[[ಭಾರತ]]ದ ಕಾಂಗ್ರೆಸ್ಸಿನ ಅತ್ಯುಚ್ಚ ನಾಯಕಮಣಿಗಳ ಪಂಕ್ತಿಯಲ್ಲಿ ರಾಜಾಜಿಯವರ ಹೆಸರೂ ಕೇಳಿಬರುತ್ತಿತ್ತು. ಸೇಲಂ ನ ಈ ಪ್ರಚಂಡ ವಕೀಲರನ್ನು ಒಂದು ಕಾಲದಲ್ಲಿ [[ಮಹಾತ್ಮ ಗಾ೦ಧಿ |ಮಹಾತ್ಮಾ ಗಾಂಧಿಯವರಗಾಂಧಿ]]ಯವರ ಉತ್ತರಾಧಿಕಾರಿ ಎಂದೂ ಪರಿಗಣಿಸಲಾಗುತ್ತಿತ್ತು.
ರಾಜಾಜಿ [[ಮಹಾತ್ಮ ಗಾ೦ಧಿ]]ಯವರ ಬೀಗರೂ ಹೌದು - ರಾಜಾಜಿಯವರ ಮಗಳನ್ನು ಗಾಂಧಿಯವರ ಮಗನಿಗೆ ಕೊಟ್ಟಿತ್ತು. ಖ್ಯಾತ ಪತ್ರಕರ್ತ [[ರಾಜಮೋಹನ ಗಾಂಧಿ]] ಇವರಿಬ್ಬರ ಮೊಮ್ಮಗ. ಗಾಂಧಿಯವರ ಮರಣದವರೆಗೂ ಅವರ ನೆರಳಿನಲ್ಲೇ ಇದ್ದ ರಾಜಾಜಿ, ನೆಹರೂ ಮತ್ತು ಪಟೇಲರನ್ನು ಗಾಂಧಿಯವರ “ ತಲೆ, ಹೃದಯ ಮತ್ತು ಕೈಗಳು” ಎಂದೇ ಭಾವಿಸಲಾಗಿತ್ತು. ಇವರು ಮೂವರ ಪರಸ್ಪರ ಸಂಬಂಧ ಸಿಹಿ-ಕಹಿಯದಾಗಿದ್ದರೂ, ಗಾಂಧಿಯವ ವ್ಯಕ್ತಿತ್ವ ಹಾಗೂ ಎದುರಿಗಿದ್ದ ಒಂದೇ ಗುರಿ ಇವರನ್ನು ಒಟ್ಟುಗೂಡಿಸಿತ್ತು. ಆದರೂ ಇವರಿಗೆ ಪರಸ್ಪರ ಬಗ್ಯೆ ಅಪಾರ ಗೌರವವಿತ್ತು. ನೆಹರೂ ತಮ್ಮ ಆತ್ಮಕಥೆಯಲ್ಲಿ ರಾಜಾಜಿಯವರ “ ಪ್ರಖರ ಬುಧ್ಧಿಮತ್ತೆ, ನಿಸ್ಸ್ವಾರ್ಥ ಮನೋಭಾವ, ಹಾಗೂ ಅವರ ಪ್ರಚಂಡ ವಿಮರ್ಶಾ ಶಕ್ತಿ ಇವೆಲ್ಲವೂ ನಮ್ಮ ಗುರಿ ಸಾಧಿಸುವೆಡೆಯಲ್ಲಿ ದೊಡ್ಡ ಆಸ್ತಿಯಾಗಿತ್ತು” ಎಂದು ಬರೆಯುತ್ತಾರೆ.
1940ರ ದಶಕದಲ್ಲಿಯೇ [[ಭಾರತ]] ವಿಭಜಿತವಾಗುವ ಸಂಭವವನ್ನು ಮುಂಗಂಡ [[ಕಾಂಗ್ರೆಸ್]] ನಾಯಕರುಗಳಲ್ಲಿ ರಾಜಾಜಿ ಒಬ್ಬರಾಗಿದ್ದರು. ಅಷ್ಟೇ ಅಲ್ಲ, ಹಾಗೆ ಅಸ್ತಿತ್ವಕ್ಕೆ ತರಲ್ಪಟ್ಟ ಪಾಕಿಸ್ತಾನವು[[ಪಾಕಿಸ್ತಾನ]]ವು ಇಪ್ಪತ್ತೈದು ವರ್ಷಗಳಲ್ಲಿಯೇ ಮತ್ತೊಮ್ಮೆ ಹೋಳಾಗುತ್ತದೆ ಎಂದೂ ಭವಿಷ್ಯ ನುಡಿದಿದ್ದರು ! ರಾಜಾಜಿ ತಮ್ಮ ರಾಜಕೀಯ ನೀತಿಗಳ ಉಗ್ರ ಸಮರ್ಥಕರಾಗಿದ್ದು, ಅವುಗಳ ಸಮರ್ಥನೆಯಲ್ಲಿ , ತಮ್ಮ ನಿಕಟವರ್ತಿಗಳೊಂದಿಗೂ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹಿಂಜರೆಯುತ್ತಿರಲಿಲ್ಲ.
 
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ ಸೆರೆವಾಸದ ರುಚಿ ಉಂಡ ರಾಜಾಜಿ ನಂತರ 1946ರಲ್ಲಿ ರಾಜ್ಯಪಾಲರ ಮಂಡಳಿಯ ಸದಸ್ಯರಾದರು. ಸ್ವಾತಂತ್ರ್ಯ ಪಡೆದ ನಂತರ, 1948ರಲ್ಲಿ [[ಮೌಂಟ್ ಬ್ಯಾಟನ್ನ]] ರ ಜಾಗದಲ್ಲಿ ಗವರ್ನರ್ ಜನರಲ್ ಎಂದು ನೇಮಕವಾಗಿ ( ಆ ಹುದ್ದೆಯನ್ನಲಂಕರಿಸಿದ ಏಕೈಕ ಭಾರತೀಯ) 1950, ಜನವರಿ 26ರಂದು [[ಭಾರತ]] ಗಣರಾಜ್ಯವಾಗುವವರೆಗೂ ಅದೇ ಹುದ್ದೆಯಲ್ಲಿ ಮುಂದುವರೆದರು. ಗವರ್ನರ್ ಜನರಲ್ ಹುದ್ದೆಯ ಜಾಗದಲ್ಲಿ ರಾಷ್ಟ್ರಪತಿಗಳ ಹಉದ್ದೆ ಬಂದು [[ರಾಜೇಂದ್ರ ಪ್ರಸಾದರುಪ್ರಸಾದ]]ರು ಮೊದಲನೇ ರಾಷ್ಟ್ರಪತಿಗಳಾಗಿ ನೇಮಕವಾದರು.
 
ನೆಹರೂ ಮಂತ್ರಿಮಂಡಳದಲ್ಲಿ ಖಾತಾರಹಿತ ಮಂತ್ರಿಯಾಗಿ ನೇಮಕಗೊಂಡ ರಾಜಾಜಿ, ಪಟೇಲರ ನಿಧನದ ನಂತರ, ಗೃಹ ಮಂತ್ರಿಗಳಾದರು. 1952ರಿಂದ 1954ರವರೆಗೆ ಅವರು ಆಗಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಸರ್ಕಾರಿ ಪದವಿಗಳಿಂದ ಹೊರಬಂದ ಅವರು , ಭಾರತದ ಅತ್ಯುಚ್ಚ ಗೌರವ “[[ಭಾರತ ರತ್ನ]]” ವನ್ನು ಪಡೆದ ಮೊದಲ ಕೆಲವರಲ್ಲಿ ಒಬ್ಬರಾದರು.
"https://kn.wikipedia.org/wiki/ಸಿ._ರಾಜಗೋಪಾಲಚಾರಿ" ಇಂದ ಪಡೆಯಲ್ಪಟ್ಟಿದೆ