ಜ್ಞಾನ-ಕರ್ಮ ವಿವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
:ಆದರೆ ಶಂಕರರು ಕರ್ಮಗಳನ್ನು ಪೂರ್ತಿಯಾಗಿ ತಿರಸ್ಕರಿಸಿಲ್ಲ. ಕಾಮ್ಯ -ನಿಷಿದ್ಧ ಕರ್ಮಗಳು ಮಾತ್ರಾ ಮೋಕ್ಷಕ್ಕೆ ಬಾಧಕ , ನಿತ್ಯ ನೈಮಿತ್ತಿಕ ಕರ್ಮಗಳ ಹಾಗಲ್ಲ . ಅವು ಚಿತ್ತ ಶುದ್ಧಿಗೆ ಸಾಧಕಗಳು. ಫಲಾಪೇಕ್ಷೆ ಇಲ್ಲದೆ ಅವುಗಳನ್ನು ಚಿತ್ತ ಶುದ್ಧಿಗಾಗಿ ಅವಶ್ಯ ಮಾಡಬೇಕು. ಕಾರಣ ಚಿತ್ತ ಶುದ್ಧಿಯಿಲ್ಲದವನಿಗೆ ಬ್ರಹ್ಮಾನುಭವ ಸಾಧ್ಯವಿಲ್ಲ. ಅನುಭವ ರಹಿತ ಜ್ಞಾನ , ಪರೋಕ್ಷ ಜ್ಞಾನ ;ಅದು ಮುಕ್ತಿಯಲ್ಲ. ಅಪರೋಕ್ಷಾನುಭೂತಿಗೆ ( ಬ್ರಹ್ಮ ಜ್ಞಾನಕ್ಕೆ) ಕರ್ಮಗಳು ಭೂಮಿಕೆಯನ್ನು ಸಿದ್ಧಗೊಳಿಸುತ್ತವೆ.
:ಆದರೆ ನಂತರದ ಅದ್ವೈತಿಗಳು ಜ್ಞಾಕ್ಕೆ ಕರ್ಮ ಅವಶ್ಯ ವೆನ್ನುತ್ತಾರೆ. ಉಪಾಸನೆ ,ಯೋಗಾಭ್ಯಾಸ, ಇವು ಜ್ಞಾನ ಮತ್ತು ಮುಕ್ತಿಗೆ ಅವಶ್ಯವೆನ್ನುತ್ತಾರೆ. ಹೀಗೆ ಜ್ಞಾನ ಕರ್ಮ ಸಮುಚ್ಚಯ ವಾದವೇ ಸರಿ ಎನ್ನುತ್ತಾರೆ.
:ರಾಮಾನುಜ ದರ್ಶನದಲ್ಲಿ ,ಕರ್ಮಕ್ಕೆ ಪ್ರಧಾನ್ಯವಿದೆ. ಕರ್ಮವನ್ನು ಮಾಡುತ್ತಾ ಇದ್ದರೆ ಈಶ್ವರಾನುಗ್ರಹದಿಂದ, ಮೋಕ್ಷವನ್ನು ಪಡೆಯಬಹುದೆನ್ನುತ್ತಾರೆ. ಏಕೆಂದರೆ ಗೃಹಸ್ತರಿಗೂ ಮೋಕ್ಷ ಪ್ರಾಪ್ತಿಯ ಅವಕಾಶವಿದೆ.
ಮಧ್ವರೂ ಅದೇ ಅಭಿಪ್ರಾಯ ಪಡುತ್ತಾರೆ . ಕರ್ಮಕಾಂಡ ಜ್ಞಾನ ಕಾಂಡಗಳೆಂಬ ಬೇಧವನ್ನು ಒಪ್ಪದೆ,ಅಖಂಡ ವೇದಗಳನ್ನು ಒಪ್ಪುವುದರಿಂದ ಈಬಗ್ಗೆ ಅವರ ಔಜದವೇ ಇಲ್ಲ.
;ಮುಖ್ಯವಾಗಿ ಅವರು ಆತ್ಮನು ಅಥವಾ ಜೀವನು ಜ್ಞಾನಪಡೆದು ಪರಬ್ರಹ್ಮದಲ್ಲಿ ಒಂದಾಗುವುದನ್ನು ಅಥವಾ ಲೀನವಾಗುವುದನ್ನು ಒಪ್ಪುವುದುದಿಲ್ಲ ;ಅದರೀಂದ ಒಂದು ಹೆಜ್ಜೆ ಹಿಂದೆಇರುವ ಬೇವನ ಹತ್ತಿರವಿದ್ದು ಅನಂದ ಪಡುವ ಮೋಕ್ಷಕ್ಕೇ ಅಂತಿಮ ಹಂತವೆನ್ನುತ್ತಾರೆ. ಆದರೆ ಅದನ್ನು ದಾಟಿದ ಪರಬ್ರಹ್ಮದಲ್ಲಿ ಲೀನವಾಗುವ ಕೊನೆಯ ಹಂತವೇ ನಿಜವಾದ ಮೋಕ್ಷವೆಂದು ಶಂಕರರ ಮತ.
:ಓಂತತ್ಸತ್
 
"https://kn.wikipedia.org/wiki/ಜ್ಞಾನ-ಕರ್ಮ_ವಿವಾದ" ಇಂದ ಪಡೆಯಲ್ಪಟ್ಟಿದೆ