ಶತಾವಧಾನಿ ಆರ್. ಗಣೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧ ನೇ ಸಾಲು:
[[ಚಿತ್ರ:Shatavadhani-R-Ganesh.jpg|thumb|right|300px|'ಶತಾವಧಾನಿ, ಡಾ. ಆರ್. ಗಣೇಶ್'']]
'ಆರ್. ಗಣೇಶ್,' ಒಬ್ಬ ಪ್ರಸಿದ್ಧ [http://kn.wikipedia.org/wiki/%E0%B2%85%E0%B2%B5%E0%B2%A7%E0%B2%BE%E0%B2%A8 ಅವಧಾನಿ]ಗಳು. ಕನ್ನಡದಲ್ಲಿ ಅವಧಾನ ಕಲೆಯನ್ನು ಪ್ರಚುರಗೊಳಿಸಿದ್ದಕ್ಕಾಗಿ ಇವರು ಪ್ರಸಿದ್ಧರಾಗಿದ್ದಾರೆ.ವಿದ್ಯೆಗೆ ಅಧಿದೇವತೆ ವಿನಾಯಕ. ಅದೇ ನಾಮಧೇಯದ, ವಿನಾಯಕನ ಸಂಪೂರ್ಣ ಕೃಪಾಶೀರ್ವಾದಗಳನ್ನು ಪಡೆದಿರುವ ಡಾ| ಆರ್. ಗಣೇಶ್ ಅವಧಾನ ಕಲೆಯಲ್ಲಿ ದೇಶದಲ್ಲೇ ದೊಡ್ಡ ಹೆಸರು. ಕಿರಿವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿರುವ ಗಣೇಶ್ ಒಬ್ಬ ಪ್ರತಿಭಾವಂತರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ತಮ್ಮ ಮಹಾಪ್ರಬಂಧಕ್ಕೆ ಇತ್ತೀಚೆಗಷ್ಟೇ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ತನ್ನ ಪ್ರಪ್ರಥಮ ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿ ಡಾ. ಆರ್. ಗಣೇಶ್, ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಿದ್ವಜ್ಜನಗಳಿಂದ, ಅಭಿಮಾನಿಗಳಿಂದ, ಸರ್ಕಾರದಿಂದ ಅನೇಕ ಪ್ರಶಸ್ತಿ ಹಾಗೂ ಬಿರುದುಗಳನ್ನು ಪಡೆದಿರುವ ಇವರು ತಮ್ಮ ಅಮೋಘ ಪಾಂಡಿತ್ಯ, ಅಸಾಧಾರಣ ಚಾತುರ್ಯ, ಸರಳತೆ, ನಿಷ್ಕಪಟತೆ ಹಾಗೂ ಸ್ನೇಹ ಶಾಲೀನ್ಯತೆಯಿಂದ ಪಂಡಿತ-ಪಾಮರ ವರ್ಗಗಳೆರಡರಲ್ಲಿಯೂ, ಪ್ರೀತಿ ಮತ್ತು ಅಭಿಮಾನಕ್ಕೆ ಪಾತ್ರರಾಗಿದ್ದಾರೆ.<ref>http://kshanaprabhaa.blogspot.in/2012/10/a-weekend-with-literature-paintings-and.html</ref>
==ಜನನ, ವಿದ್ಯಾಭ್ಯಾಸ, ವೃತ್ತಿಜೀವನ==
ಗಣೇಶರು, [[ಆರ್. ಶಂಕರನಾರಾಯಣ ಅಯ್ಯರ್]], ಹಾಗೂ [[ಅಲಮೇಲಮ್ಮ]] ದಂಪತಿಗಳ ಪ್ರೀತಿಯ ಮಗನಾಗಿ ೧೯೬೨ ರ, ಡಿಸೆಂಬರ್, ೪ ರಂದು, ಕೋಲಾರದಲ್ಲಿ ಜನಿಸಿದರು. ಅವರ ಅಣ್ಣ , ಶ್ರೀರಂಗ ಅಡ್ವೊಕೇಟಾಗಿ ಕೆಲಸಮಾಡುತ್ತಿದ್ದಾರೆ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿ ಪಡೆದರು. ನಂತರ, ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಮ್. ಎಸ್.ಸಿ. ಪದವಿ ಗಳಿಸಿದರು. ಅಲ್ಲಿಂದ ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ಸಂಸ್ಕೃತದಲ್ಲಿ ಎಮ್. ಎ, ಸ್ನಾತಕೋತ್ತರ ಪದವಿ ಪಡೆದರು. ಗಣೇಶರ ಪೂರ್ವಜರು 'ದೇವರಾಯ ಸಮು ದ್ರಂ' ದಿಂದ ಬಂದು ಕೋಲಾರದಲ್ಲಿ ನೆಲಸಿದವರು. ಮನೆಯಲ್ಲಿ ತಮಿಳು ಭಾಷೆಯನ್ನು ಆಡುತ್ತಿದ್ದರು. ಕೋಲಾರದ ಪರಿಸರದಲ್ಲಿ ತೆಲುಗು ಬಹಳವಾಗಿ ಬಳಕೆಯಲ್ಲಿರುವ ಭಾಷೆಯಾದ್ದರಿಂದ ಅದನ್ನೂ ಕಲಿಯುವ ಆಶೆಯಾಯಿತು. ಕನ್ನಡ ಅವರ ಪ್ರಿಯವಾದ ಭಾಷೆಗಳಲ್ಲೊಂದು. ಅದರಲ್ಲಿ ಅವರು ಕೃತಿರಚನೆಯನ್ನು ಮಾಡಬಲ್ಲವರಾಗಿದ್ದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸ ಬೆಂಗಳೂರಿನಲ್ಲಿ ಜರುಗಿತು. ಪಕ್ಕದ 'ಗೌರಿಬಿದನೂರಿ'ನಲ್ಲಿ ಪ್ರೌಢ ಶಾಲಾಭ್ಯಾಸವಾಯಿತು.
 
==ವ್ಯಕ್ತಿತ್ವ==
ಎಂಜಿನಿಯರಿಂಗ್‌ನಿಂದ ಹಿಡಿದು ತತ್ವಶಾಸ್ತ್ರದವರೆಗೆ ಅನೇಕ ವಿಷಯಗಳಲ್ಲಿ ಪರಿಣತಿಯನ್ನು ಪಡೆದಿರುವ ಇವರು'ಗಣೇಶ್,<ref>http://www.culturalindia.org/data/rganesh.asp</ref> ಕನ್ನಡದ, ಭಾರತದ ಸಾರಸ್ವತ ಲೋಕದಲ್ಲಿ ಅತ್ಯಂತ ಪ್ರತಿಭಾಪೂರ್ಣವ್ಯಕ್ತಿಯಾಗಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಅವರಿಗೆ ಒಬ್ಬ ಕನ್ನಡದ ಹೆಸರಾಂತ ಕವಿಯಾಗಬೇಕೆನ್ನುವ ತುಡಿತವಿತ್ತು. ಆದರೆ ತಂದೆ-ತಾಯಂದಿರ ಆಶೆಗೆ ಮನ್ನಣೆ ಇತ್ತು, ಯಂತ್ರಶಾಸ್ತ್ರದಲ್ಲಿ ಎಂಜಿನಿಯರಿಂಗ್ ಪದವಿ, ಸ್ನಾತ್ತಕೋತ್ತರ ಪದವಿ, ಲೋಹಶಾಸ್ತ್ರ ಹಾಗೂ ವಸ್ತುವಿಜ್ಞಾನದಲ್ಲಿ ತಮ್ಮ ಪಿ.ಎಚ್.ಡಿ. ಪದವಿಯನ್ನು ಪಡೆದು , ವೃತ್ತಿಯಿಂದ ಅಧ್ಯಾಪಕರಾಗಿದ್ದ ವರು, ಇದ್ದಕ್ಕಿದ್ದಂತೆಯೇ ಅವಕಾಶ ದೊರೆತಾಗ, [[ಅವಧಾನ|ಅವಧಾನ ಕಲೆ]]ಯತ್ತ ತಮ್ಮ ಪೂರ್ಣ ಗಮನವನ್ನು ನೀಡಿ, ಅದನ್ನು ಸಂಪೂರ್ಣವಾಗಿ ಅರಗಿಸಿಕೊಂಡು, ಅದರ ಪ್ರಚಾರಕ್ಕಾಗಿ ಶ್ರಮಿಸುತ್ತಿದ್ದಾರೆ. 'ಸಹಸ್ರಾವಧಾನ', ಅವರ ಮುಂದಿನ ಗುರಿಯಾಗಿದೆ.
 
==ಅವಧಾನ ಕಲೆಯಲ್ಲಿ ಸಾಧನೆಗಳು==
ಹಿರಿಯ ಕವಿಶ್ರೇಷ್ಠರಾಗಿದ್ದ [[ಬೆಳ್ಳಾವೆ ನರಹರಿಶಾಸ್ತ್ರಿ]] ಗಳು, ೧೯೩೩-೩೬ ರ ಸಮಯದಲ್ಲಿ ಅವಧಾನವೊಂದನ್ನು ಮಾಡಿ ತೋರಿಸಿದರು. ಅವರಿಗೆ ಪ್ರೇರಣೆಯೆಂದರೆ, ತೆಲುಗಿನ ದಿದುಪತಿ ಚಿದಂಬರ ಶಾಸ್ತ್ರಿಗಳು. ಕನ್ನಡದ ಇತಿಹಾಸದಲ್ಲಿಯೇ ಅವಧಾನ ಕಲೆಯ ಬಗ್ಗೆ ಮೊದಲ ಉಲ್ಲೇಖ ಸಿಗುವುದಾದರೂ ಅವಧಾನ ಮಾಡುವ ಪ್ರತಿಭೆಯುಳ್ಳವರು ಯಾರೂ ಇರಲಿಲ್ಲ. ಲೇಪಾಕ್ಷಿ ಮೆದಾವರಂ ಮಲ್ಲಿಕಾರ್ಜುನ ಶರ್ಮರನ್ನು ಕಂಡು, ಗಣೇಶರು, ತಾವೂ ಪ್ರಭಾವಿತರಾಗಿ ತಮ್ಮ ಗೆಳೆಯರ ಮುಂದೆ ೧೯೮೧ ರಿಂದ ೮೭ ರ ತನಕ ಆಗಾಗ ಮಾಡಿ ತೋರಿಸಿದ್ದರು. ಒಟ್ಟು ೧೩ ಬಾರಿ. ೧೯೮೧ ರಲ್ಲಿ ಗಣೇಶರು ಅವಧಾನಕಲೆಯನ್ನು ಪ್ರಸಿದ್ಧಿಪಡಿಸಿದರು. ಹೀಗೆ ಆರಂಭವಾದ ಅವರ ಆಸಕ್ತಿ, ೧೯೮೭ ರಲ್ಲಿ ಕೋಲಾರದಲ್ಲಿ ಮೊಟ್ಟಮೊದಲು ಮೊಳಕೆಯೊಡೆಯಿತು. ಅದು 'ಡಾ. ಡಿವಿಜಿ'ಯರ ನೂರನೆಯ ವರ್ಧಂತ್ಯೋತ್ಸವ' ದ ಸುಸಂದರ್ಭದಲ್ಲಿ. ಸಾವಿರಾರು ಜನ ನೆರೆದಿದ್ದ ಸಭಾಂಗಣದಲ್ಲಿ ೧೦೦ ನೆಯ ಮತ್ತು ನಂತರ ತಮ್ಮ ೨೦೦ ನೆಯ 'ಅಷ್ಟಾವಧಾನ' ಗಳನ್ನೂ ತಮ್ಮ ತವರೂರಾದ ಕೋಲಾರದಲ್ಲಿಯೇ ನೆರವೇರಿಸಿದರು. ಮಳೆಯನ್ನೂ ಲೆಕ್ಕಿಸದೆ ಬಂದ ಜನಗಳು ಸಾವಿರಾರು. ೮ ಭಾಷೆಗಳಲ್ಲಿ ಸಂಸ್ಕೃತ ಕನ್ನಡ ತೆಲುಗು ಗಳಲ್ಲಿ ಅವಧಾನವನ್ನು ಪ್ರಸ್ತುತಪಡಿಸಿದ್ದರು. 'ಚಿತ್ರಕಾವ್ಯ' ಗಣೇಶ್ ರವರ ವಿಶೇಷತೆಗಳಲ್ಲೊಂದು. ಅವರು, ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಒಮ್ಮೆ ಭೆಟ್ಟಿಕೊಟ್ಟ ಸಮಯದಲ್ಲಿ ೨೦ ಪ್ರದರ್ಶನಗಳನ್ನು ನೀಡಿದರು. ೧೯೯೧ ರ ಡಿಸೆಂಬರ್, ೧೫ ರಂದು ಮೊದಲ ಶತಾವಧಾನ ಪ್ರದರ್ಶನವನ್ನು ಅವರು, ಬೆಂಗಳೂರಿನ ಭಾರತೀಯ ವಿದ್ಯಾಭವನದ ಪ್ರಾಂಗಣದಲ್ಲಿ ಇಟ್ಟುಕೊಂಡಿದ್ದರು. ಇದಾದ ಕೇವಲ ೧೫ ದಿನಗಳಲ್ಲೇ ಮತ್ತೊಂದು ೧೯೯೨ ರಲ್ಲಿ, ಮತ್ತು ೧೯೯೩ ರಲ್ಲಿ ಹಾಗೆಯೇ ೨೦೧೨ ರಲ್ಲಿ, ಸಂಪೂರ್ಣ ಕನ್ನಡದಲ್ಲಿ ನಡೆಸಿಕೊಟ್ಟರು. ಎಳೆಯರಿಗೆ ಅನುಕೂಲವಾಗುವಂತೆ ೨ ಪುಸ್ತಕಗಳ ರಚನೆಮಾಡಿದರು.
Line ೩೮ ⟶ ೩೬:
* "ಚಿತ್-ಪ್ರಭಾನಂದ ಪ್ರಶಸ್ತಿ'
* ೨೦೧೨ ರ ಏರ್ಯ ಪ್ರಶಸ್ತಿ
 
==ಬಾಹ್ಯ ಸಂಪರ್ಕ==
# ವಿಶ್ವಕನ್ನಡದಲ್ಲಿ ರಾ. ಗಣೇಶ ಬಗ್ಗೆ [http://vishvakannada.com/%E0%B2%AA%E0%B2%B0%E0%B2%BF%E0%B2%9A%E0%B2%AF/%E0%B2%B6%E0%B2%A4%E0%B2%BE%E0%B2%B5%E0%B2%A7%E0%B2%BE%E0%B2%A8%E0%B2%BF-%E0%B2%A1%E0%B2%BE-%E0%B2%B0%E0%B2%BE-%E0%B2%97%E0%B2%A3%E0%B3%87%E0%B2%B6/ ಲೇಖನ].
==ಉಲ್ಲೇಖಗಳು==
<References >/
 
[[ವರ್ಗ:ಕವಿಗಳು]]