ಶಿವನ ಸಮುದ್ರ ಜಲಪಾತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
New page: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯು ಎರಡು ...
 
ಚು ಚಿತ್ರವನ್ನು ಅಳವಡಿಸಲಾಗಿದೆ
೧ ನೇ ಸಾಲು:
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಶಿವನಸಮುದ್ರದ ಬಳಿ ಕಾವೇರಿ ನದಿಯು ಎರಡು ಕವಲುಗಳಾಗಿ ಹರಿದು ಎರಡು ಸುಂದರ ಜಲಪಾತಗಳನ್ನು ಸೃಷ್ಟಿಸಿದೆ. ಇವೇ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು. ಶಿಂಷಾ ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. [[ಮಧ್ಯರಂಗ]] ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. ಮಳೆಗಾಲದಲ್ಲಿ ಮೈತುಂಬಿಕೊಂಡು ಈ ಜಲಪಾತಗಳಲ್ಲಿ ಧುಮುಕುವ ಕಾವೇರಿಯ ನೋಟ ವರ್ಣಿಸಲಸದಳ.[[ಬೆಂಗಳೂರು]] [[ಕೊಳ್ಳೇಗಾಲ]] ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ.
 
 
[[Image:Gaganachukki_Falls.jpg]] ಗಗನಚುಕ್ಕಿ ಜಲಪಾತದ ಒಂದು ನೋಟ
"https://kn.wikipedia.org/wiki/ಶಿವನ_ಸಮುದ್ರ_ಜಲಪಾತ" ಇಂದ ಪಡೆಯಲ್ಪಟ್ಟಿದೆ