ರಾಜಾ ರವಿ ವರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧೭ ನೇ ಸಾಲು:
 
 
೧೮೬೬ ರಲ್ಲಿ, "ವೀರಶೃಂಖಲೆ ", ಪ್ರಶಸ್ತಿಯ ಜೊತೆಗೆ, ತಿರುವನಂತಪುರದ ಅರಮನೆಯ ಆಸ್ಥಾನಕಲಾವಿದನಾಗಿ, ನೇಮಿಸಲ್ಪಟ್ಟರು ; ತಿಂಗಳಿಗೆ ೫೦ ರೂಗಳ ಮಾಸಾಶನದ ಏರ್ಪಾಡುಮಾಡಲಾಯಿತು. ೧೮೬೮ ರಲ್ಲಿ, ಥಿಯೊಡರ್ ಜೆನ್ಸನ್, ಎಂಬ ಐರೋಪ್ಯ ಚಿತ್ರಕಲಾಕಾರನು ಕೇರಳಕ್ಕೆ ಬಂದಿದ್ದನು. ತನ್ನ ಐರೋಪ್ಯ ಚಿತ್ರಕಲೆಯ ವಿವರಗಳನ್ನು ತೋರಿಸಿ ಅಲ್ಲಿನ ಭಾವ ವೈವಿಧ್ಯತೆಗಳನ್ನು ವಿವರಿಸಿದನು. ತೈಲ ವರ್ಣಚಿತ್ರಗಳ ಸಂಯೋಜನೆಯನ್ನು ಅವನು ರವಿಗೆ ಹೆಳಿಕೊಟ್ಟನು. ಭಾರತೀಯ ಚಿತ್ರಕಲೆಯಲ್ಲಿ ತುಂಬಬೇಕಾದ, ಗಂಭೀರ ವದನ, ಮಹಿಳೆಯಲ್ಲಿ ಇರಬೇಕಾದ ನಾಚಿಗೆ, ವಿಸ್ಮಯ, ಭೀತಿ, ಚಾಂಚಲ್ಯ, ಧೀರತೆ, ಮಂದಹಾಸ, ಇತ್ಯಾದಿಗಳನ್ನು ನಮ್ಮ ದೇಶದ ವರ್ಣಚಿತ್ರಗಳಲ್ಲಿ ಮಾತ್ರ ಕಾಣಬಹುದು. ರವಿಯವರು ಅದನ್ನು ತಾವೇ ವೀಕ್ಷಿಸಿ ಕಲಿತುಕೊಂಡರು. ಮತ್ತು ರವಿ ದೂರದಿಂದ ನೋಡಿಯೇ ಹಲವಾರು ಸೂಕ್ಷ್ಮತೆಗಳನ್ನು ಗಮನಿಸಿ ಮನನಮಾಡಿದರು. ಅರಮನೆಯಲ್ಲಿ ಚಿತ್ರಕಲೆಗಾಗಿಯೇ ಒಂದು ಪ್ರತ್ಯೇಕ ಕೊಠಡಿಯನ್ನು ಮೀಸಲಾಗಿಟ್ಟಿದ್ದರು. ಹಿರಿಯ ಕಲಾವಿದರಾದ, ರಾಮಸ್ವಾಮಿ ನ್ಯಾಕರ್, ಮತ್ತು ಆರ್ಮುಗಂ ಪಿಳ್ಳೆಯವರ ಪ್ರಭಾವವೂ, ರವಿಯವರಮೇಲೆ ಆಯಿತು. ಈ ಗುರುಗಳು ರವಿಯವರಿಗೆ ತಕ್ಕ ಕಲಾಮೂಲ ಅಡಿಪಾಯವನ್ನು ಸುಸ್ಥಿರವಾಗಿ ಹಾಕಿಕೊಟ್ಟಿದ್ದರಿಂದ ಕಲೆಯ ಹೊಸ ಹೊಸ ಪದ್ಧತಿಗಳು, ವಿನ್ಯಾಸಗಳೂ ಬಂದಾಗ, ಪ್ರಾಕಾರಗಳನ್ನು ಅರಿಯಲು ಅವರಿಗೆ ತೊಂದರೆಯೇನೂ ಆಗಲಿಲ್ಲ. ರವಿವರ್ಮರು ತಮ್ಮ ಸ್ವಂತ ಸಹಾಯದ ಕಲಿಕೆಯಿಂದಲೇ ಕಲೆಯನ್ನು ತಮ್ಮದಾಗಿಸಿಕೊಂಡರು. ಕಲೆಗೆ ಪೂರಕವಾದ ಮಾಹಿತಿಗಳನ್ನು ಅವರು, ಪುರಾಣ ಪುಣ್ಯಕಥೆಗಳನ್ನು ಪಠಿಸುವ ಮೂಲಕ ತಮ್ಮ ಕಲಾ-ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಂಡರು. ರವಿಯವರ ವಿವಾಹ, ರಾಜಕುಟುಂಬಕ್ಕೆ ಸೇರಿದ ಪುರೂರು ಟ್ಟಾತಿನಾಳ್ ರಾಣಿ,(ರಾಣಿ ಭಾಗೀರತಿಬಾಯಿ)(ಕೊಚ್ಚು ಪಂಗಿ ಅಮ್ಮ) ಎಂಬ ಕನ್ಯೆಯೊಡನೆ ನೆರವೇರಿತು. ಈಕೆ ಮಾವೇಲಿಕ್ಕರ ಮನೆತನದವಳು. ಈ ದಂಪತಿಗಳಿಗೆ ೩ ಗಂಡುಮಕ್ಕಳು ಹಾಗೂ ೨ ಹೆಣ್ಣು ಮಕ್ಕಳು ಜನಿಸಿದರು. ಚೊಚ್ಚಲು ಮಗ ಕೇರಳವರ್ಮ, ೧೮೭೬ ರಲ್ಲಿ ಚೊಚ್ಚಲು ಜನಿಸಿದನು. ಎರಡನೆಯ ಮಗ ಕೇರಳವರ್ಮ,ರಾಮವರ್ಮ ೧೮೭೯ ರಲ್ಲಿ ರಾಮವರ್ಮ ಹುಟ್ಟಿದ . ಮೂರನೆಯ ಮಗನೇ ರಾಜ ರಾಜ ವರ್ಮ. ಮಹಾಪ್ರಭ, ಮತ್ತು ಉಮಬಾಯಿ ಹೆಣ್ಣುಮಕ್ಕಳು. ಮಹಾಪ್ರಭ ತಂದೆಯವರ ೨ ಪ್ರಸಿದ್ಧ ತೈಲಚಿತ್ರಗಳಿಗೆ ರೂಪದರ್ಶಿಯಾಗಿದ್ದರು. ಇವರ ಮಗಳೇ ಮಹರಾಣೀ ಸೇತುಲಕ್ಷ್ಮಿ ಬಾಯಿ. ಈಕೆ ತಿರುವಂತಪುರದ ಮಹಾರಾಜರನ್ನು ಮದುವೆಯಾಡಳು. ಕೇರಳವರ್ಮ ೧೯೧೨ ರಲ್ಲಿ ಎಲ್ಲೋ ಕಾಣೆಯಾದನು. ಅವನ ಯಾವ ಸುಳಿವೂ ತಿಳಿಯಲಿಲ್ಲ. ರಾಮವರ್ಮ, ಬೊಂಬಾಯಿನ ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ ನಲ್ಲಿ ಚಿತ್ರಕಲಾವಿದ್ಯಾಭ್ಯಾಸಮಾಡಿದನು. ಈತನು ದಿವಾನ್ ಪೀ. ಜಿ. ಎನ್ ಉನ್ನಿಥನ್ ರವರ ಸೋದರಿ, ಗೌರಿ ಕುಂಜಮ್ಮನವರೊಂದಿಗೆ ವಿವಾಹ ಮಾಡಿಕೊಂಡನು.
 
೮೭ ನೇ ಸಾಲು:
 
ರಾಜಾ ರವಿವರ್ಮರು ತಮ್ಮ ೫೮ ನೆಯ ಸಣ್ಣ ಪ್ರಾಯದಲ್ಲೇ ೨, ಅಕ್ಟೋಬರ್, ನವೆಂಬರ್, ೧೯೦೬ ರಲ್ಲಿ ನಿಧನರಾದರು. ಭಾರತಸರ್ಕಾರ ಅವರ ಗೌರವಾರ್ಥವಾಗಿ ಅಂಚೆಚೀಟಿಯನ್ನು ಹೊರಡಿಸಿದ್ದರು.
 
Selected Readings :
 
1. Photos of Gods, the printed image and Political struggle in India, By Christopher,Pinney,
London, Reaktion Book.
 
 
"https://kn.wikipedia.org/wiki/ರಾಜಾ_ರವಿ_ವರ್ಮ" ಇಂದ ಪಡೆಯಲ್ಪಟ್ಟಿದೆ