ಮೃದಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
 
 
ಮೃದಂಗವನ್ನು ತಯಾರಿಸಲು ಬೇಕಾಗುವ ಕಚ್ಚಾ ಸಾಮಗ್ರಿಗಳು ಮರ, ಚರ್ಮ ಮತ್ತು ಕರಣೆ ಕಲ್ಲು.
 
 
ಒಳಗೆ ಟೊಳ್ಳಾಗಿರುವ ಮರದ ಭಾಗಕ್ಕೆ ಹೊಳವು ಅಥವಾ ಕಳಸಿಗೆ ಎಂದು ಹೆಸರು. ಮೃದಂಗಕ್ಕೆ ಆ ಹೆಸರು ಬಂದದ್ದು "ಮೃತ್" ಮತ್ತು "ಅಂಗ" ಎಂಬ ಎರಡು ಸಂಸ್ಕೃತ ಪದಗಳಿಂದ. ಮೃತ್ ಎಂದರೆ ಮಣ್ಣು. ಪ್ರಾಚೀನ ಕಾಲದಲ್ಲಿ ಕಳಸಿಗೆಯನ್ನು ಮಣ್ಣಿನಿಂದಲೇ ತಯಾರಿಸುತ್ತಿದ್ದರು. ದೀರ್ಘ ಬಾಳಿಕೆಯ ದೃಷ್ಟಿಯಿಂದ ಈಗ ಹಲಸು, ಹೆಬ್ಬಲಸು, ಸಂಪಿಗೆ, ತೇಗ, ಬೇವು ಮುಂತಾದ ಮರಗಳಿಂದ ತಯಾರಿಸಲಾಗುತ್ತಿದೆ. ಹೊಳವು ಒಳಗೆ ಖಾಲಿ ಇದ್ದು, ಮಧ್ಯದಲ್ಲಿ ಉಬ್ಬಿ, ಕಡೆಯ ಭಾಗಗಳಲ್ಲಿ ಚಿಕ್ಕದಾಗಿರುತ್ತದೆ. ಕಡೆಯ ಭಾಗಗಳನ್ನು ಎಡ ಮತ್ತು ಬಲ ಎಂದು ಕರೆಯುತ್ತಾರೆ. ಬಲ ಭಾಗದ ವ್ಯಾಸವು ಎಡ ಭಾಗಕ್ಕಿಂತ ಕಡಿಮೆ ಇರುತ್ತದೆ. ಉಬ್ಬಿದ ಭಾಗವನ್ನು "ಹರಡ" ಅಥವಾ "ಕಡಗ" ಎಂದು ಕರೆಯುತ್ತಾರೆ. ಹೊಳವಿನ ಉದ್ದ ಹಾಗೂ ಎರಡು ಮುಖಗಳ ವ್ಯಾಸ ನೇರವಾಗಿ ಮೃದಂಗದ ಶ್ರುತಿಗೆ ಸಂಬಂಧಿಸಿದೆ. ಉದ್ದ ಹಾಗೂ ಬಲದ ವಾಸವ್ಯಾಸ ಹೆಚ್ಚಿದ್ದರೆ ತಗ್ಗು ಶ್ರುತಿಗೆ ಹೊಂದಿಸಬಹುದು. ಕಡಿಮೆಯಿದ್ದರೆ ಹೆಚ್ಚು ಶ್ರುತಿಗೆ ಹೊಂದಿಸಬಹುದು.
 
 
೨೩ ನೇ ಸಾಲು:
 
 
ಕರಣೆಯು ಒಂದು ವಿಶಿಷ್ಟವಾದ ಕಲ್ಲಿನಿಂದ ತಯಾರಿಸಲ್ಪಡುತ್ತದೆ. ಇದು ಕಪ್ಪು ಬಣ್ಣದ್ದಾಗಿದ್ದು, ಮ್ಯಾಂಗನೀಸ್ ಮತ್ತು ಕಬ್ಬಿಣದ ಅಂಶಗಳನ್ನು ಹೊಂದಿದೆ. ಈ ಕಲ್ಲನ್ನು ಅರೆದು, ನುಣುಪಾದ ಪುಡಿ ತಯಾರಿಸಿ, ಅನ್ನದ ಜೊತೆಗೆ ಹದವಾಗಿ ಕಲಸಿ ಉಂಡೆ ಮಾಡಲಾಗುತ್ತದೆ. ಬಲ ಮುಚ್ಚಿಗೆಯ ಮಧ್ಯದಲ್ಲಿ ಮೊದಲು ಅನ್ನದ ಅಂಟನ್ನು ಲೇಪಿಸಿ, ಅದರ ಮೇಲೆ ಈ ಉಂಡೆಯ ಸಣ್ಣ ಸಣ್ಣ ಗುಳಿಗೆಗಳನ್ನು ಒಂದೊಂದಾಗಿ ಚಪ್ಪಟೆಯಾಗಿ ಇಡಲಾಗುತ್ತದೆ. ಪ್ರತಿ ಗುಳಿಗೆ ಪದರವನ್ನು ಲೇಪಿಸಿದ ನಂತರ ನಯವಾದ ಒಂದು ಕಲ್ಲಿನಿಂದ ಉಜ್ಜಲಾಗುತ್ತದೆ. ಹೀಗೆ ವೃತ್ತಾಕಾರವಾಗಿ ಹಚ್ಚುವಾಗ ಮಧ್ಯ ಭಾಗವು ಸ್ವಲ್ಪ ದಪ್ಪವಾಗಿಯೊ, ಸುತ್ತಲೂ ತೆಳುವಾಗಿ ಇದ್ದು, ಸಣ್ಣ ಸಣ್ಣ ಬಿರುಕುಗಳು ಏರ್ಪಡುತ್ತವೆ. ಮೃದಂಗದಿಂದ ಒಳ್ಳೆಯ ನಾದ ಬರಲು ಈ ಬಿರುಕುಗಳೇ ಕಾರಣ. ಈ ರೀತಿ ಕರಣೆಯನ್ನು ಹಾಕಿದ ನಂತರ ಪೊರಕೆಯ ಕಡ್ಡಿಗಳನ್ನು ಸಣ್ಣ ಸಣ್ಣ ಚೂರು ಮಾಡಿ (ಹದಿನಾರು), ರೆಪ್ಪೆ ಮತ್ತು ಛಾಪು ಪದರಗಳ ಮಧ್ಯೆ ಸೇರಿಸಲಾಗುತ್ತದೆ. ಕಡ್ಡಿಗಳ ಬದಲಾಗಿ ಕರಣೆ ಕಲ್ಲಿನ ತರಿಯನ್ನು ಕೂಡಾ (ಕಪ್ಪಿ) ಹಾಕುವ ರೂಢಿ ಇದೆ. ಮೃದಂಗ ವಾದಕರು ತಮ್ಮ ಇಚ್ಛೆಯಂತೆ ಕಡ್ಡಿ ಅಥವಾ ಕಪ್ಪಿ ಹಾಕಿದ ಮೃದಂಗವನ್ನು ಬಳಸುತ್ತಾರೆ.
 
 
೨೯ ನೇ ಸಾಲು:
== ಮೃದಂಗದ ಶ್ರುತಿ ಸೇರಿಸುವ ಕ್ರಮ ==
 
[[ಚಿತ್ರ:c:\DSCF0088.jpg]]
 
ಆಧಾರ ಶ್ರುತಿಯನ್ನು ಅವಲಂಭಿಸಿ ಮೃದಂಗವನ್ನು ಶ್ರುತಿ ಮಾಡಲಾದುತ್ತದೆಮಾಡಲಾಗುತ್ತದೆ. ಇದಕ್ಕೆ ಒಂದು ಕಲ್ಲುಗುಂಡು ಮತ್ತು ಒಂದು ಗಟ್ಟಿ ಮರದ ತುಂಡು (ಗಟ್ಟ ಅಥವಾ ಕುಟ್ಟಿ) ಅಗತ್ಯ. ಮೃದಂಗದ ಶ್ರುತಿ ಹೆಚ್ಚಿಸಲು ಬಲ ಮುಚ್ಚಿಗೆಯ ಇಂಡಿಗೆಯ ಮೇಲೆ ಗಟ್ಟವನ್ನು ಇಟ್ಟು, ಕಲ್ಲಿನಿಂದ ಗಟ್ಟಕ್ಕೆ ಹೊಡೆಯಲಾಗುತ್ತದೆ. ಶ್ರುತಿಯನ್ನು ತುಂಬಾ ಹೆಚ್ಚಿಸಬೇಕಾದರೆ ಬಾರುಗಳ ಮಧ್ಯೆ ಗಟ್ಟಗಳನ್ನು ಸೇರಿಸಲಾಗುತ್ತದೆ. ಶ್ರುತಿಯನ್ನು ಕಡಿಮೆ ಮಾಡಲು ಇಂಡಿಗೆಯ ಕೆಳಗೆ ಗಟ್ಟವನ್ನು ಇಟ್ಟು ಕಲ್ಲಿನಿಂದ ಗಟ್ಟಕ್ಕೆ ಹೊಡೆಯಲಾಗುತ್ತದೆ. ಆಧಾರ ಶ್ರುತಿಯನ್ನು ಕೇಳುತ್ತಾ, "ಛಾಪು" ಮತ್ತು "ಧೀಂ" ಶಬ್ದಾಕ್ಷರಗಳನ್ನು ನುಡಿಸಿ ಶ್ರುತಿ ಸೇರಿಸಲಾಗುವುದು.
 
 
೪೯ ನೇ ಸಾಲು:
 
 
--[[ಸದಸ್ಯ:218.248.47.12|218.248.47.12]] ೧೦:೦೯, ೧೨ ಆಗಸ್ಟ್ ೨೦೦೭ (UTC) ಬಾಲಚಂದ್ರ ಆಚಾರ್, ಉಡುಪಿ
 
 
"https://kn.wikipedia.org/wiki/ಮೃದಂಗ" ಇಂದ ಪಡೆಯಲ್ಪಟ್ಟಿದೆ