ಯಲ್ಲಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬೧ ನೇ ಸಾಲು:
'''ಯಲ್ಲಾಪುರ''' [[ಉತ್ತರ ಕನ್ನಡ]] ಜಿಲ್ಲೆಯ ಒಂದು ತಾಲೂಕು ಕೇಂದ್ರ.
[[ಹುಬ್ಬಳ್ಳಿ]]ಯನ್ನು [[ಅಂಕೋಲಾ]]ಗೆ ಸಂಪರ್ಕಿಸುವ NH63ರಲ್ಲಿ ಸಾಗಿದರೆ ಸಿಗುವ ಪ್ರಕೃತಿ ಸೊಬಗಿನ ರಮ್ಯ ತಾಣ. ಹೆಚ್ಚಾಗಿ ಕೃಷಿಕರನ್ನೇ ಹೊಂದಿರುವ ಈ ತಾಲೂಕು ಅಡಿಕೆ ಬೆಳೆಯನ್ನು ಜಾಸ್ತಿ ಹೊಂದಿದೆ. ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ ಈ ಪ್ರದೇಶವು ಹೇರಳ ಸಂಖ್ಯೆಯ ಝರಿ-ತೊರೆಗಳಿಂದ ಕೂಡಿದ್ದು, ಮನಸ್ಸಿಗೆ ಮುದ ನೀಡುವ ಹತ್ತು ಹಲವು ಜಲಪಾತಗಳನ್ನು ತನ್ನ ಒಡಲೊಳಗೆ ಬಚ್ಚಿಟ್ಟುಕೊಂಡಿದೆ. ಅವುಗಳಲ್ಲಿ ಪ್ರಮುಖವಾದುವೆಂದರೆ [[ಸಾತೊಡ್ಡಿ]] ಮತ್ತು [[ಮಾಗೋಡು]] ಜಲಪಾತಗಳು. ಇವಲ್ಲದೇ, ಅಜ್ಜಿಗುಂಡಿ, ಬೆಣ್ಣೆಜಡ್ಡಿ, ಕಂಚಿನಗದ್ದೆ, ದಬ್ಬೇಸಾಲು ಜಲಪಾತಗಳು ಇನ್ನೂ ಎಲೆ ಮರೆಯ ಕಾಯಿಗಳಂತೆ ಇವೆ. ಬಹುಶಃ ಇವುಗಳನ್ನು ತಲುಪಲು ಸರಿಯಾದ ದಾರಿ ಇಲ್ಲದಿರುವುದರಿಂದಲೇ ಏನೋ ಇವು ಇನ್ನೂ ಬೆಳಕಿಗೆ ಬಂದಿಲ್ಲ.ಮಾಗೋಡು ಜಲಪಾತಕ್ಕೆ ಹೊಗುವ ದಾರಿಯಲ್ಲಿ ಸಿಗುವ ಕವಡೀಕೆರೆ, ಚಂದಗುಳಿ, ಜೇನ್ ಕಲ್ ಗುಡ್ಡ ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಯಲ್ಲಾಪುರವೆಂದರೆ ಅಚ್ಚ ಮಲೆನಾಡು. ತಂಪಾದ ವಾತಾವರಣದೊಂದಿಗೆ ಸಸ್ಯ ಶ್ಯಾಮಲೆಯ ವಾಸವು ಹೇರಳವಾಗಿದೆ. . ಇಲ್ಲಿ ಅನೇಕ ವಿಧವಾದ ಜನಾಂಗಗಳಿದ್ದು ಹವ್ಯಕ, ಒಕ್ಕಲಿಗ, ಗೌಡ, ಸಿದ್ದಿ ಜನಾಂಗದವರೂ ಕೂಡ ವಾಸವಾಗಿದ್ದಾರೆ. ಇಲ್ಲಿ ಭತ್ತವನ್ನು ಆಹಾರ ಬೆಳೆಯಾಗಿ ನಂಬಿಕೊಂಡರೆ, ಅಡಿಕೆ, ತೆಂಗು, ಏಲಕ್ಕಿ, ಮೆಣಸು, ಬಾಳೆ ಮುಂತಾದವುಗಳುಮುಂತಾದವು ವಾಣಿಜ್ಯ ಬೆಳೆಯಾಗಿದೆ.
[[ಚಿತ್ರ:[[File:Satoddi.jpg|thumb|right|ಸಾತೊಡ್ಡಿ ಜಲಪಾತ]]
 
"https://kn.wikipedia.org/wiki/ಯಲ್ಲಾಪುರ" ಇಂದ ಪಡೆಯಲ್ಪಟ್ಟಿದೆ