ಆರ್.ಕೆ.ನಾರಾಯಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
}}
 
'''ರಾಶಿಪುರಂ ಕೃಷ್ಣಸ್ವಾಮಿ ನಾರಾಯಣ್''' <ref>http://www.biography.com/people/rk-narayan-38880</ref>([[ಅಕ್ಟೋಬರ್ ೧೦]], [[೧೯೦೬]] - [[ಮೇ ೧೩]], [[೨೦೦೧]]) [[ಭಾರತ]]ದ ಪ್ರಸಿದ್ಧ ಕಾದಂಬರಿಕಾರರಲ್ಲಿ ಒಬ್ಬರು. [[ಆಂಗ್ಲ]] ಭಾಷೆಯಲ್ಲಿ ಬರೆದ ನಾರಾಯಣ್ ಅವರ ಕಾದಂಬರಿಗಳು ಪಾತ್ರಗಳ ನೈಜತೆ, ಸರಳತೆ ಮತ್ತು ಮೃದು ಹಾಸ್ಯಕ್ಕೆ ಹೆಸರಾಗಿವೆ. ಅವರ ಬಹುಪಾಲು ಕಥೆಗಳು "ಮಾಲ್ಗುಡಿ" ಎಂಬ ಕಾಲ್ಪನಿಕ [[ದಕ್ಷಿಣ ಭಾರತ]]ದ ಸ್ಥಳದಲ್ಲಿ ನಡೆಯುತ್ತವೆ. <ref>http://www.goodreads.com/author/show/1305302.R_K_Narayan</ref>
 
ನಾರಾಯಣ್ ಅವರ ಮೊದಲ ಕಾದಂಬರಿ '''ಸ್ವಾಮಿ ಮತ್ತು ಗೆಳೆಯರು'''. <ref>http://www.iloveindia.com/indian-heroes/rk-narayan.html</ref>ಮೊದಲಿಗೆ ಯಾವ ಪ್ರಕಾಶಕರೂ ಇದನ್ನು ಪ್ರಕಟಿಸಲು ಒಪ್ಪಿರಲಿಲ್ಲ. ನಂತರ ಇದರ ಹಸ್ತಪ್ರತಿಯನ್ನು [[ಬ್ರಿಟಿಷ್]] ಲೇಖಕ ಗ್ರಹಾಂ ಗ್ರೀನ್ ಗೆ ಕಳಿಸಿದಾಗ ಅವರು ಅದನ್ನು ಇಷ್ಟಪಟ್ಟು ಅದರ ಪ್ರಕಟಣೆಗೆ ಕಾರಣರಾದರು. ಆನಂತರ ಗ್ರಹಾಂ ಗ್ರೀನ್ ನಾರಾಯಣ್ ಅವರ ಜೀವನಪರ್ಯಂತ ಆಪ್ತ ಮಿತ್ರರೂ ಮತ್ತು ಅಭಿಮಾನಿಯೂ ಆಗುಳಿದರು. ಈ ಮೊದಲ ಪುಸ್ತಕದ ನಂತರ ನಾರಾಯಣ್ ಅನೇಕ ಕಾದಂಬರಿಗಳನ್ನು ಬರೆದರು. ಇವರು ಕೆಲ ಕಾದಂಬರಿಗಳಲ್ಲಿ ತಮ್ಮ ಜೀವನದ ಅಂಶಗಳನ್ನೂ ಸೇರಿಸಿದ್ದಾರೆ - ಉದಾಹರಣೆಗೆ '''ದಿ ಇಂಗ್ಲಿಷ್ ಟೀಚರ್'''. ನಾರಾಯಣ್ ರ ಬಹುಪಾಲು ಕೃತಿಗಳು ದೈನಂದಿನ ಜೀವನವನ್ನು ಕುರಿತವು. ಭಾರತೀಯ ಪುರಾಣಗಳ ಬಗ್ಗೆಯೂ ಕೆಲವು ಪುಸ್ತಕಗಳನ್ನು ಬರೆದಿದ್ದಾರೆ.<ref>http://www.preservearticles.com/2012031126493/short-biography-of-rk-narayan.html</ref>
 
ಪದ್ಮಭೂಷಣ, ಪದ್ಮವಿಭೂಷಣ, ಎ.ಸಿ.ಬೆನ್‌ಸನ್ ಮೆಡಲ್,<ref>http://www.rigzin.freeservers.com/rknarayan.htm</ref> ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ದಿವಂಗತ ಆರ್.ಕೆ.ನಾರಾಯಣ್ ಅವರ ಮೈಸೂರಿನ ಮನೆಯನ್ನು ಪಾರಂಪರಿಕ ಕಟ್ಟಡ ಎಂದು ಸರ್ಕಾರ ಘೋಷಿಸಿದೆ. ಖ್ಯಾತ ಆಂಗ್ಲಭಾಷಾ ವ್ಯಂಗ್ಯಚಿತ್ರಕಾರ [[ಆರ್.ಕೆ.ಲಕ್ಷ್ಮಣ್]]ಇವರ ಸಹೋದರರಾಗಿದ್ದಾರೆ.<ref> http://tatabuildingindia.com/New-Site/index.php/inspiring-indians-r-k-narayan</ref>
 
== ನಾರಾಯಣ್ ಅವರ ಮುಖ್ಯ ಕಾದಂಬರಿಗಳು ==
"https://kn.wikipedia.org/wiki/ಆರ್.ಕೆ.ನಾರಾಯಣ್" ಇಂದ ಪಡೆಯಲ್ಪಟ್ಟಿದೆ