ಪದಬಂಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
 
==ಪ್ರೊ.ಜಿ.ವೆಂಕಟಸುಬ್ಬಯ್ಯನವರು ಬರೆದ ಮುನ್ನುಡಿಯ ಪೂರ್ಣಪಾಠ==
ಮುನ್ನುಡಿ:
ಇಂಗ್ಲಿಷ್ ಭಾಷೆಯಲ್ಲಿ ಉಪಯೋಗದಲ್ಲಿರುವ ಅಡಿossತಿoಡಿಜCrossword puzzle ಠಿuzzಟe ಎಂಬ ಶಬ್ದಕ್ಕೆ ಕನ್ನಡದಲ್ಲಿ ಮಾಡಿಕೊಂಡಿರುವ ‘`ಪದಬಂಧ`’ಎಂಬ ಮಾತು ಈಗ ತುಂಬಾ ಪ್ರಚಾರದಲ್ಲಿದೆ. ನಿಜವಾಗಿ ಇದು ಒಂದು ಸಮಸ್ಯೆಯ ಪ್ರಪಂಚ. ಇದರಲ್ಲಿ ಮೇಲಿನಿಂದ ಕೆಳಕ್ಕೆ 9, 10 ಅಥವಾ 11 ಮನೆಗಳು, ಅಡ್ಡಡ್ಡಲಾಗಿ ಅಷ್ಟೇ ಸಂಖ್ಯೆಯ ಮನೆಗಳು ಇರುತ್ತವೆ. ಆ ಮನೆಗಳಲ್ಲಿ ನಿಯಮಬದ್ಧವಾಗಿ ಕೆಲವು ಮನೆಗಳನ್ನು ಬಿಟ್ಟು ಮಿಕ್ಕ ಮನೆಗಳಲ್ಲಿ ಮೇಲಿನಿಂದ ಕೆಳಕ್ಕೂ, ಅಡ್ಡಡ್ಡಲಾಗಿಯೂ ಶಬ್ದಗಳನ್ನು ಸೇರಿಸಬೇಕು. ಈ ಶಬ್ದಗಳನ್ನು ಆರಿಸಿಕೊಳ್ಳಲು ಎರಡು ಕಡೆಗಳಿಗೂ ಸೂಕ್ತವಾದ ಸೂಚನೆಗಳಿರುತ್ತವೆ. ಆ ಸೂಚನೆಯ ಬೆನ್ನು ಹತ್ತಿ ಓದುಗರು ಸರಿಯಾದ ಪದಗಳನ್ನು ಹುಡುಕಿ ಆ ಮನೆಗಳಿಗೆ ತುಂಬ ಬೇಕು. ಹೀಗೆ ಮಾಡುವಾಗ ಓದುಗರಿಗೆ ಆಶ್ಚರ್ಯವಾಗುವ ಹಾಗೆ ಅನೇಕ ಹೊಸ ಹೊಸ ಪದಗಳ ಪರಿಚಯವಾಗುತ್ತದೆ. ಕೆಲವು ವೇಳೆ ಒಂದೊಂದು ಸೂಚನೆಗೂ ಉಚಿತವಾಗುವ ಅನೇಕ ಪದಗಳು ಇರುತ್ತವೆ. ಪದಬಂಧಕಾರರು ತಮ್ಮ ಉತ್ತರದಲ್ಲಿ ಆರಿಸಿಕೊಂಡಿರುವ ಪದಗಳಿಗೆ ಸರಿಹೊಂದುವ ಪದವನ್ನು ನೀವೂ ಆರಿಸಿದರೆ ಅದೃಷ್ಟ ಫಲಿಸುತ್ತದೆ. ಇದೇ ಸಮಸ್ಯೆಯಲ್ಲಿರುವ ಸೊಗಸು. ನಿಜವಾಗಿ ಈ ಸಮಸ್ಯೆಗಳನ್ನು ಬಿಡಿಸುವಾಗ ಓದುಗರಿಗೆ ಗೊತ್ತಿಲ್ಲದಂತೆಯೇ ಅವರು ಅನೇಕ ನಿಘಂಟುಗಳನ್ನು ಉಪಯೋಗಿಸಬೇಕಾಗುತ್ತದೆ. ಇಂಗ್ಲಿಷ್‍ನಲ್ಲಿ ಈ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕಾಗಿಯೇ ರಚಿಸಿರುವ ನಿಘಂಟಗಳಿರುತ್ತವೆ. ಕನ್ನಡದಲ್ಲಿ ಆ ಅನುಕೂಲವಿಲ್ಲ. ಆದುದರಿಂದ ಪದಬಂಧವನ್ನು ತುಂಬಲು ಪ್ರಯತ್ನಪಡುವವರಿಗೆ ಅನೇಕ ಶಬ್ದಗಳು ಹೊಳೆದರೂ ಸರಿಯಾದವು ಯಾವುದು ಎಂಬುದು ತಕ್ಷಣ ಗೊತ್ತಾಗುವುದಿಲ್ಲ. ಇದೇ ಇರುವ ತೊಂದರೆ, ಆದರೂ ಓದುಗರಲ್ಲಿ ಎಷ್ಟೊಂದು ಜನ ಈ ಪದಬಂಧಗಳನ್ನು ತುಂಬಲು ಪ್ರಯತ್ನ ಪಡುತ್ತಾರೆ ನೋಡಿ! ಅವರ ಸಂಖ್ಯೆ ಅಪಾರವಾಗಿದೆ. ನಾನು ಇನ್ನೂ ಸ್ವಲ್ಪ ಕಡಿಮೆ ವಯಸ್ಸಿನವನಾಗಿದ್ದರೆ ನಾನೇ ಒಂದು ಪದಬಂಧ ನಿಘಂಟನ್ನು ತಯಾರಿಸಿ ಬಿಡುತ್ತಿದ್ದೆ. ಈಗ ಯಾರಾದರೂ ಯುವ ವಿದ್ವಾಂಸರು ದೊರೆತರೆ ಅವರ ಸಹಾಯದಿಂದ ಅಂಥದೊಂದನ್ನು ಸಿದ್ಧಪಡಿಸಬೇಕು.
ಅ.ನಾ. ಪ್ರಹ್ಲಾದರಾವ್ ಅವರು ಸಿದ್ಧಪಡಿಸಿರುವ ಈ ಪುಸ್ತಕದಲ್ಲಿ 220 ಪುಟಗಳಿದ್ದು, ಸುಮಾರು 170 ಪದಬಂಧಗಳು ಅಡಕಗೊಂಡಿವೆ. ಪ್ರತಿಯೊಂದರಲ್ಲಿಯೂ ಓದುಗರಿಗೆ ಆಸಕ್ತಿ ಹುಟ್ಟಿಸುವ ಸಮಸ್ಯೆಗಳಿವೆ. ಇಲ್ಲಿಯವರೆಗೂ ಕನ್ನಡದಲ್ಲಿ ಇಂಥ ಒಂದು ಪುಸ್ತಕ ಬಂದಿರಲಿಲ್ಲ. ಇದೇ ಮೊದಲ ಪುಸ್ತಕ. ಇದನ್ನು ಸಿದ್ಧಪಡಿಸಿರುವ ಶ್ರೀಅ.ನಾ. ಪ್ರಹ್ಲಾದರಾವ್ ಅವರು ಕನ್ನಡದ ಬಹುಪಾಲು ಪತ್ರಿಕೆಗಳಿಗೆ ಕಳೆದ 23 ವರ್ಷಗಳಿಂದ ಪದಬಂಧಗಳನ್ನು ರಚಿಸುತ್ತಾ ಬಂದಿದ್ದಾರೆ. ಇವರು ಬಹಳ ಶ್ರಮವಹಿಸಿ ಈ ಸುಂದರ ಸಮಸ್ಯಾ ಪ್ರಪಂಚವನ್ನು ಸಿದ್ಧಪಡಿಸಿದ್ದಾರೆ. ಅವರ ಕಾರ್ಯ ಯಶಸ್ವಿಯಾಗಿದೆ. ನಾನು ಅವರನ್ನು ಅಭಿನಂದಿಸುತ್ತೇನೆ. ಪದಬಂಧ ಸಮಸ್ಯೆಯನ್ನು ಬಿಡಿಸಲು ಪ್ರಯತ್ನಪಡುವವರೆಲ್ಲರೂ ಅವರಿಗೆ ಕೃತಜ್ಞರಾಗಿರಬೇಕು.
ನಾನು ಶ್ರೀಅ.ನಾ. ಪ್ರಹ್ಲಾದರಾಯರನ್ನು ಅಭಿನಂದಿಸಿ, ಇತರ ಇಂಥ ಸಮಸ್ಯಾಪೂರ್ಣ ಪುಸ್ತಕಗಳನ್ನು ಅವರು ರಚಿಸಲಿ ಎಂದು ಹಾರೈಸುತ್ತೇನೆ. ಬಿಡುವಿನ ವೇಳೆ ಈ ಕಾರ್ಯದಲ್ಲಿ ಆಸಕ್ತಿ ತೋರಿಸುವವರಿಗೆಲ್ಲ ಭಾಷಾಸಾಮಾಥ್ರ್ಯ ಹೆಚ್ಚುತ್ತದೆ. ಆದ್ದರಿಂದ ಹೆಚ್ಚು ಹೆಚ್ಚಾಗಿ ಜನ ಈ ಪುಸ್ತಕದ ಪ್ರಯೋಜನವನ್ನು ಪಡೆಯಲಿ ಎಂದು ಹಾರೈಸುತ್ತೇನೆ.
"https://kn.wikipedia.org/wiki/ಪದಬಂಧ" ಇಂದ ಪಡೆಯಲ್ಪಟ್ಟಿದೆ