ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೦ ನೇ ಸಾಲು:
:ಅದ್ವೈತ ಸಿದ್ಧಾಂತದಲ್ಲಿ ಆತ್ಮಕ್ಕೆ ಕರ್ತೃತ್ವ -ಭೋಕ್ತೃತ್ವವಿಲ್ಲ. ಅದು ಕೂಟಸ್ಥ -ನಿತ್ಯ ; ಯಾವ ಬದಲಾವಣೆಗೂ ಒಳಗಾಗದು ಅದು ವಿಷಯಿ (ನೋಡುವ ಕ್ರಿಯೆಯುಳ್ಳದ್ದು) , ವಿಷಯವಲ್ಲ (ನೋಡಲ್ಪಡುವ ವಸ್ತುವಾಗಲಾರದು -ಕಾಣುವುದಿಲ್ಲ.) . ವಾಸ್ತವವಾಗಿ ಅದು ಬ್ರಹ್ಮ ಕ್ಕಿಂತ ಬೇರೆಯಲ್ಲ ; ಅವಿದ್ಯೆಯ (ಮಾಯೆ) ಕಾರಣದಿಂದ ಶರೀರ ಇತ್ಯಾದಿಗಳಲ್ಲಿ ತನ್ನತನದ (ತನ್ನನ್ನು ) ಆರೋಪ ಮಾಡಿಕೊಳ್ಳುತ್ತದೆ, ಆತ್ಮವು ಮುಕ್ತರೂಪದ ಚೈತನ್ಯವೇ ಆಗಿದ್ದರೂ ವಿಷಯ ಸಂಸರ್ಗದಿಂದ ಅಹಂ ಪಡೆದು , ಜೀವಾತ್ಮ ವೆನ್ನಿಸಿದೆ.
::'''ವಿಶಿಷ್ಟಾದ್ವೈತ'''
:ರಾಮಾನುಜರ ಪ್ರಕಾರ, ಆತ್ಮಗಳು ಅನೇಕ ; ಬೇರೆ ಬೇರೆ ರೀತಿಯವು. ದೇಹೇಂದ್ರಿಯಗಳಿಂದ ಬೇರೆ ; ಅಣುರೂಪಿ ; ಚೈತನ್ಯ ; ಸ್ವಯಂ ಪ್ರಕಾಶ ರೂಪಿ ; ಆನಂದ ರೂಪಿ ; ಅವನು ಪರಮಾತ್ಮನಿಗೆ ಅಧೀನ . ಅವನಲ್ಲಿರುವುದು '''ಶೇಷತ್ವ''' ವೆಂಬ ಗುಣ. ಜೀಜೀವ -ಜಗತ್ತುಗಳು ಪರಮಾತ್ಮನಿಂದ ಬೇರೆ. ಅವನ ವಿಶೇಷಣಗಳು ಅಧೀನವಾದವು . ಜೀವನಿಗೂ - ಪರಮಾತ್ಮನಿಗೂ , ಶರೀರ -ಆತ್ಮ ಸಂಬಂಧ . ಜೀವಾತ್ಮರಲ್ಲಿ ಬದ್ಧರು , ಮುಕ್ತರು , ನಿತ್ಯರು ಎಂಬ ಬೇಧಗಳುಂಟು. ಆತ್ಮ ಅಚಲ- ಆದರೂ ಸಂಕೋಚ ವಿಕೋಚಗಳಿವೆ. ಜೀವಿಗಳಿಗೆ ಈಶ್ವರಾನುಗ್ರದಿಂದ ಮುಕ್ತಿದೊರೆಯುವುದು..
::'''ದ್ವೈತ'''
:ಮಧ್ವರ ಮತದಲ್ಲಿ ಮೇಲನ ರಾಮಾನುಜರ ಕೆಲವು ವಿಚಾರಗಳನ್ನು ಅಂಗೀಕರಿಸಿದರೂ , ಜೀವ -ಪರಮಾತ್ಮರಲ್ಲಿ ಶರೀರ- ಆತ್ಮದ ಸಂಬಂಧವನ್ನು ಒಪ್ಪುವುದಿಲ್ಲ. ಜೀವರಲ್ಲಿ - ಮುಕ್ತಿ ಯೋಗ್ಯರು , ನಿತ್ಯ ಸಂಸಾರಿಗಳು , ತಮೋ ಯೋಗ್ಯರು , ಎಂದು ಮೂರು ಬೇಧಗಳನ್ನು ಹೇಳುತ್ತಾರೆ. ದೇವ , ಋಷಿ, ಪಿತೃ, ಚಕ್ರವರ್ತಿ , ಮತ್ತು ಉತ್ತಮ ಪುರುಷರು ಮುಕ್ತಿ ಯೋಗ್ಯರು , ಸಂಸಾರದಲ್ಲಿ ಸದಾಇರುವವರು -ನಿತ್ಯ ಸಂಸಾರಿಗಳು, ದೈತ್ಯ ,ರಾಕ್ಷಸ, ಪಿಶಾಚಿ ಮತ್ತು ಅಧಮ ಮನುಷ್ಯರು ತಮೋಯೋಗ್ಯರು -ಅಥವಾ ನಿತ್ಯ ನಾರಕಿಗಳು (ಇವರಲ್ಲಿ ವಿಷ್ಣುಭಕ್ತರಲ್ಲದವರೆಲ್ಲರೂ ಬರುತ್ತಾರೆ) ಜೀವನು ಪರಮಾತ್ಮನ ಅಧೀನ , -ಮುಕ್ತಿಗೆ ಅವನ ಅನುಗ್ರಹಬೇಕು.