ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೭ ನೇ ಸಾಲು:
ಕಾರ್ಕಳ ಪಟ್ಟಣವು ರಾಜ್ಯದ ಪ್ರಮುಖ ನಗರಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಅಂತೆಯೇ ಕಾರ್ಕಳವು ದಕ್ಷಿಣಕನ್ನಡ-ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂಪರ್ಕಿಸುವ ಕೊಂಡಿಯಾಗಿದ್ದು ರಾಷ್ಟ್ರೀಯ ಹೆದ್ದಾರಿ ಮತ್ತು ಹಲವು ರಾಜ್ಯ ಹೆದ್ದಾರಿಗಳಿಂದ ಸಂಪರ್ಕ ಕಲ್ಪಿತವಾಗಿದೆ. ಮಂಗಳೂರಿನಿಂದ ಸೋಲಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟೀಯ ಹೆದ್ದಾರಿ ೧೩ ಕಾರ್ಕಳದ ಮೂಲಕ ಹಾದುಹೋಗಿದೆ.
ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾರಣದಿಂದ ರೈಲು ಸಂಪರ್ಕವು ಕಾರ್ಕಳದಲ್ಲಿ ಇಲ್ಲ. ಆದರೆ ಭಾರತ ಸರ್ಕಾರದ ರೈಲ್ವೇ ಸಚಿವಾಲಯವು ಕಾರ್ಕಳದ ಮೂಲಕ ಹಾದುಹೋಗುಲಿರುವ ಎರಡು ರೈಲ್ವೇ ಹಾದಿಗಳನ್ನು ಗುರುತಿಸಿದೆ. ಹತ್ತಿರದ ರೈಲು ನಿಲ್ದಾಣವು ಉಡುಪಿಯಲ್ಲಿದ್ದು ಸುಮಾರು ೪೦ ಕಿಮೀ ದೂರದಲ್ಲಿದೆ.
 
==ಸುತ್ತಮುತ್ತಲಿನ ಪ್ರವಾಸಿ ತಾಣಗಳು==
ಕಾರ್ಕಳವು ಪಶ್ಚಿಮ ಘಟ್ಟದ ಬುಡದಲ್ಲಿದ್ದು ಘಟ್ಟದ ಮೇಲಿನ ಮತ್ತು ಕೆಳಗಿನ ಊರುಗಳಿಗೆ ಸಂಪರ್ಕ ಕಲ್ಪಿಸುವ ಕಾರಣದಿಂದ ನೋಡಬೇಕಾದ ಪ್ರವಾಸಿ ತಾಣಗಳು ಬಹಳಷ್ಟಿವೆ.
* [[ಉಡುಪಿ]]: ಉಡುಪಿ ಕ್ಷೇತ್ರವು ಶ್ರೀಕೃಷ್ಣನ ಪವಿತ್ರಕ್ಷೇತ್ರವಾಗಿದ್ದು ಮಧ್ವಾಚಾರ್ಯರ ತಪೋಭೂಮಿಯಾಗಿದೆ. ಶ್ರೀಕೃಷ್ಣಜನ್ಮಾಷ್ಟಮಿ, ಪರ್ಯಾಯ- ಇವುಗಳು ಸಾಕಷ್ಟು ಜನರನ್ನು ತನ್ನತ್ತ ಸೆಳೆಯುವ ಉಡುಪಿಯ ಧಾರ್ಮಿಕ ಕಾರ್ಯಕ್ರಮಗಳು. ಉಡುಪಿ ತನ್ನ ಸಮುದ್ರತೀರದಿಂದಲೂ ಗಮನ ಸೆಳೆಯುತ್ತದೆ.
* [[ಕಾಪು]]: ಕಾಪು ಉಡುಪಿಯಿಂದ ೧೫ಕಿಮೀ ದೂರದಲ್ಲಿರುವ ತೀರ. ತನ್ನ ಸಮುದ್ರತೀರದ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ.
* [[ಮಂಗಳೂರು]]: ಮಂಗಳೂರು ಕಾರ್ಕಳದಿಂದ ೬೦ ಕಿಮೀ ದೂರದಲ್ಲಿದ್ದು ಜಿಲ್ಲಾಕೇಂದ್ರವಾಗಿದೆ. ಕರಾವಳಿ ಕರ್ನಾಟಕದ ವಾಣಿಜ್ಯ ಕೇಂದ್ರವಾಗಿರುವ ಮಂಗಳೂರು ತನ್ನ ಸಮುದ್ರ ತೀರ ಸೌಂದರ್ಯವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ. ತಣ್ಣೀರುಬಾವಿ, ಸುಲ್ತಾನ್ ಬತ್ತೇರಿ, NITK, ಪಣಂಬೂರು, ಉಳ್ಳಾಲ ಸಮುದ್ರ ತೀರಗಳು ಕಣ್ಮನ ಸೆಳೆಯುತ್ತವೆ. ಕದ್ರಿ, ಕುದ್ರೋಳಿಯ ದೇವಾಲಯಗಳು ಮಂಗಳೂರನ್ನು ಧಾರ್ಮಿಕವಾಗಿಯೂ ಪ್ರಮುಖವಾಗಿಸಿವೆ.
 
{{ಉಡುಪಿಯ ತಾಲ್ಲೂಕುಗಳು}}
"https://kn.wikipedia.org/wiki/ಕಾರ್ಕಳ" ಇಂದ ಪಡೆಯಲ್ಪಟ್ಟಿದೆ