ಸರಸ್ವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫೮ ನೇ ಸಾಲು:
 
==ಜನಪದ ಗೀತೆಗಳಲ್ಲಿ==
<poem>
*೧.ಅಕ್ಕನ ನೆನೆದರೆ ಗಕ್ಕನೆ ಪದ ಬರಲಿ
ಅಕ್ಕವ್ಳೆ ಗಂಗೆ ದಡದಲ್ಲಿ /ಸರಸೋತಿ
ಅಕ್ಕಿ ಹೈದವಳಾ ಕರೆತನ್ನಿ
 
*೨.ಅಗ್ಜಿಯ ಬುಡದಲ್ಲಿ ಸೊಗಸು ಮಾಡುವ ಹೆಣ್ಣೇ
ಅವಸರದ್ಬಂದೆ ನಿನ ಬಳಿಗೆ /ಸರಸೊತಿ
ಕೆಲಸ ಬಿಟ್ಟಾಡ ಕಲಿಸಮ್ಮ
 
*೩.ಅಟ್ಟ ಬೆಟ್ಟದಲ್ಲಿ ಪುಟ್ಜಾಜಿ ಬನದಲ್ಲಿ
ಸೆಟೆಯವಳೆ ನಿನ್ನ ಅರಸಿದೆ /ಸರಸೊತಿ
ಎತ್ತ ಹೋದೆಮ್ಮ ಪದ ಬರಲಿ
 
*೪.ಅಕ್ಕಾ ಸರಸತಿ ಬಾಗಿಲಲಿ ಯಾಕೆ ನಿಂದೆ
ತೋರೇನು ಬಾರೆ ನಿನಗಿಂಬ /ನಮ್ಮಾನೆ
ಪಟ್ಟೆ ಮಂಚದ್ಲೆ ಒರಗಮ್ಮ
 
*೫.
 
 
 
 
</poem>
==ಚಿತ್ರಕಲೆಯಲ್ಲಿ==
ಚಿತ್ರಕಲೆಯಲ್ಲಿ ಸರಸ್ವತಿಯನ್ನು ವಿದ್ಯಾದೇವತೆಯ ಸ್ವರೂಪದಲ್ಲಿ ಮಾತ್ರ ಅಭಿವ್ಯಕ್ತಿಸಲಾಗಿದೆ. ವಸ್ತ್ರಾಭರಣಗಳಲ್ಲಿ ವೈವಿಧ್ಯಯಿರುವುದಿಲ್ಲ. ಭಾರತೀಯ ಸ್ತ್ರೀಯರು ಪಾರಂಪರಿಕ ತೊಡುಗೆಯಾದ [[ಸೀರೆ]], [[ರವಿಕೆ]] ಸರಸ್ವತಿಯ ಚಿತ್ರಗಳಲ್ಲಿಯೂ ಕಂಡು ಬರುತ್ತದೆ. ಬಹುತೇಕ ಆಧುನಿಕ ಸರಸ್ವತಿಯ ಚಿತ್ರಗಳಿಗೆ [[ರವಿವರ್ಮ]]ನ ಸರಸ್ವತಿಯ ಚಿತ್ರವೇ ಮೂಲ ಆಕರವಾಗಿದೆ. [[ಮೈಸೂರು]] ಮತ್ತು [[ತಂಜಾವೂರು]] ಶೈಲಿಯ ಸರಸ್ವತಿಯ ಚಿತ್ರಗಳು ಮಂಟಪಗಳಲ್ಲಿರುವಂತೆ ಸಂಯೋಜಿತವಾಗಿದ್ದರೆ, ಆಧುನಿಕ ಚಿತ್ರಗಳೆಲ್ಲವೂ ಪ್ರಕೃತಿಯ ನಡುವಿನಲ್ಲಿರುವಂತೆ ಚಿತ್ರಿತವಾಗಿವೆ. ಕೆಲವು ನವ್ಯವೆನ್ನಬಹುದಾದ ರಚನೆಗಳಲ್ಲಿ ರೇಖೆಗಳೇ ಪ್ರಧಾನವಾಗಿರುತ್ತವೆ. ಚಿತ್ರಕಲೆಯಲ್ಲಿ ವಿದ್ಯಾದೇವತೆ ಯಾಗಿ ಮಾತ್ರ ಚಿತ್ರಿತಳಾಗಿದ್ದಾಳೆ. ಕೆಲವೇ ಕೆಲವು ರೇಖೆಗಳನ್ನು ಬಳಸಿ, ಸರಸ್ವತಿಯನ್ನು ವಿದ್ಯಾದೇವತೆಯನ್ನಾಗಿಯೂ, ನದಿದೇವತೆಯನ್ನಾಗಿಯೂ ಬಿಂಬಿಸುವಲ್ಲಿ [[ಎಂ. ಎಫ್.ಹುಸೇನ್|ಹುಸೇನ]]ರ ಚಿತ್ರ ಯಶಸ್ವಿಯಾಗಿದೆ. ಇನ್ನೊಬ್ಬ ಕಲಾವಿದ ರುದ್ರಕುಮಾರ್ ಝಾ ಅವರ ಚಿತ್ರದಲ್ಲೂ ಸರಸ್ವತಿ ನಗ್ನವಾಗಿಯೇ ಇದ್ದಾಳೆ. ಪ್ರಾಚೀನ ಶಿಲ್ಪ ಗಳಲ್ಲು ನಗ್ನತೆಯಿದೆ; ಆದರೆ ಅಶ್ಲೀಲತೆಯಿಲ್ಲ! ಆದರೆ ಹುಸೇನರ ಚಿತ್ರವೊಂದಕ್ಕೆ ವಿರೋಧ ವ್ಯಕ್ತವಾಗಿದ್ದು ಮಾತ್ರ ದುರದೃಷ್ಟಕರ. ಹಾಗೆ ನೋಡಿದರೆ ಪುರಾಣಗಳಲ್ಲಿಯೇ ಸರಸ್ವತಿಯನ್ನು ಅತ್ಯಂತ ಕೆಟ್ಟದ್ದಾಗಿ ಚಿತ್ರಿಸಿರುವುದನ್ನು ಕಾಣಬಹುದಾಗಿದೆ!
"https://kn.wikipedia.org/wiki/ಸರಸ್ವತಿ" ಇಂದ ಪಡೆಯಲ್ಪಟ್ಟಿದೆ