ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೯ ನೇ ಸಾಲು:
 
== ಇತರೆ ದರ್ಶನಗಳಲ್ಲಿ ದೇವರು ==
<big>ಭಕ್ತಿ ಪಂಥ</big>
'''ವಿಶಿಷ್ಟಾದ್ವೈತ'''
:ರಾಮಾನುಜರ ವಿಶಿಷಾದ್ವೈತದಲ್ಲಿ ನಿರ್ಗುಣ ಬ್ರಹ್ಮಕ್ಕೆ ಸ್ಥಾನವಿಲ್ಲ.
:ಸಗುಣ ಸವಿಶೇಷ ಬ್ರಹ್ಮವೇ ಈಶ್ವರ. ಅವನೇ ವಿಷ್ಣು ; ಅವನೇ [[ಶ್ರೀಮನ್ನಾರಾಯಣ]] . ಅವನು [[ಲಕ್ಷ್ಮಿ]]ಯೊಡನೆ [[ವೈಕುಂಠ]]ದಲ್ಲಿ ವಾಸಿಸುತ್ತಾನೆ . ಈ ಈಶ್ವರನಲ್ಲಿಯೇ ಚಿತ್ (ಚೇತನ) ಅಚಿತ್ ಮತ್ತು ಸಗುಣ [[ಈಶ್ವರ]] ತತ್ವವನ್ನು ಕಾಣಬಹುದು.ವನೇ ಏಕಮಾತ್ರ ಸತ್ತೆ (ಸತ್ಯ -ಇರುವವನು) . ಜೀವ , ಜಗತ್ತು ಅವನನ್ನು ಅವಲಂಬಿಸಿಕೊಂಡಿದ್ದೂ ಬೇರೆಯಾಗಿವೆ. ಆದರೆ ಬಿಡಿಸಲಾಗದಂತೆ ಹೊಂದಿಕೊಂಡಿವೆ. ಪ್ರಲಯ ಕಾಲದಲ್ಲಿ ಜೀವ ಜಗತ್ತುಗಳು ಸೂಕ್ಷ್ಮಾವಸ್ಥೆಯಲ್ಲಿ ಈಶ್ವರನಲ್ಲಿ ಅಡಗಿರುತ್ತವೆ. ಪುನಃ ಸೃಷ್ಟಿಯಾದಾಗ ಪ್ರಕಟವಾಗುತ್ತವೆ . ಪರಮಾತ್ಮನಾದ ವಾಸುದೇವನು ಜಗತ್ತಿನ ಸೃಷ್ಟಿ, ಸ್ಥಿತಿ , ಲಯಗಳಿಗೆ ಉಪಾದಾನ ಹಾಗೂ ನಿಮಿತ್ತ ಕಾರಣನಾಗಿದ್ದಾನೆ. ಸ್ವತಃ ಅವನಲ್ಲಿ ಯಾವ ಬದಲಾವಣೆಯೂ ಇಲ್ಲ. ಅವನಿಗೆ ಅಪ್ರಾಕೃತವಾದ ಅಂದರೆ ದಿವ್ಯವಾದ ದೇಹವಿದೆ. ಹಾಗಿದ್ದರೂ ಕರ್ಮದ ಬಂಧಕ್ಕೆ ಸಿಲುಕುವುದಿಲ್ಲ. ಆದರೆ ಅವನು ಕರ್ಮಾಧ್ಯಕ್ಷ.ಅವನ ಅನುಗ್ರಹದಿಂದ ಮುಕ್ತಿಯನ್ನು ಪಡೆಯಬಹುದು.
== ಮಧ್ವರ ದ್ವೈತ ಮತ್ತು ದೇವರು. ==
:ಮಧ್ವರ ಮತದಲ್ಲಿಯೂ ದೇವರನ್ನು [[ವಿಷ್ಣು]]ವೆಂದು ಕರೆಯಲಾಗಿದೆ. ಅವನ ಗುಣಗಳೆಲ್ಲಾ [[ರಾಮಾನುಜ]] ಮತದಂತೆ ; ಆದರೆ ರಾಮಾನುಜರಂತೆ ಜೀವ ಜಗತ್ತುಗಳು [[ಪರಮಾತ್ಮ]]ನ ಶರೀರವೆಂದು ಒಪ್ಪುವುದಿಲ್ಲ. ಅವು ಅವನಿಗಿಂತ ಭಿನ್ನ ವಾದವು. ಜಗತ್ತಿನ ಸೃಷ್ಟಿಗೆ ಅವನು ನಿಮಿತ್ತ ಕಾರಣ ಮಾತ್ರಾ ; ಪ್ರಕೃತಿಯು ಉಪಾದಾನ ಕಾರಣ.
== ನಿಂಬಾರ್ಕರು - ದ್ವೈತಾದ್ವೈತ ==
:ನಿಂಬಾರ್ಕರು ತಮ್ಮ ದ್ವೈತಾದ್ವೈತ ಸಿದ್ಧಾಂತದಲ್ಲಿ ,ಈಶ್ವರ ಆತ್ಮೀಯ ; ಅವನೇಶ್ರೀಕೃಷ್ಣ ; ಅವನ ಗುಣಗಳು [[ರಾಮಾನುಜ]] -[[ಮಧ್ವ]] ಮತದಂತೆ , ಆದರೆ ದೇವರು ವಿಶ್ವ ಸೃಷಿಗೆ ಉಪಾದಾನ ಕಾರಣ ಮತ್ತು ನಿಮಿತ್ತ ಕಾರಣ. ಜಗತ್ತಿನ ಜಡ ಚೇತನಗಳು ಬೇರೆಯಾಗಿ ಕಂಡರೂ, [[ಬ್ರಹ್ಮ]]ದ ಪರಿಣಾಮವಾಗಿದ್ದು , ತತ್ವತಃ ಬ್ರಹ್ಮವೇ ಆಗಿದೆ.
== ವಲ್ಲಭರ -ಶ್ಮದ್ಧಾದ್ವೈತ ==
ವಲ್ಲಭಾಚಾರ್ಯರ ಶ್ಮದ್ಧಾದ್ವೈತವೂ ಸಾಕಾರ ಈಶ್ವರನನ್ನು ಪ್ರತಿಪಾದಿಸುತ್ತದೆ . ಈ ಬ್ರಹ್ಮನೇ ([[ಕೃಷ್ಣ]]ನೇ), ಸತ್ ಚಿತ್ , ಆನಂದ ಮತ್ತು ರಸನಾಗಿದ್ದಾನೆ . '''ಅನೋರಣಿಯಾನ್ ಮಹತೋಮಹೀಯಾನ್''' ಆಗಿರುವವನೂ ಅವನೇ. ಕರ್ತೃವೂ ಅವನೇ ಭೋಕ್ತೃವೂ ಅವನೇ ; ಈ ವಿಶ್ವ ಅವನ ಲೀಲೆ . ಅವನು ಅಧದೈವಿಕದಲ್ಲಿ [[ಪರಬ್ರಹ್ಮ]] , ಅಧ್ಯಾತ್ಮಿಕದಲ್ಲಿ ಅಕ್ಷರಬ್ರಹ್ಮ ; ಅಧಿಭೌತಿಕದಲ್ಲಿ [[ಜಗತ್ತು]] . ಕಾರ್ಯ ಕಾರಣಗಳು ಬೇರೆ ಅಲ್ಲವಾದುದರಿಂದ , ಜಗತ್ತು [[ಬ್ರಹ್ಮ]] ರೂಪವೇ ಆಗಿದೆ. ಕಾರಣ ಅವನು ಜಗತ್ತಿಗೆ ಉಪಾದಾನ ,ಮತ್ತು ನಿಮಿತ್ತ ಕಾರಣನಾಗಿದ್ದಾನೆ.
 
:(ಮುಂದುವರೆಯುವುದು/ಮುಂದುವರೆದಿದೆ)