ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ಮುಹಮ್ಮದ್‌ (ಸ)ರವರು ಕೇವಲ ಇಪ್ಪತ್ತಮೂರು ವರ್ಷಗಳ ತಮ್ಮ ದೌತ್ಯಜೀವನದ ಅತಿಸಂಕ್ಷಿಪ್ತ ಅವಧಿಯಲ್ಲಿ ಸಂಪೂರ್ಣ ಅರಬಿ ಪರ್ಯಾಯ ದ್ವೀಪವನ್ನು ಬಹುದೇವಾರಾಧನೆ, ಅಂಧವಿಶ್ವಾಸ ಮತ್ತು ಸೃಷ್ಟಿಪೂಜೆಯಿಂದ ಏಕದೇವಾರಾಧನೆಯೆಡೆಗೆ, ಜನಾಂಗೀಯ ಕಲಹ ಮತ್ತು ಸಮರಗಳಿಂದ ರಾಷ್ಟ್ರೀಯ ಒಗ್ಗಟ್ಟು ಮತ್ತು ಭಾವೈಕ್ಯತೆಯೆಡೆಗೆ, ಮದ್ಯಪಾನ ಮತ್ತು ವ್ಯಭಿಚಾರದಿಂದ ಸಮಚಿತ್ತತೆ ಮತ್ತು ದೇವಭಕ್ತಿಯೆಡೆಗೆ, ಅನಿರ್ಬಂಧತೆ ಮತ್ತು ಅರಾಜಕತೆಯಿಂದ ಶಿಸ್ತುಬದ್ಧ ಮತ್ತು ಮಾದರೀಯೋಗ್ಯ ಜೀವನದೆಡೆಗೆ, ಪರಿಪೂರ್ಣ ದಿವಾಳಿತ್ವದಿಂದ ನೈತಿಕ ಉತ್ಕೃಷ್ಟತೆಯ ಪಾರಮ್ಯದೆಡೆಗೆ ಪರಿಪೂರ್ಣವಾಗಿ ಪರಿವರ್ತಿಸಿದರು. ಮಾನವ ಚರಿತ್ರೆಯು ಎಂದೂ ಕಂಡರಿಯದ ಅಥವಾ ಆಲಿಸಿರದ ಇಂತಹ ಅಭೂತಪೂರ್ವ ಮತ್ತು ಅಮೂಲಾಗ್ರ ಬದಲಾವಣೆ! ಮತ್ತೆ ಊಹಿಸಿರಿ! ನಂಬಲಸಾಧ್ಯವಾದ ಈ ಅದ್ಭುತಗಳೆಲ್ಲವೂ ಕೇವಲ ಎರಡು ದಶಕಗಳ ಹೃಸ್ವಾವಧಿಯಲ್ಲಿ ಸಂಭವಿಸಿವೆ.
 
==ಪ್ರವಾದಿ [ಸ]ರವರ ಕೊನೆಯ ವಚನ [[ಅರಫಾ]] ಮೈದಾನದಲ್ಲಿ: ==
 
ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ಓ ಜನರೇ ನಿಮ್ಮ ದೇವನು ಒಬ್ಬನು ಮತ್ತು ನಿಮ್ಮ ತಂದೆಯೂ ಒಬ್ಬನು. ಅರಬನಿಗೆ ಅರಬೇತರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಅರಬೇತರನಿಗೆ ಅರಬರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಕೆಂಪು ಬಣ್ಣದವನಿಗೆ (ಅಂದರೆ ಕೆಂಪು ಮಿಶ್ರಿತ ಬಿಳಿಬಣ್ಣದವನು) ಕರಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಕರಿಯನಿಗೆ ಕೆಂಪು ಬಣ್ಣದವನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಭಯಭಕ್ತಿಯ ಮಾನದಂಡದಲ್ಲೇ ಹೊರತು.
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ