ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೬ ನೇ ಸಾಲು:
 
==ಮುಹಮ್ಮದ್[ಸ] ಇಸ್ಲಾಮಿನ ಸ್ಥಾಪಕರಲ್ಲ: ==
ಪ್ರವಾದಿ ಮುಹಮ್ಮದ್ [ಸ] ಇಸ್ಲಾಮ್ ಧರ್ಮದ ಸ್ಥಾಪಕರೆಂದು ನಮ್ಮ ದೇಶದ ಭಾಂದವರಲ್ಲಿ ವ್ಯಾಪಕವಾದ ಒಂದು ತಪ್ಪು ಕಲ್ಪನೆ. ಕ್ರೈಸ್ತ ಧರ್ಮದ ಸ್ಥಾಪಕ [[ಏಸು ಕ್ರಿಸ್ತ]] ಎನ್ನಲಾಗುವಂತೆ, ಬೌದ್ದ ಧರ್ಮದ ಸ್ಥಾಪಕ ಬುದ್ದರಾಗುವಂತೆ ಇಸ್ಲಾಮ್ ಧರ್ಮದ ಸ್ಥಾಪಕ ಮುಹಮ್ಮದ್ [ಸ]ರಿಂದ ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ. ಏಕೆಂದರೆ ಶಾಲಾ ಪಟ್ಯ ಪುಸ್ತಕಗಳಲ್ಲೂ ಇದನ್ನೇ ಕಲಿಸಲಾಗುತ್ತದೆ. ಆದರೆ ಇಸ್ಲಾಮ್ ಧರ್ಮದ ಹೆಸರೇ ಸೂಚಿಸುವಂತೆ ಅದು ಮುಹಮ್ಮದ್ [ಸ]ರವರು ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಪಂಥವಾಗಲೀ ಅಲ್ಲ.
ಅಂತೆಯೇ ಯಹೂದಿ ಜನಾಂಗದ ಧರ್ಮಕ್ಕೆ ಯಹೂದಿ ಪಂಥವೆಂದು ಹೆಸರಿಸುವಂತೆ ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿ ಕೊಂಡಿರುವಂತೆ, ಇಸ್ಲಾಮ್ ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವಲ್ಲ. ಅದು ಮುಹಮ್ಮದ್ [ಸ] ಆವಿಷ್ಕರಿಸಿದ ಮುಹಮ್ಮದ್ದೀಯ ಧರ್ಮವಾಗಿರದೆ, ಮಾನವ ಕುಲದ ಆದಿಪಿತ ಆದಮರಿಂದ [ಅ] ಅಂತಿಮ ಪ್ರವಾದಿ ಮುಹಮ್ಮದ್ [ಸ]ರವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲಾ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನನೂ ಆದ ಧರ್ಮವಾಗಿದೆ. ಇಸ್ಲಾಮ್ ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ.
 
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ