ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
 
ಇಸ್ರಾಈಲರ ಸಂತತಿಗಳೇ, ನಾನು ನಿಮ್ಮ ಬಳಿಗೆ ಅಲ್ಲಾಹನ ದೂತನಾಗಿ ಬಂದಿರುತ್ತೇನೆ. ನಿಮ್ಮ ಬಳಿ ಈಗಾಗಲೇ ಇರುವ ತೌರಾತನ್ನು ನಾನು ಸಮರ್ಥಿಸುತ್ತೇನೆ. ಮತ್ತು ನಾನು, ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ದೂತರ ಕುರಿತು ಶುಭವಾರ್ತೆ ನೀಡುವವನಾಗಿರುತ್ತೇನೆ’’ ಎಂದು ಮರ್ಯಮರ ಪುತ್ರ ಈಸಾ ಹೇಳಿದ್ದರು. ಕೊನೆಗೆ ಅವರು (ಆ ದೂತರು) ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು. [ಕುರಾನ್, 61: 6]
 
==ಮುಹಮ್ಮದ್[ಸ] ಇಸ್ಲಾಮಿನ ಸ್ಥಾಪಕರಲ್ಲ: ==
ಪ್ರವಾದಿ ಮುಹಮ್ಮದ್ [ಸ] ಇಸ್ಲಾಮ್ ಧರ್ಮದ ಸ್ಥಾಪಕರೆಂದು ನಮ್ಮ ದೇಶದ ಭಾಂದವರಲ್ಲಿ ವ್ಯಾಪಕವಾದ ಒಂದು ತಪ್ಪು ಕಲ್ಪನೆ. ಕ್ರೈಸ್ತ ಧರ್ಮದ ಸ್ಥಾಪಕ ಏಸು ಕ್ರಿಸ್ತ ಎನ್ನಲಾಗುವಂತೆ, ಬೌದ್ದ ಧರ್ಮದ ಸ್ಥಾಪಕ ಬುದ್ದರಾಗುವಂತೆ ಇಸ್ಲಾಮ್ ಧರ್ಮದ ಸ್ಥಾಪಕ ಮುಹಮ್ಮದ್ [ಸ]ರಿಂದ ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ. ಏಕೆಂದರೆ ಶಾಲಾ ಪಟ್ಯ ಪುಸ್ತಕಗಳಲ್ಲೂ ಇದನ್ನೇ ಕಲಿಸಲಾಗುತ್ತದೆ. ಆದರೆ ಇಸ್ಲಾಮ್ ಧರ್ಮದ ಹೆಸರೇ ಸೂಚಿಸುವಂತೆ ಅದು ಮುಹಮ್ಮದ್ [ಸ]ರವರು ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಪಂಥವಾಗಲೀ ಅಲ್ಲ.
ಅಂತೆಯೇ ಯಹೂದಿ ಜನಾಂಗದ ಧರ್ಮಕ್ಕೆ ಯಹೂದಿ ಪಂಥವೆಂದು ಹೆಸರಿಸುವಂತೆ ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿ ಕೊಂಡಿರುವಂತೆ, ಇಸ್ಲಾಮ್ ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವಲ್ಲ. ಅದು ಮುಹಮ್ಮದ್ [ಸ] ಆವಿಷ್ಕರಿಸಿದ ಮುಹಮ್ಮದ್ದೀಯ ಧರ್ಮವಾಗಿರದೆ, ಮಾನವ ಕುಲದ ಆದಿಪಿತ ಆದಮರಿಂದ [ಅ] ಅಂತಿಮ ಪ್ರವಾದಿ ಮುಹಮ್ಮದ್ [ಸ]ರವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲಾ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನನೂ ಆದ ಧರ್ಮವಾಗಿದೆ. ಇಸ್ಲಾಮ್ ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ.
 
==ಪ್ರವಾದಿ ಮುಹಮ್ಮದ್ [ಸ]ರವರ ಸರಳ ಜೀವನ: ==
Line ೪೨ ⟶ ೪೬:
ಮುಹಮ್ಮದ್ {ಸ}ರ ಅನುಯಾಯಿಗಳಲ್ಲಿ ಒಬ್ಬರಾದ ಅನಸ್ ಕೇಳುವಂತೆ ಮುಹಮ್ಮದ್ [ಸ]ರಿಗಿಂತಲೂ ಹೆಚ್ಚಾಗಿ ಅವರ ಅನುಯಾಯಿಗಳು ಯಾರನ್ನೂ ಪ್ರೀತಿಸುತ್ತಿರಲಿಲ್ಲ, ಆದರೂ ಮುಹಮ್ಮದ್ [ಸ]ರು ಅವರ ಬಳಿಗೆ ಬಂದಾಗ ಅವರು ಎದ್ದು ನಿಲ್ಲುತ್ತಿರಲಿಲ್ಲ, ಯಾಕೆಂದರೆ ದೊಡ್ಡ ದೊಡ್ಡ ಜನರಿಗಾಗಿ ಎದ್ದು ನಿಲ್ಲುವಂತೆ ತನಗೆ ಕೂಡಾ ಎದ್ದು ನಿಲ್ಲುವುದನ್ನು ಮುಹಮ್ಮದ್ [ಸ]ರು ಅಸಹ್ಯಪಡುತ್ತಿದ್ದರು. [ಮುಸ್ನಾದ್ ಅಹ್ಮದ್, #12117, ಸಹೀಹ್ ಮುಸ್ಲಿಮ್, #2754]
 
==ಪ್ರವಾದಿಯವರ [ಸ] ಮುಖ ಚಹರೆ: ==
ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ನೀವು ಪ್ರಾಣೆಗಳನ್ನು ಕೊಯ್ಯುವಾಗ ಅತ್ಯುತ್ತಮವಾದ ವಿಧಾನದಲ್ಲಿ ಕೊಯ್ಯಿರಿ. ಕೊಯ್ಯುವಾತನು ಪ್ರಾಣೆಯ ನೋವನ್ನು ಕನಿಷ್ಠಗೊಳಿಸುವುದಕ್ಕಾಗಿ ತನ್ನ ಚೂರಿಯನ್ನು ಹರಿತಗೊಳಿಸಲಿ. [ಸಹೀಹ್ ಮುಸ್ಲಿಮ್ # 1955, ತಿರ್ಮಿದಿ # 1409]
ಬರಾಹ್ [ರ] ಹೇಳುತ್ತಾರೆ - ಅಲ್ಲಾಹನ ಸಂದೇಶವಾಹಕರು ಜನರ ಪೈಕಿ ಅತ್ಯಂತ ಸುಂದರ ಮುಖಚಹರೆಯವರಾಗಿದ್ದರು. ಶರೀರವೂ ಸುಂದರವಾಗಿತ್ತು. ಅವರು ಹೆಚ್ಚು ಉದ್ದವೋ ಗಿಡ್ದವೋ ಆಗಿರಲಿಲ್ಲ.
[ಸಹೀಹ್ ಬುಖಾರಿ, ಅಧ್ಯಾಯ ಉತ್ತಮ ಕಾರ್ಯಗಳು]
 
==ಪ್ರವಾದಿ [ಸ] ಅಸಭ್ಯ ಮಾತು ಆಡುವವರಲ್ಲ: ==
Line ೪೯ ⟶ ೫೫:
==ಪ್ರವಾದಿ [ಸ] ಮನೆಯಲ್ಲಿಮೂರು ತಿಂಗಳು ಒಲೆ ಉರಿಯಲಿಲ್ಲ: ==
ಮುಹಮ್ಮದ್ [ಸ]ರ ಪತ್ನಿ ಆಯಿಶಾ ಹೇಳುತ್ತಾರೆ "ಓ ಸೋದರ ಪುತ್ರಾ! ಪ್ರವಾದಿಯವರ ಮನೆಯಲ್ಲಿ ಒಲೆಯನ್ನು ಉರಿಸದೆ ನಾವು ಎರಡು ತಿಂಗಳುಗಳಲ್ಲಿ ಮೂರು ಹುಣ್ಣಿಮೆಗಳನ್ನು ನೋಡುತ್ತಿದ್ದೆವು". "ಓ ಅತ್ತೆಯವರೇ! ಹಾಗಾದರೆ ನೀವು ತಿನ್ನುವುದಕ್ಕಾಗಿ ಏನು ಮಾಡುತ್ತಿದ್ದಿರಿ? ಎಂದು ಸೋದರ ಪುತ್ರನು ಕೇಳಿದಾಗ, "ಎರಡು ಕಪ್ಪು ವಸ್ತುಗಳನ್ನು - ಖರ್ಜೂರ ಮತ್ತು ನೀರನ್ನು ಸೇವಿಸುತ್ತಿದ್ದೆವು. ಅನ್ಸಾರಿಗಳಲ್ಲಿ ಸೇರಿದ ಪ್ರವಾದಿಯವರ ನೆರೆಯವರು ಕೆಲವೊಮ್ಮೆ ಒಂಟೆಯ ಹಾಲನ್ನು ಕೆಳಿಸಿಕೊಟ್ಟರೆ ಅದನ್ನು ಕುಡಿಯುತ್ತಿದ್ದೆವು. ಎಂದು ಅವರು ಉತ್ತರಿಸಿದರು. [ಸಹೀಹ್ ಮುಸ್ಲಿಮ್, #2972, ಸಹೀಹುಲ್ ಬುಖಾರಿ, #2567]
 
==ಮಹಿಳೆಯರೊಂದಿಗೆ ಪ್ರವಾದಿ ಮುಹಮ್ಮದ್ [ಸ] ವರ್ತನೆ: ==
ಪ್ರವಾದಿ ಶ್ರೇಷ್ಟವಾದ ಮುಹಮ್ಮದ್ [ಸ]ರಿಂದ ವರದಿ ಮಾಡಲ್ಪಟ್ಟ ಒಂದು ಹದೀಸ್'ನಲ್ಲಿ "ನಿಸ್ಸಂದೇಹವಾಗಿಯೂ ನಾನು ಸ್ತ್ರೀಯರೊಂದಿಗೆ ಹಸ್ತಲಾಘವ ಮಾಡುವುದಿಲ್ಲ" ಎಂದಿದೆ. [ಹದೀಸ್]
ಪ್ರವಾದಿ [ಸ] ಮಹಿಳೆಯರನ್ನು ಎಂದೂ ಹೊಡೆಯಲಿಲ್ಲ. [ಇಬ್ನ್ ಮಾಜಃ]
 
==ಮಕ್ಕಳೊಂದಿಗೆ ಪ್ರವಾದಿ [ಸ]: ==
ಅನಸ್ [ರ] ಮಕ್ಕಳ ಬಳಿಯಿಂದ ಹಾಡು ಹೋಗುವ ಸಂದರ್ಭದಲ್ಲಿ ಮಕ್ಕಳಿಗೆ ಸಲಾಂ ಹೇಳುತ್ತಿದ್ದರು ಮತ್ತು ಅವರು ಹೇಳುತ್ತಿದ್ದರು ಅಲ್ಲಾಹನ ಸಂದೇಶವಾಹಕರು ಹೀಗೆ ಮಾಡುತ್ತಿದ್ದರು. [ಬುಖಾರಿ]
 
==ದುರ್ಬಲರೊಂದಿಗೆ ಪ್ರವಾದಿ [ಸ]: ==
ಸಹಲ್ ಬಿನ್ ಹನೀಫ್ [ರ] ಹೇಳುತ್ತಾರೆ: ಅಲ್ಲಾಹನ ಸಂದೇಶವಾಹಕರು ಮುಸಲ್ಮಾನರ ಬಳಿ ಬರುತ್ತಿದ್ದರು. ಅವರನ್ನು ಸಂಪರ್ಕಿಸುತ್ತಿದ್ದರು. ಅವರ ಪೈಕಿ ರೋಗಿಗಳನ್ನು ಸಂದರ್ಶಿಸುತ್ತಿದ್ದರು. ಯಾರಾದರೂ ಮರಣ ಹೊಂದಿದರೆ ಅವರ ಜನಾಝ ನಮಾಝ್ ನಿರ್ವಹಸುತ್ತಿದ್ದರು ಮತ್ತು ದಫನ ಕಾರ್ಯದಲ್ಲಿ ಕೈ ಜೋಡಿಸುತ್ತಿದ್ದರು.
 
==ಪ್ರವಾದಿಯವರ [ಸ] ಶಿಫಾರಸಿಗೆ ಯಾರು ಅರ್ಹರು?: ==
ಅಬೂಹುರೈರಾ [ರ] ಹೇಳುತ್ತಾರೆ: ನಾನು ಒಮ್ಮೆ ಪ್ರವಾದಿವರ್ಯರಲ್ಲಿ "ಓ ಪ್ರವಾದಿವರ್ಯರೇ! ಕಿಯಾಮತ್'ನ ದಿನದಂದು ಇತರರಿಗಿಂತ ಹೆಚ್ಚು ಶಿಫಾರಸಿನಿಂದ ಯಾರು ಯಶಸ್ವಿಯಾಗುವನು? ಎಂದು ಹೇಳಿದೆ. ಪ್ರವಾದಿ [ದ] ಹೇಳಿದರು, ಅಬೂಹುರೈರಾ! ಈ ಮಾತನ್ನು ನಿಮಗಿಂತ ಮುಂಚೆ ಯಾರೂ ಕೆಳಲಾರರೆಂದು ನಾನು ಭಾವಿಸಿದ್ದೆ. ಏಕೆಂದರೆ ನಾನು ನೋಡುತ್ತಿದ್ದೇನೆ. ಹದೀಸ್ ತಿಳಿಯುವುದರಲ್ಲಿ ನೀವು ಬಹಳ ಆಸಕ್ತಿರಾಗಿರುವಿರಿ. ಯಾರು ಪ್ರಾಮಾಣೆಕವಾಗಿ ಮನಸಾರೆ "ಲಾ ಇಲಾಹ ಇಲ್ಲಲ್ಲಾಹ್" ಹೇಳುತ್ತಾನೋ ಅವನು ಇತರರಿಗಿಂತ ನನ್ನ ಶಿಫಾರಸಿನಿಂದ ಯಶಸ್ವಿಯಾಗುವನು. [ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
 
==ಪ್ರವಾದಿ [ಸ]ರವರ ಮೇಲೆ ಸಲಾತ್: ==
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ