ಮುಹಮ್ಮದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಮುಹಮ್ಮದ್ ಇಬ್ನ್ ಆಬ್ದುಲ್ಲಾಹ್''' ({{lang|ar|'''محمد'''}}‎<ref>Unicode has a special "Muhammad" ligature (typograph...
 
No edit summary
೧೨ ನೇ ಸಾಲು:
ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ಓ ಜನರೇ ನಿಮ್ಮ ದೇವನು ಒಬ್ಬನು ಮತ್ತು ನಿಮ್ಮ ತಂದೆಯೂ ಒಬ್ಬನು. ಅರಬನಿಗೆ ಅರಬೇತರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಅರಬೇತರನಿಗೆ ಅರಬರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಕೆಂಪು ಬಣ್ಣದವನಿಗೆ (ಅಂದರೆ ಕೆಂಪು ಮಿಶ್ರಿತ ಬಿಳಿಬಣ್ಣದವನು) ಕರಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಕರಿಯನಿಗೆ ಕೆಂಪು ಬಣ್ಣದವನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಭಯಭಕ್ತಿಯ ಮಾನದಂಡದಲ್ಲೇ ಹೊರತು.
[ಮುಸ್ನಾದ್ ಅಹ್ಮದ್ # 22978]
 
==ಪ್ರವಾದಿ ಮುಹಮ್ಮದ್[ಸ]ಕುರಿತು ಕುರಾನ್ ಏನು ಹೇಳುತ್ತದೆ: ==
 
ಮುಹಮ್ಮದರು ದೇವದೂತರಲ್ಲದೆ ಬೇರೇನೂ ಅಲ್ಲ. ಅವರಿಗಿಂತ ಹಿಂದೆಯೂ ಹಲವು ದೇವದೂತರು ಗತಿಸಿದ್ದಾರೆ. ಅವರೀಗ ಮೃತರಾದರೆ ಅಥವಾ ಹತರಾದರೆ ನೀವೇನು ಬೆನ್ನು ತಿರುಗಿಸಿ ಮರಳಿ ಹೋಗುವಿರಾ? ಹಾಗೆ ಬೆನ್ನು ತಿರುಗಿಸಿ ಮರಳುವ ಯಾರೂ (ಆ ಮೂಲಕ) ಅಲ್ಲಾಹನಿಗೆ ಯಾವ ಹಾನಿಯನ್ನೂ ಮಾಡಲಾರನು. ಅಲ್ಲಾಹನು ಕೃತಜ್ಞರಿಗೆ ಪ್ರತಿಫಲ ನೀಡುವನು. [ಕುರಾನ್, 3: 144]
 
ಮುಹಮ್ಮದ್(ಸ) ನಿಮ್ಮ ಪೈಕಿ ಯಾವುದೇ ಪುರುಷನ ತಂದೆಯಲ್ಲ. ಅವರು ಅಲ್ಲಾಹನ ದೂತ ಮತ್ತು ಕೊನೆಯ ಪ್ರವಾದಿಯಾಗಿರುವರು. ಅಲ್ಲಾಹನು ಎಲ್ಲ ವಿಷಯಗಳ ಜ್ಞಾನ ಉಳ್ಳವನಾಗಿದ್ದಾನೆ. [ಕುರಾನ್, 33: 40]
 
ಮತ್ತು ಸತ್ಯದಲ್ಲಿ ನಂಬಿಕೆ ಇಟ್ಟು ಸತ್ಕರ್ಮಗಳನ್ನು ಮಾಡಿದವರು ಹಾಗೂ ಮುಹಮ್ಮದರಿಗೆ ಇಳಿಸಿ ಕೊಡಲಾಗಿರುವ ಸಂದೇಶವು ತಮ್ಮ ಒಡೆಯನ ಕಡೆಯಿಂದ (ಬಂದ) ಸತ್ಯವೆಂದು ನಂಬಿದವರು – ಅವರ ಪಾಪಗಳನ್ನು ಅವನು (ಅಲ್ಲಾಹನು) ಪರಿಹರಿಸಿದನು ಮತ್ತು ಅವರ ಸ್ಥಿತಿಯನ್ನು ಸುಧಾರಿಸಿದನು. [ಕುರಾನ್, 47: 2]
 
ಮುಹಮ್ಮದರು ಅಲ್ಲಾಹನ ದೂತರು. ಅವರ ಜೊತೆಗಿರುವವರು ಧಿಕ್ಕಾರಿಗಳ ಪಾಲಿಗೆ ಕಠೋರರೂ ಪರಸ್ಪರ ಕರುಣಾಳುಗಳೂ ಆಗಿರುತ್ತಾರೆ… [ಕುರಾನ್, 48: 29]
ಇಸ್ರಾಈಲರ ಸಂತತಿಗಳೇ, ನಾನು ನಿಮ್ಮ ಬಳಿಗೆ ಅಲ್ಲಾಹನ ದೂತನಾಗಿ ಬಂದಿರುತ್ತೇನೆ. ನಿಮ್ಮ ಬಳಿ ಈಗಾಗಲೇ ಇರುವ ತೌರಾತನ್ನು ನಾನು ಸಮರ್ಥಿಸುತ್ತೇನೆ. ಮತ್ತು ನಾನು, ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ದೂತರ ಕುರಿತು ಶುಭವಾರ್ತೆ ನೀಡುವವನಾಗಿರುತ್ತೇನೆ’’ ಎಂದು ಮರ್ಯಮರ ಪುತ್ರ ಈಸಾ ಹೇಳಿದ್ದರು. ಕೊನೆಗೆ ಅವರು (ಆ ದೂತರು) ಸ್ಪಷ್ಟ ಪುರಾವೆಗಳೊಂದಿಗೆ ಅವರ ಬಳಿಗೆ ಬಂದಾಗ ಅವರು ಇದೆಲ್ಲಾ ಸ್ಪಷ್ಟ ಮಾಟಗಾರಿಕೆಯಾಗಿದೆ ಎಂದು ಬಿಟ್ಟರು. [ಕುರಾನ್, 61: 6]
 
 
 
 
"https://kn.wikipedia.org/wiki/ಮುಹಮ್ಮದ್" ಇಂದ ಪಡೆಯಲ್ಪಟ್ಟಿದೆ