ಕಾಸರಗೋಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೩ ನೇ ಸಾಲು:
ಅರಬರು ಕಾಸರಗೋಡನ್ನು ಒಂದು ಪ್ರಧಾನ ವ್ಯಾಪಾರ ಕೇಂದ್ರವಾಗಿ ಪರಿಗಣಿಸಿದ್ದರು. ಈ ಪ್ರದೇಶವನ್ನು ಅವರು "ಹರ್ಕ್‌ವಿಲ್ಲಿಯಾ' ಎಂದು ಕರೆಯುತ್ತಿದ್ದರು. ಪೋರ್ಚುಗೀಸ್‌ ಪ್ರವಾಸಿಗರಾಗಿದ್ದ ಬಾಬೋìಸ್‌ ಎಂಬಾತನು 1514ರಲ್ಲಿ ಕಾಸರಗೋಡಿನ ಕುಂಬಳೆಗೆ ಬಂದಿದ್ದನು. ಅವನು ಇಲ್ಲಿಂದ ಅಕ್ಕಿ ರಫ್ತು ಮಾಡಿ ಹುರಿಹಗ್ಗವನ್ನು ಆಮದು ಮಾಡುತ್ತಿದ್ದನು. ಲಾರ್ಡ್‌ ವೆಲ್ಲೆಸ್ಲಿಯ ಕುಟುಂಬ ಡಾಕ್ಟರಾಗಿದ್ದ ಡಾ| ಫ್ರಾನ್ಸಿಸ್‌ ಬುಕಾನಿನ್‌ 1800ರಲ್ಲಿ ಕಾಸರಗೋಡಿಗೆ ಬಂದಿದ್ದನು. <ref name="ಕಾಸರಗೋಡು: ಚರಿತ್ರೆಯ ಕೌತುಕ">{{cite news|title=ಕಾಸರಗೋಡು: ಚರಿತ್ರೆಯ ಕೌತುಕ|url=http://www.udayavani.com/news/222L15TOusrism%E0%B2%95-%E0%B2%B8%E0%B2%B0%E0%B2%97-%E0%B2%A1---%E0%B2%9A%E0%B2%B0-%E0%B2%A4-%E0%B2%B0-%E0%B2%AF-%E0%B2%95-%E0%B2%A4-%E0%B2%95.html}}</ref>
 
ಕಾಸರಗೋಡು [[ಕುಂಬಳೆ]] ರಾಜರ ಅಧೀನಕ್ಕೂ ಒಳಪಟ್ಟಿತ್ತು. ಆಗ ಸುಮಾರು 64 ತುಳು ಮತ್ತು ಮಲಯಾಳ ಗ್ರಾಮಗಳು ಈಪ್ರದೇಶದಲ್ಲಿತ್ತು. ಬಳಿಕ ಕಾಸರಗೋಡಿಗೆ ವಿಜಯನಗರ ರಾಜರು ದಾಳಿ ನಡೆಸಿದರು. ಆಗ ಕಾಸರಗೋಡು ನೀಲೇಶ್ವರ ಕೇಂದ್ರೀಕರಿಸಿ ಆಳ್ವಿಕೆ ನಡೆಸುತ್ತಿದ್ದ ಕೋಲತ್ತಿರಿ ರಾಜರ ಅಧೀನದಲ್ಲಿತ್ತು. ಕ್ರಮೇಣ ಕೋಲತ್ತಿರಿ ಸಾಮ್ರಾಜ್ಯ ಅಧಃಪತನಗೊಂಡು ಇಲ್ಲಿ ಇಕ್ಕೇರಿ ನಾಯಕರು ಪ್ರಾಬಲ್ಯ ಹೊಂದಿದರು. 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ ಬಳಿಕ ಇಕ್ಕೇರಿ ನಾಯಕರು ಮತ್ತಷ್ಟು ಪ್ರಬಲರಾದರು. 1645ರಲ್ಲಿ ಇಕ್ಕೇರಿಯ ವೆಂಕಪ್ಪ ನಾಯಕ ಬಿದನೂರನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ಕಾಸರಗೋಡಿನ ಚಂದ್ರಗಿರಿ ಕೋಟೆ ಮತ್ತು ಬೇಕಲ ಕೋಟೆಯನ್ನು ಇವರೇ ನಿರ್ಮಿಸಿದರೆಂದು ನಿರ್ಮಾಣಗೊಂಡಿದೆ ಎಂದು ಚರಿತ್ರೆ ಹೇಳುತ್ತದೆ.
 
1763ರಲ್ಲಿ ಮೈಸೂರಿನ [[ಹೈದರಾಲಿ|ಹೈದರ್‌ ಆಲಿ]]ಯು ಕೇರಳವನ್ನು ಸ್ವಾಧೀನ ಮಾಡುವ ಉದ್ದೇಶದೊಂದಿಗೆ ಬಿದನೂರಿಗೆ ದಾಳಿ ಮಾಡಿದನು. ಕೇರಳವನ್ನು ಸ್ವಾಧೀನಪಡಿಸುವ ತನ್ನ ಯೋಜನೆಯಲ್ಲಿ ಆತ ವಿಫಲನಾಗಿ ಮೈಸೂರಿಗೆ ಹಿಂತಿರುಗಿ, 1782ರಲ್ಲಿ ಗತಿಸಿದನು. ತಂದೆಯ ಕನಸನ್ನು ನನಸು ಮಾಡುವ ಉದ್ದೇಶದೊಂದಿಗೆ ಟಿಪ್ಪು ಸುಲ್ತಾನ್‌ ಮಲಬಾರ್‌ ಪ್ರದೇಶಕ್ಕೆ ದಾಳಿ ಮಾಡಿದನು. 1792ರ ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ ಟಿಪ್ಪು ಸುಲ್ತಾನ್‌ ತುಳುನಾಡು ([[ಕೆನರಾ]]) ಹೊರತುಪಡಿಸಿದ ಮಲಬಾರ್‌ ಪ್ರದೇಶವನ್ನು ಬ್ರಿಟಿಷರಿಗೆ ಒಪ್ಪಿಸಿದನು.
"https://kn.wikipedia.org/wiki/ಕಾಸರಗೋಡು" ಇಂದ ಪಡೆಯಲ್ಪಟ್ಟಿದೆ