ಮಕ್ಕಳ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೦ ನೇ ಸಾಲು:
ಇದೇ ಪರಂಪರೆಯಲ್ಲಿ, ಸಿದ್ದಯ್ಯ ಪುರಾಣಿಕರ 'ಅಜ್ಜನ ಕೋಲಿದು ನನ್ನಯ ಕುದುರೆ' ('ನನ್ನ ಕುದುರೆ' ಕವಿತೆ), ಎನ್. ಶ್ರೀನಿವಾಸ್ ಉಡುಪರ 'ಕುಂಬಕರ್ಣನ ನಿದ್ದೆ', ಡಾ.ಎನ್.ಎನ್.ಲಕ್ಷ್ಮೀನಾರಾಯಣಭಟ್ಟರ, ಹೆಚ್.ಎಸ್.ವೆಂಕಟೇಶಮೂರ್ತಿಯವರ ಕವಿತೆಗಳು ಗಮನಿಸಬೇಕಾದವು.'ಬಾಳ ಒಳ್ಳೇವ್ರು ನಮ್ಮಿಸ್ಸು', 'ಗೇರ್ ಗೇರ್ ಮಂಗಣ್ಣ' ಇಂಥ ಕವಿತೆಗಳನ್ನು ಹಾಡಿ ಕುಣಿಯದ ಮಕ್ಕಳೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯವನ್ನು ಮಕ್ಕಳೇ ಸ್ವತಃ ತಮ್ಮ ಕಲ್ಪನೆಯಲ್ಲಿ ಹರಿಯಬಿಡುತ್ತಾರೆ.ಮಕ್ಕಳ ಮುಗ್ಧತೆಯನ್ನು ಸರಳ-ಸುಂದರವಾಗಿ ತಮ್ಮ ಕವಿತೆಗಳಲ್ಲಿ ಹೇಳುವ ಮೂಲಕ ತಮ್ಮ ಸಾಹಿತ್ಯಾಸಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕನ್ನಡದಲ್ಲಿ ಸಮೃದ್ಧವಾದ 'ಮಕ್ಕಳ ಸಾಹಿತ್ಯ' ರಚನೆಯಾಗಿದೆ. ಈ ಸಾಹಿತ್ಯಕ್ಕೆ 'ಪತ್ರಿಕಾ ಮಾಧ್ಯಮ' ಪ್ರೋತ್ಸಾಹವನ್ನು ನೀಡುತ್ತಿದೆ. ಆದರೂ ಮಕ್ಕಳು ಇದರ ಪ್ರಯೋಜನವನ್ನು ಸರಿಯಾಗಿ ಪಡೆದುಕೊಳ್ಳುತ್ತಿಲ್ಲವೆಂದು ಹೇಳಲು ವಿಷಾದವೆನಿಸುತ್ತದೆ.
ಇದಕ್ಕೆ ಮುಖ್ಯ ಕಾರಣ ಇಂದಿನ ವಿದ್ಯಾಭ್ಯಾಸ. ಮಕ್ಕಳ ಮನಸ್ಸನ್ನು ತಟ್ಟುವ ಮಾತೃಭಾಷೆಯ (ಕನ್ನಡ) ಪದ್ಯಗಳಿಗಿಂತ ಇಂಗ್ಲೀಷ್ ರೈಮ್ಸ್ ನ್ನೇ ತರಗತಿಯಲ್ಲಿ ಬೋಧನೆ ಮಾಡುವ ಮೂಲಕ ಪುಟ್ಟ ಹೃದಯಕ್ಕೆ ಸಿಗಬಹುದಾದ ಆನಂದಕ್ಕೆ ಪೆಟ್ಟುಬೀಳುತ್ತಿದೆ. ಇದರಲ್ಲಿ ಪೋಷಕರೂ ಪಾಲುದಾರುರೇ. ಅಲ್ಲದೇ ವಿದ್ಯುನ್ಮಾನ ಮಾಧ್ಯಮಗಳಿಗೆ ಮಾರುಹೋದ ಮಕ್ಕಳು ಕವಿತೆಗಳ ಭಾವ ಪ್ರಪಂಚದಿಂದ ವಂಚಿತರಾಗಿ ಯಾಂತ್ರಿಕವಾಗುತ್ತಿದ್ದಾರೆ.ಹೀಗಾಗಿ ಅವರಲ್ಲಿ ಆದರ್ಶ, ಕಲ್ಪನೆ, ಹೃದಯವಂತಿಕೆಗಳು ಕಡಿಮೆಯಾಗುತ್ತಿವೆ. ಆಧುನಿಕ ವಿದ್ಯಾಭ್ಯಾಸದ ಜೊತೆ ಜೊತೆಗೆ ಮಕ್ಕಳಲ್ಲಿ ಈ ಕವಿತೆಗಳ ಆಸ್ವಾದನೆಯ ರುಚಿ ತಿಳಿಸಿಕೊಟ್ಟರೆ ಅವರು ಇನ್ನೂ ಉತ್ತಮ ರೀತಿಯಲ್ಲಿ ವಿದ್ಯಾವಂತರೂ-ಹೃದಯವಂತರೂ ಆಗುತ್ತಾರೆಂದೇ ದೃಢವಾಗಿ ಹೇಳಬಹುದು.
=== ನಾಟಕ ===
[[ನಾಟಕ]]ವು ನಟರು ಅಭಿನಯಿಸಬಹುದಾದ ರೀತಿಯಲ್ಲಿ ರಚಿಸಲ್ಪಡುವ ಒಂದು ಸಾಹಿತ್ಯ ಪ್ರಕಾರ ನಾಟಕದ ಅಭಿನಯವು ಒಂದು ರಂಗಕಲೆಯ ವಿಧಿ.
=== ಮಕ್ಕಳ ನಾಟಕ ===
ಹಿಂದಿನ ಕಾಲದಲ್ಲಿ ಮಕ್ಕಳಿಗೆ ಮೂಲವಾದ ಮನೋರಂಜನೆ ಎಂದರೆ ನಾಟಕ.ನಾಟಕಗಳಿಂದ ಮಕ್ಕಳು ಜೀವನದ ಮೌಲ್ಯಗಳನ್ನು ಕಲಿಯುತ್ತಿದರು ಹಾಗು ಸರಿ ತಪ್ಪು ವಿನ ವ್ಯತ್ಯಾಸವನು ತಿಳಿಯುತ್ತಿದರು.ನಾಟಕಗಳಿಂದ ಮಕ್ಕಳ ವರ್ತನೆಗಳು ಬದಲಾದವು.ಮಕ್ಕಳ ಮನಸ್ಸು ಸೂಕ್ಷಮವಾದ್ದುದು,ಆದರಿಂದ ನಾಟಕ ಮಕ್ಕಳ ಮನಸ್ಸಿನಲ್ಲಿ ಪ್ರಮೂಕವಾದ ಸ್ಥಾನವನ್ನು ನಿಡಲು,ನಾಟಕಗಾರರು ಬಿನ್ನವಾದ ಪಾತ್ರಗಳನ್ನು ಪ್ರರಂಭಿಸುತ್ತಿದರು.ಅವುಗಳಲ್ಲಿ ಹಾಸ್ಯ,ಗೀತೆ,ಭಯಕರವಾದ ಪಾತ್ರಗಳು ಮತ್ತು ಬಿನ್ನವಾದ ಪ್ರಾಣಿಗಳ ವೇಶಗಳನ್ನು ದರಿಸಿ ಮಕ್ಕಳ ಮನಸ್ಸನ್ನು ಮುಟುತ್ತಿದ್ದರು.ನಾಟಕವು ಬಹಳ ಅದ್ಭುತವಾಗಿ ಮೂಡಿಸಲು ನಾಟಕಗಾರರು ತರತರದ ಉಡುಪುಗಳನ್ನು ದರಿಸಿ,ಪಾತ್ರದ ತಕ್ಕವಾಗಿ ಅಲಂಕಾರವನ್ನು ಮಾಡಿಕೋಳುತ್ತಿದರು.
ತುಂಬ ಪ್ರಮುಖವಾದ ಮಕ್ಕಳ ನಾಟಕಗಳು ಎಂದರೆ ಕುವೆಂಪುರವರ ನನ್ನ ಗೋಪಾಲ,ಮೋಡಣ್ಣನ ತಮ್ಮ.ಇನೂಂದು ಪ್ರಮುಖವಾದ ನಾಟಕ ಎಂದರೆ ರುದ್ರ ನಾಟಕ,ಪಾಶ್ಚಾತ್ಯ ಸಾಹಿತ್ಯದಲ್ಲಿ ಟ್ರಾಜೆಡಿ ಎಂಬ ನಾಟಕ ಪ್ರಕಾರಕ್ಕೆ ಕನ್ನಡದಲ್ಲಿ ರುದ್ರನಾಟಕ ಎಂಬುದು ರೂಢಿಯ ಹೆಸರು;ಪರ್ಯಾಯವಾಗಿ ದುರಂತನಾಟಕ,ದುಃಖಾಂತ ನಾಟಕ,ವಿಷಾದಾಂತ ನಾಟಕ,ಗಂಭೀರ ನಾಟಕ,ಆವಿದ್ಧ ನಾಟಕ-ಎಂದೂ ಹೇಳುವುದುಂಟು.ನಾಯಕನ ಅಥವಾ ನಾಯಕನನ್ನೂ ಒಳಗೊಂಡು ಕೆಲವರ ಸಾವುನೋವುಗಳಿಂದ ನಾಟಕ ಮುಗಿಯುವುದು ಇದರ ಸಾಮಾನ್ಯ ಲಕ್ಷಣ.
ಮಕ್ಕಳ ನಾಟಕಕ್ಕೆ ಕತೆ ಅಥವ ಕವನಗಳಿಗಿರುವ ಇತಿಹಾಸವಿಲ್ಲ .ಕತೆಗಳಿಗೆ ೨೦೦೦ ವರ್ಷಗಳಿಗೂ ಮಿಕ್ಕ ಇತಿಹಾಸವಿದ್ದರೆ ಜಾನಪದ ಮೂಲದಿಂದ ಬರುವ ಮಕ್ಕಳ ಕವನಗಳಿಗೆ ಎ‍‌‌ಷ್ಟು ವರ್ಷದ ಇತಿಹಾಸವಿದೆ ಎಂದು ಹೇಳಲು ಸಾಧ್ಯವಿಲ್ಲ.'ಕಾವ್ಯ ಭಾರತದಲ್ಲಿ ಅತ್ಯಂತ ವುರಾತನಾದುದು ಎನ್ನುವುದು ನಿರ್ವಿವಾದ.ಕಾವ್ಯ ಎನ್ನುವ ಪ್ರಕಾರವೆ ಅತ್ಯಂತ ವುರಾತನದುದು. ಯುರೋಪಿನ (ಗ್ರೀಕ್ ದೇಶ ಒಂದನ್ನು ಬಿಟ್ಟರೆ) ಬೇರಾವ ದೇಶದಲ್ಲೂ ಕಾವ್ಯ ಇಷ್ಟು ಪುರಾತನವಾದುದಲ್ಲ.೨೦೦೦ ವರ್ಷಗಳ ಹಿಂದೆ ಇಂಗ್ಲಿಷ್ ಭಾಷೆಯೇ ಇರಲಿಲ್ಲ ಎನ್ನುವುದು ಚಾರಿತ್ರಿಕ ಸತ್ಯ.ಇನ್ನು ಸಾಹಿತ್ಯ ಬೆಳೆಯುವುದು ದೂರವೆ ಉಳಿಯಿತು.ಈ ಪರಂಪರೆಯ ಎದುರಿಗೆ ನಾಟಕ ಇತ್ತೀಚಿನದು.ಇದರಲ್ಲಿ ಇನ್ನೂ ಒಂದು ಸಮಸ್ಯೆ ಅಡ್ದ ಬರುತ್ತದೆ.ನಾಟಕ ದೃಶ್ಯ ಮಾಧ್ಯಮ.ಮಕ್ಕಳು ಇದನ್ನು ಓದುವುದಕ್ಕಿಂತ ರಂಗದ ಮೇಲೆ ನೋಡಿದರೆ ಹೆಚ್ಚು ಆನಂದ ಪಡುತ್ತಾರೆ.ಆದರೆ ಮಕ್ಕಳ ನಾಟಕಗಳನ್ನು ರಂಗದ ಮೇಲೆ ತರುವ ನಾಟಕದ ತಂಡಗಳು ನಮಲ್ಲಿ ಹೆಚ್ಚು ಇಲ್ಲ.ಬೆಂಗಳೂರಿನ ವಿಜಯನಗರದ ಬಡಾವಣಿಯಲ್ಲಿ ಎ.ಎಸ್.ಮೂರ್ತಿ ಅವರು ನಡೆಸುತ್ತಿರುವ ಚಿತ್ರ ನಾಟಕ ತಂಡದ ಮಕ್ಕಳ ರಂಗಭೂಮಿ ಮತ್ತು ಸಾಗರ ತಾಲ್ಲೂಕಿನಲ್ಲಿ ತಮರಿಯಂಥ ಒಂದು ಕುಗ್ರಾಮದಲ್ಲಿ ಕೆ.ಜಿ.ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಿನ್ನರ ಮೇಳ ಮಕ್ಕಳ ರಂಗಭೂಮಿ ಮಕ್ಕಳಿಗಾಗಿ ಮೀಸಲಾಗಿರುವ ತಂಡ. 'ಈ ಮೇಳ ಕಳೆದ ೧೦ವರ್ಷಗಳಲ್ಲಿ ಸುಮಾರು ೨೫ಕ್ಕೂ ಹೆಚ್ಚು ನಾಟಕಗಳನ್ನು ರಂಗದ ಮೇಲೆ ತಂದಿವೆ.'ಎಂದು ನಾಟಕ ಮಾಸ ಪತ್ರಿಕೆ ೨೦೦೧ನೆ ಜನವರಿ ತಿಂಗಳ ಸಂಚಿಕೆಯಲ್ಲಿ ದಾಖಲು ಮಾಡಿದೆ.ಇತ್ತೀಚಿನ ವರ್ಷಗಳಲ್ಲಿ ನಾಟಕ ಮತ್ತು ರಂಗಭೂಮಿಯನ್ನು ಮಕ್ಕಳಿಗೆ ಹೆಚ್ಚು ಪರಿಚಯಿಸುವ ಪ್ರಯತ್ನ ನಡೆದಿದೆ.
=== ಮಕ್ಕಳ ಕತೆಗಳು ===
"[https://en.wikipedia.org/wiki/Panchatantra ಪಂಚತಂತ್ರ]" ಕತೆಗಳು ಸುಮಾರು ಕ್ರಿ.ಪೂ ೨೦೦ ರಲ್ಲಿ ಸೃಶ್ಟಿಯಾದಂತೆ ಕಾಣುತ್ತದೆ. ಈ ಕತೆಗಳು ವಿಶ್ವದ ಬಹು ಭಾಶೆಗಳಿಗೆ ಭಾಶಾಂತರವಾಗಿವೆ. ಕನ್ನಡಕ್ಕೆ ಇದನ್ನು ಮೊದಲು ಅನುವಾದಿಸಿದವರು ಗದಗ ಜಿಲ್ಲೆಯ ಸವಡಿಯ ದುರ್ಗಸಿಂಹ ಎಂದು ದಾಖಲಾಗಿದೆ.'ಪಂಚತಂತ್ರ'ದ ಕತೆಗಳು ಒಂದು ರೀತಿಯಲ್ಲಿ ನೀತಿಬೋಧಕ ಕತೆಗಳಾದರೂ ಓದಲು ತುಂಬಾ ಕುತೂಹಲವನ್ನು ಕೆರಳಿಸಿ ಮೊದಲಿನಿಂದ ಕೊನೆಯವರೆಗೂ ನಮ್ಮನ್ನು ವಶೀಕರಿಸಿಕೊಳ್ಳುವ ಮಾಂತ್ರಿಕ ಶಕ್ಥಿಯನ್ನು ಪಡೆದಿವೆ. ಕತೆಯ ವಿಶಯ, ಕತೆಯ ಪ್ರಕಾರ ಮತ್ತು ಅದರ ನೇರ ನಿರೂಪಣ ತಂತ್ರ ೨೨೦೦ ವರ್ಶಗಳಶ್ಟು, ಹಳೆಯದಾದರೂ ಈಗಲೂ ಇದು ಓದುಗರಿಗೆ ಹೊಸದೆನಿಸುತ್ತದೆ. ಕ್ಲಾಸಿಕ್ ಎಂದು ಈಗಾಗಲೇ ಸ್ಥಾಪಿತವಾಗಿರುವ ಈ ಕತೆಗಳು ಯಾವ ಸಮಯಕ್ಕೂ ಸೀಮಿತವಾದವಲ್ಲ.
ದಕ್ಶಿಣ ಭಾರತದ ಮಹಿಲಾರೋಪು ನಗರವನ್ನು ಸುಮಾರು ಕ್ರಿ.ಪೂ ೨೦೦ ರಲ್ಲಿ ಆಳುತ್ತಿದ್ದ ರಾಜ ಅಮರಶಕ್ತಿಯ ಮೂರು ಮಕ್ಕಳು ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ ಅವರುಗಳು ವಿದ್ಯೆ ಕಲಿಯದೆ ಹಾಳಾಗುತ್ತಿರುವುದನ್ನು ನೋಡಿ ಅವರನ್ನು ವಿಶ್ನು ಶರ್ಮ ಎನ್ನುವ ಗುರುವಿನ ವಶ ಮಾಡುತ್ತರೆ. ಅವರಿಗೆ ವಿದ್ಯೆ ಕಲಿಸುವ ಪ್ರಕ್ರಿಯೆಯಲ್ಲಿ ವಿಶ್ನು ಶರ್ಮ ಹೇಳುವ ಕತೆಗಳೆ 'ಪಂಚತಂತ್ರ'ದ ಕತೆಗಳು. ಕತೆಗಳಾ ವಿಶಯದ ಬಗ್ಗೆ ಹೇಳುವುದಾದರೆ ರಾಜಕುಮಾರರಿಗೆ ವಿದ್ಯೆ ಕಲಿಸುವ ಮತ್ತು ಮನರ್ಂಜನೆಯನ್ನು ಕೊಡುವುದರ ಜೊತೆಗೆ ಈ fafafsfaಫ಼ೇಬಲ್ ಗಳು ಪರೋಕ್ಶವಾಗಿ ರಾಜನೀತಿಯನ್ನು ಕಲಿಸುತ್ತಿದ್ದುದು ಸ್ಪಶ್ಟವಾಗುತ್ತದೆ. ರಾಜಾಡಳಿತ ಬದಲಾಗಿ ಮನರಂಜನೆಯನ್ನು ಕೊಡುವುದರ ಜೊತೆಗೆ ಈ ಕತೆಗಳು ಪರೋಕ್ಶವಾಗಿ ರಾಜನೀತಿಯನ್ನು ಕಲಿಸುತ್ತಿದ್ದುದು ಸ್ಪಶ್ಟವಾಗುತ್ತದೆ. ರಾಜಾಡಳಿತ ಬದಲಾಗಿ ಪ್ರಜಾತಂತ್ರ ಬಂದಿದ್ದರೂ ಕತೆಗಳು ಯವುದೇ ವಿಧದಲ್ಲೂ ತಮ್ಮ ಪರಸ್ತುತತೆಯನ್ನು ಕಳೆದುಕೊಂಡಿಲ್ಲ. ಪ್ರಾಣಿಗಳ ಕತೆ ಮಕ್ಕಳಿಗೆ ಎಂದೂ ಆಕರ್ಶಣೀಯವೆ. ಕತೆಯ ವಿಶಯಗಳೂ ಸಹ ಈಗಲೂ ಹಸುರಾಗಿಯೆ ಇವೆ. ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಬಹಳ ಸಂಕೀರ್ಣ ವಿಶಯಗಳನ್ನು ಬಹಳ ಸರಳವಾದ ಭಾಶೆಯಲ್ಲಿ ಹೇಳಿರುವುದು ವಿಶ್ನು ಶರ್ಮನಿಗೆ ತಾನು ಹೇಳುತ್ತಿರುವ ವಿಶಯದ ಬಗ್ಗೆ ಇರುವ ಸಂಪೂರ್ಣಾ ಹಿಡಿದತವನ್ನು ಸೂಚಿಸುತ್ತದೆ. ಕತೆ ಹೇಳುವ ಕಲೆಯಲ್ಲಿ ಈತ ಪರಿಪೂರ್ಣತೆಯನ್ನು ಸಾಧಿಸಿದಂತೆ ಕಾಣುತ್ತದೆ.
"https://kn.wikipedia.org/wiki/ಮಕ್ಕಳ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ