ಮಕ್ಕಳ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೭ ನೇ ಸಾಲು:
ಮಕ್ಕಳ ನಾಟಕಕ್ಕೆ ಕತೆ ಅಥವ ಕವನಗಳಿಗಿರುವ ಇತಿಹಾಸವಿಲ್ಲ .ಕತೆಗಳಿಗೆ ೨೦೦೦ ವರ್ಷಗಳಿಗೂ ಮಿಕ್ಕ ಇತಿಹಾಸವಿದ್ದರೆ ಜಾನಪದ ಮೂಲದಿಂದ ಬರುವ ಮಕ್ಕಳ ಕವನಗಳಿಗೆ ಎ‍‌‌ಷ್ಟು ವರ್ಷದ ಇತಿಹಾಸವಿದೆ ಎಂದು ಹೇಳಲು ಸಾಧ್ಯವಿಲ್ಲ.'ಕಾವ್ಯ ಭಾರತದಲ್ಲಿ ಅತ್ಯಂತ ವುರಾತನಾದುದು ಎನ್ನುವುದು ನಿರ್ವಿವಾದ.ಕಾವ್ಯ ಎನ್ನುವ ಪ್ರಕಾರವೆ ಅತ್ಯಂತ ವುರಾತನದುದು. ಯುರೋಪಿನ (ಗ್ರೀಕ್ ದೇಶ ಒಂದನ್ನು ಬಿಟ್ಟರೆ) ಬೇರಾವ ದೇಶದಲ್ಲೂ ಕಾವ್ಯ ಇಷ್ಟು ಪುರಾತನವಾದುದಲ್ಲ.೨೦೦೦ ವರ್ಷಗಳ ಹಿಂದೆ ಇಂಗ್ಲಿಷ್ ಭಾಷೆಯೇ ಇರಲಿಲ್ಲ ಎನ್ನುವುದು ಚಾರಿತ್ರಿಕ ಸತ್ಯ.ಇನ್ನು ಸಾಹಿತ್ಯ ಬೆಳೆಯುವುದು ದೂರವೆ ಉಳಿಯಿತು.ಈ ಪರಂಪರೆಯ ಎದುರಿಗೆ ನಾಟಕ ಇತ್ತೀಚಿನದು.ಇದರಲ್ಲಿ ಇನ್ನೂ ಒಂದು ಸಮಸ್ಯೆ ಅಡ್ದ ಬರುತ್ತದೆ.ನಾಟಕ ದೃಶ್ಯ ಮಾಧ್ಯಮ.ಮಕ್ಕಳು ಇದನ್ನು ಓದುವುದಕ್ಕಿಂತ ರಂಗದ ಮೇಲೆ ನೋಡಿದರೆ ಹೆಚ್ಚು ಆನಂದ ಪಡುತ್ತಾರೆ.ಆದರೆ ಮಕ್ಕಳ ನಾಟಕಗಳನ್ನು ರಂಗದ ಮೇಲೆ ತರುವ ನಾಟಕದ ತಂಡಗಳು ನಮಲ್ಲಿ ಹೆಚ್ಚು ಇಲ್ಲ.ಬೆಂಗಳೂರಿನ ವಿಜಯನಗರದ ಬಡಾವಣಿಯಲ್ಲಿ ಎ.ಎಸ್.ಮೂರ್ತಿ ಅವರು ನಡೆಸುತ್ತಿರುವ ಚಿತ್ರ ನಾಟಕ ತಂಡದ ಮಕ್ಕಳ ರಂಗಭೂಮಿ ಮತ್ತು ಸಾಗರ ತಾಲ್ಲೂಕಿನಲ್ಲಿ ತಮರಿಯಂಥ ಒಂದು ಕುಗ್ರಾಮದಲ್ಲಿ ಕೆ.ಜಿ.ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಿನ್ನರ ಮೇಳ ಮಕ್ಕಳ ರಂಗಭೂಮಿ ಮಕ್ಕಳಿಗಾಗಿ ಮೀಸಲಾಗಿರುವ ತಂಡ. 'ಈ ಮೇಳ ಕಳೆದ ೧೦ವರ್ಷಗಳಲ್ಲಿ ಸುಮಾರು ೨೫ಕ್ಕೂ ಹೆಚ್ಚು ನಾಟಕಗಳನ್ನು ರಂಗದ ಮೇಲೆ ತಂದಿವೆ.'ಎಂದು ನಾಟಕ ಮಾಸ ಪತ್ರಿಕೆ ೨೦೦೧ನೆ ಜನವರಿ ತಿಂಗಳ ಸಂಚಿಕೆಯಲ್ಲಿ ದಾಖಲು ಮಾಡಿದೆ.ಇತ್ತೀಚಿನ ವರ್ಷಗಳಲ್ಲಿ ನಾಟಕ ಮತ್ತು ರಂಗಭೂಮಿಯನ್ನು ಮಕ್ಕಳಿಗೆ ಹೆಚ್ಚು ಪರಿಚಯಿಸುವ ಪ್ರಯತ್ನ ನಡೆದಿದೆ.
== ಮಕ್ಕಳ ಕತೆಗಳು ==
"[https://en.wikipedia.org/wiki/Panchatantra ಪಂಚತಂತ್ರ]" [[ಕತೆ]]ಗಳುಕತೆಗಳು ಸುಮಾರು ಕ್ರಿ.ಪೂ ೨೦೦ ರಲ್ಲಿ ಸೃಶ್ಟಿಯಾದಂತೆ ಕಾಣುತ್ತದೆ. ಈ ಕತೆಗಳು ವಿಶ್ವದ ಬಹು ಭಾಶೆಗಳಿಗೆ ಭಾಶಾಂತರವಾಗಿವೆ. ಕನ್ನಡಕ್ಕೆ ಇದನ್ನು ಮೊದಲು ಅನುವಾದಿಸಿದವರು ಗದಗ ಜಿಲ್ಲೆಯ ಸವಡಿಯ ದುರ್ಗಸಿಂಹ ಎಂದು ದಾಖಲಾಗಿದೆ.'ಪಂಚತಂತ್ರ'ದ ಕತೆಗಳು ಒಂದು ರೀತಿಯಲ್ಲಿ ನೀತಿಬೋಧಕ ಕತೆಗಳಾದರೂ ಓದಲು ತುಂಬಾ ಕುತೂಹಲವನ್ನು ಕೆರಳಿಸಿ ಮೊದಲಿನಿಂದ ಕೊನೆಯವರೆಗೂ ನಮ್ಮನ್ನು ವಶೀಕರಿಸಿಕೊಳ್ಳುವ ಮಾಂತ್ರಿಕ ಶಕ್ಥಿಯನ್ನು ಪಡೆದಿವೆ. ಕತೆಯ ವಿಶಯ, ಕತೆಯ ಪ್ರಕಾರ ಮತ್ತು ಅದರ ನೇರ ನಿರೂಪಣ ತಂತ್ರ ೨೨೦೦ ವರ್ಶಗಳಶ್ಟು, ಹಳೆಯದಾದರೂ ಈಗಲೂ ಇದು ಓದುಗರಿಗೆ ಹೊಸದೆನಿಸುತ್ತದೆ. ಕ್ಲಾಸಿಕ್ ಎಂದು ಈಗಾಗಲೇ ಸ್ಥಾಪಿತವಾಗಿರುವ ಈ ಕತೆಗಳು ಯಾವ ಸಮಯಕ್ಕೂ ಸೀಮಿತವಾದವಲ್ಲ.
ದಕ್ಶಿಣ ಭಾರತದ ಮಹಿಲಾರೋಪು ನಗರವನ್ನು ಸುಮಾರು ಕ್ರಿ.ಪೂ ೨೦೦ ರಲ್ಲಿ ಆಳುತ್ತಿದ್ದ ರಾಜ ಅಮರಶಕ್ತಿಯ ಮೂರು ಮಕ್ಕಳು ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ ಅವರುಗಳು ವಿದ್ಯೆ ಕಲಿಯದೆ ಹಾಳಾಗುತ್ತಿರುವುದನ್ನು ನೋಡಿ ಅವರನ್ನು ವಿಶ್ನು ಶರ್ಮ ಎನ್ನುವ ಗುರುವಿನ ವಶ ಮಾಡುತ್ತರೆ. ಅವರಿಗೆ ವಿದ್ಯೆ ಕಲಿಸುವ ಪ್ರಕ್ರಿಯೆಯಲ್ಲಿ ವಿಶ್ನು ಶರ್ಮ ಹೇಳುವ ಕತೆಗಳೆ 'ಪಂಚತಂತ್ರ'ದ ಕತೆಗಳು. ಕತೆಗಳಾ ವಿಶಯದ ಬಗ್ಗೆ ಹೇಳುವುದಾದರೆ ರಾಜಕುಮಾರರಿಗೆ ವಿದ್ಯೆ ಕಲಿಸುವ ಮತ್ತು ಮನರ್ಂಜನೆಯನ್ನು ಕೊಡುವುದರ ಜೊತೆಗೆ ಈ fafafsfaಫ಼ೇಬಲ್ ಗಳು ಪರೋಕ್ಶವಾಗಿ ರಾಜನೀತಿಯನ್ನು ಕಲಿಸುತ್ತಿದ್ದುದು ಸ್ಪಶ್ಟವಾಗುತ್ತದೆ. ರಾಜಾಡಳಿತ ಬದಲಾಗಿ ಮನರಂಜನೆಯನ್ನು ಕೊಡುವುದರ ಜೊತೆಗೆ ಈ ಕತೆಗಳು ಪರೋಕ್ಶವಾಗಿ ರಾಜನೀತಿಯನ್ನು ಕಲಿಸುತ್ತಿದ್ದುದು ಸ್ಪಶ್ಟವಾಗುತ್ತದೆ. ರಾಜಾಡಳಿತ ಬದಲಾಗಿ ಪ್ರಜಾತಂತ್ರ ಬಂದಿದ್ದರೂ ಕತೆಗಳು ಯವುದೇ ವಿಧದಲ್ಲೂ ತಮ್ಮ ಪರಸ್ತುತತೆಯನ್ನು ಕಳೆದುಕೊಂಡಿಲ್ಲ. ಪ್ರಾಣಿಗಳ ಕತೆ ಮಕ್ಕಳಿಗೆ ಎಂದೂ ಆಕರ್ಶಣೀಯವೆ. ಕತೆಯ ವಿಶಯಗಳೂ ಸಹ ಈಗಲೂ ಹಸುರಾಗಿಯೆ ಇವೆ. ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಬಹಳ ಸಂಕೀರ್ಣ ವಿಶಯಗಳನ್ನು ಬಹಳ ಸರಳವಾದ ಭಾಶೆಯಲ್ಲಿ ಹೇಳಿರುವುದು ವಿಶ್ನು ಶರ್ಮನಿಗೆ ತಾನು ಹೇಳುತ್ತಿರುವ ವಿಶಯದ ಬಗ್ಗೆ ಇರುವ ಸಂಪೂರ್ಣಾ ಹಿಡಿದತವನ್ನು ಸೂಚಿಸುತ್ತದೆ. ಕತೆ ಹೇಳುವ ಕಲೆಯಲ್ಲಿ ಈತ ಪರಿಪೂರ್ಣತೆಯನ್ನು ಸಾಧಿಸಿದಂತೆ ಕಾಣುತ್ತದೆ.
ಇದಾದ ಮೇಲೆ ನಮಗೆ ೧೧ನೇ ಶತಮಾನದಲ್ಲಿ ಸೋಮದೇವ ವಿರಚಿತ 'ಕಥಾಸರಿತ್ಸಾಗರ' ಸಿಗುತ್ತದೆ. ಹೆಸರೇ ಹೇಳುವಂತೆ ಇದೊಂದು ಕತೆಗಳ ಸಾಗರ. ಕತೆಗಳು ನದಿಗಳಂತೆ ಹರಿದು ಬಂದು ಒಂದೆಡೆ ಸೇರಿ ಸಾಗರವಾಗಿರುವ ಪುಸ್ತಕ 'ಕಥಾಸರಿತ್ಸಾಗರ'. ಇಲ್ಲಿ ಮಕ್ಕಳಿಗೆ (ಬಹುಶ: ಎಲ್ಲ ವಯಸಿನ ಮಕ್ಕಳಿಗೆ! ) ಓದಬಹುದಾದ ವೈವಿದ್ಯಮಯ ಕತೆಗಳು ಸಿಕ್ಕುತ್ತವೆ. ಇಲ್ಲಿರುವ ಕತೆಗಳ ವಿಶಯದ ವೈವಿದ್ಯತೆಯ ವಿಸ್ತಾರ ಬೆರಗುಗೊಳಿಸುವಂತಹದ್ದು. ಮುಂದೆ ೧೪ನೇ ಶತಮಾನದಲ್ಲ್ಲಿ ನಾರಾಯಣ ಪಂಡಿತ ವಿರಚಿತ 'ಹಿತೋಪದೇಶ' ಕತೆಗಳು ಸಿಕ್ಕುತ್ತವೆ. ಇವನ್ನು ನೀತಿ, ವ್ಯವಹಾರ ಮತ್ತು ಒಳಿತು, ಕೆಡಕು ಹೀಗೆ ೪ ಭಾಗಗಳಾಗಿ ವಿಂಗಡಣೆ ಮಾದಲಾಗಿದೆ. ಮಗುವಾಗಿದಾಗಲೆ ನೀತಿಗಳನ್ನು ಉಪದೇಶ ಮಾಡಬೇಕೆಂಬುದು ನಾರಾಯಣ ಪಂಡಿತನ ಉದ್ದೇಶ ಎಂಬುದು ಅವನೇ ಹೇಳಿಕೊಂಡಿದ್ದಾನೆ. ಈ ಎಲ್ಲ ಕೃತಿಗಳು ಕನ್ನಡಕ್ಕೆ ಭಾಶಾಂತರವಾಗಿವೆ. ಭಾರತದ ಎಲ್ಲಾ ಭಾಶೆಗಳಿಗೂ ಭಾಶಾಂತರವಾಗಿದೆ ಎಂದು ಕೇಳಿ ತಿಳಿದಿದ್ದೇನೆ. ಈ ಕೃತಿಗಳು ಪರಂಪರೆಯಿಂದ ನಮಗೆ ಸಿಕ್ಕಿರುವ ಸಾಹಿತ್ಯ. ಹೀಗೆ ಸಂಸ್ಕೃತದಲ್ಲಿ ಮತ್ತು ಭಾಶಾಂತರದ ಮೂಲಕ ರಾಜ್ಯ ಭಾಶೆಗಳಲ್ಲಿ ಕಾಲಕಾಲಕ್ಕೆ ಮಕ್ಕಳಿಗೆ ಬೇಕಾಗುವ ಕತೆಗಳು ನಮ್ಮಲ್ಲಿ ರಚಿಸಲ್ಪಡುತ್ತಿದ್ದವು. ಪ್ರಪಂಚದ ಬಹಳ ಭಾಶೆಗಳಲ್ಲಿ ಇಶ್ಟು ಪುರಾತನ ಸಾಹಿತ್ಯ ದೊರೆಯುವುದಿಲ್ಲ.
"https://kn.wikipedia.org/wiki/ಮಕ್ಕಳ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ