ಮಕ್ಕಳ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೬೬ ನೇ ಸಾಲು:
ತುಂಬ ಪ್ರಮುಖವಾದ ಮಕ್ಕಳ ನಾಟಕಗಳು ಎಂದರೆ ಕುವೆಂಪುರವರ ನನ್ನ ಗೋಪಾಲ,ಮೋಡಣ್ಣನ ತಮ್ಮ.ಇನೂಂದು ಪ್ರಮುಖವಾದ ನಾಟಕ ಎಂದರೆ ರುದ್ರ ನಾಟಕ,ಪಾಶ್ಚಾತ್ಯ ಸಾಹಿತ್ಯದಲ್ಲಿ ಟ್ರಾಜೆಡಿ ಎಂಬ ನಾಟಕ ಪ್ರಕಾರಕ್ಕೆ ಕನ್ನಡದಲ್ಲಿ ರುದ್ರನಾಟಕ ಎಂಬುದು ರೂಢಿಯ ಹೆಸರು;ಪರ್ಯಾಯವಾಗಿ ದುರಂತನಾಟಕ,ದುಃಖಾಂತ ನಾಟಕ,ವಿಷಾದಾಂತ ನಾಟಕ,ಗಂಭೀರ ನಾಟಕ,ಆವಿದ್ಧ ನಾಟಕ-ಎಂದೂ ಹೇಳುವುದುಂಟು.ನಾಯಕನ ಅಥವಾ ನಾಯಕನನ್ನೂ ಒಳಗೊಂಡು ಕೆಲವರ ಸಾವುನೋವುಗಳಿಂದ ನಾಟಕ ಮುಗಿಯುವುದು ಇದರ ಸಾಮಾನ್ಯ ಲಕ್ಷಣ.
ಮಕ್ಕಳ ನಾಟಕಕ್ಕೆ ಕಥೆ ಅಥವ ಕವನಗಳಿಗಿರುವ ಇತಿಹಾಸವಿಲ್ಲ .ಕಥೆಗಳಿಗೆ ೨೦೦೦ ವರ್ಷಗಳಿಗೂ ಮಿಕ್ಕ ಇತಿಹಾಸವಿದ್ದರೆ ಜಾನಪದ ಮೂಲದಿಂದ ಬರುವ ಮಕ್ಕಳ ಕವನಗಳಿಗೆ ಎ‍‌‌ಷ್ಟು ವರ್ಷದ ಇತಿಹಾಸವಿದೆ ಎಂದು ಹೇಳಲು ಸಾಧ್ಯವಿಲ್ಲ.'ಕಾವ್ಯ ಭಾರತದಲ್ಲಿ ಅತ್ಯಂತ ವುರಾತನಾದುದು ಎನ್ನುವುದು ನಿರ್ವಿವಾದ.ಕಾವ್ಯ ಎನ್ನುವ ಪ್ರಕಾರವೆ ಅತ್ಯಂತ ವುರಾತನದುದು. ಯುರೋಪಿನ (ಗ್ರೀಕ್ ದೇಶ ಒಂದನ್ನು ಬಿಟ್ಟರೆ) ಬೇರಾವ ದೇಶದಲ್ಲೂ ಕಾವ್ಯ ಇಷ್ಟು ಪುರಾತನವಾದುದಲ್ಲ.೨೦೦೦ ವರ್ಷಗಳ ಹಿಂದೆ ಇಂಗ್ಲಿಷ್ ಭಾಷೆಯೇ ಇರಲಿಲ್ಲ ಎನ್ನುವುದು ಚಾರಿತ್ರಿಕ ಸತ್ಯ.ಇನ್ನು ಸಾಹಿತ್ಯ ಬೆಳೆಯುವುದು ದೂರವೆ ಉಳಿಯಿತು.ಈ ಪರಂಪರೆಯ ಎದುರಿಗೆ ನಾಟಕ ಇತ್ತೀಚಿನದು.ಇದರಲ್ಲಿ ಇನ್ನೂ ಒಂದು ಸಮಸ್ಯೆ ಅಡ್ದ ಬರುತ್ತದೆ.ನಾಟಕ ದೃಶ್ಯ ಮಾಧ್ಯಮ.ಮಕ್ಕಳು ಇದನ್ನು ಓದುವುದಕ್ಕಿಂತ ರಂಗದ ಮೇಲೆ ನೋಡಿದರೆ ಹೆಚ್ಚು ಆನಂದ ಪಡುತ್ತಾರೆ.ಆದರೆ ಮಕ್ಕಳ ನಾಟಕಗಳನ್ನು ರಂಗದ ಮೇಲೆ ತರುವ ನಾಟಕದ ತಂಡಗಳು ನಮಲ್ಲಿ ಹೆಚ್ಚು ಇಲ್ಲ.ಬೆಂಗಳೂರಿನ ವಿಜಯನಗರದ ಬಡಾವಣಿಯಲ್ಲಿ ಎ.ಎಸ್.ಮೂರ್ತಿ ಅವರು ನಡೆಸುತ್ತಿರುವ ಚಿತ್ರ ನಾಟಕ ತಂಡದ ಮಕ್ಕಳ ರಂಗಭೂಮಿ ಮತ್ತು ಸಾಗರ ತಾಲ್ಲೂಕಿನಲ್ಲಿ ತಮರಿಯಂಥ ಒಂದು ಕುಗ್ರಾಮದಲ್ಲಿ ಕೆ.ಜಿ.ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಿನ್ನರ ಮೇಳ ಮಕ್ಕಳ ರಂಗಭೂಮಿ ಮಕ್ಕಳಿಗಾಗಿ ಮೀಸಲಾಗಿರುವ ತಂಡ. 'ಈ ಮೇಳ ಕಳೆದ ೧೦ವರ್ಷಗಳಲ್ಲಿ ಸುಮಾರು ೨೫ಕ್ಕೂ ಹೆಚ್ಚು ನಾಟಕಗಳನ್ನು ರಂಗದ ಮೇಲೆ ತಂದಿವೆ.'ಎಂದು ನಾಟಕ ಮಾಸ ಪತ್ರಿಕೆ ೨೦೦೧ನೆ ಜನವರಿ ತಿಂಗಳ ಸಂಚಿಕೆಯಲ್ಲಿ ದಾಖಲು ಮಾಡಿದೆ.ಇತ್ತೀಚಿನ ವರ್ಷಗಳಲ್ಲಿ ನಾಟಕ ಮತ್ತು ರಂಗಭೂಮಿಯನ್ನು ಮಕ್ಕಳಿಗೆ ಹೆಚ್ಚು ಪರಿಚಯಿಸುವ ಪ್ರಯತ್ನ ನಡೆದಿದೆ.
==ಸಂಗ್ರಹಗಳು==
# ಶತಮಾನದ ಮಕ್ಕಳ ಸಾಹಿತ್ಯ - ಸಂ.ಎನ್.ಎಸ್.ರಘುನಾಥ್ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ೨೦೦೧</ref>.
# ಕನ್ನಡ ವಿಶ್ವಕೋಶ ಸಂಪುಟ ಮೂರು. ಕನ್ನಡ ಅಧ್ಯಯನ ಸಂಸ್ಥೆ , ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ೧೯೯೧.</ref>
# ಎನ್.ಶ್ರೀನಿವಾಸ ಉಡುಪ, ಕುಂಬಕಣ‍ನ ನಿದ್ದೆ. ನವಕರ್ನಾಟಕ ಪ್ರಕಾಶನ ಬೆಂಗಳೂರು - ೧೯೯೯.</ref>
== ಮಕ್ಕಳ ಕತೆಗಳು ==
"[https://en.wikipedia.org/wiki/Panchatantra ಪಂಚತಂತ್ರ]" ಕತೆಗಳು ಸುಮಾರು ಕ್ರಿ.ಪೂ ೨೦೦ ರಲ್ಲಿ ಸೃಶ್ಟಿಯಾದಂತೆ ಕಾಣುತ್ತದೆ. ಈ ಕತೆಗಳು ವಿಶ್ವದ ಬಹು ಭಾಶೆಗಳಿಗೆ ಭಾಶಾಂತರವಾಗಿವೆ. ಕನ್ನಡಕ್ಕೆ ಇದನ್ನು ಮೊದಲು ಅನುವಾದಿಸಿದವರು ಗದಗ ಜಿಲ್ಲೆಯ ಸವಡಿಯ ದುರ್ಗಸಿಂಹ ಎಂದು ದಾಖಲಾಗಿದೆ.'ಪಂಚತಂತ್ರ'ದ ಕತೆಗಳು ಒಂದು ರೀತಿಯಲ್ಲಿ ನೀತಿಬೋಧಕ ಕತೆಗಳಾದರೂ ಓದಲು ತುಂಬಾ ಕುತೂಹಲವನ್ನು ಕೆರಳಿಸಿ ಮೊದಲಿನಿಂದ ಕೊನೆಯವರೆಗೂ ನಮ್ಮನ್ನು ವಶೀಕರಿಸಿಕೊಳ್ಳುವ ಮಾಂತ್ರಿಕ ಶಕ್ಥಿಯನ್ನು ಪಡೆದಿವೆ. ಕತೆಯ ವಿಶಯ, ಕತೆಯ ಪ್ರಕಾರ ಮತ್ತು ಅದರ ನೇರ ನಿರೂಪಣ ತಂತ್ರ ೨೨೦೦ ವರ್ಶಗಳಶ್ಟು, ಹಳೆಯದಾದರೂ ಈಗಲೂ ಇದು ಓದುಗರಿಗೆ ಹೊಸದೆನಿಸುತ್ತದೆ. ಕ್ಲಾಸಿಕ್ ಎಂದು ಈಗಾಗಲೇ ಸ್ಥಾಪಿತವಾಗಿರುವ ಈ ಕತೆಗಳು ಯಾವ ಸಮಯಕ್ಕೂ ಸೀಮಿತವಾದವಲ್ಲ.
 
ದಕ್ಶಿಣ ಭಾರತದ ಮಹಿಲಾರೋಪು ನಗರವನ್ನು ಸುಮಾರು ಕ್ರಿ.ಪೂ ೨೦೦ ರಲ್ಲಿ ಆಳುತ್ತಿದ್ದ ರಾಜ ಅಮರಶಕ್ತಿಯ ಮೂರು ಮಕ್ಕಳು ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ ಅವರುಗಳು ವಿದ್ಯೆ ಕಲಿಯದೆ ಹಾಳಾಗುತ್ತಿರುವುದನ್ನು ನೋಡಿ ಅವರನ್ನು ವಿಶ್ನು ಶರ್ಮ ಎನ್ನುವ ಗುರುವಿನ ವಶ ಮಾಡುತ್ತರೆ. ಅವರಿಗೆ ವಿದ್ಯೆ ಕಲಿಸುವ ಪ್ರಕ್ರಿಯೆಯಲ್ಲಿ ವಿಶ್ನು ಶರ್ಮ ಹೇಳುವ ಕತೆಗಳೆ 'ಪಂಚತಂತ್ರ'ದ ಕತೆಗಳು. ಕತೆಗಳಾ ವಿಶಯದ ಬಗ್ಗೆ ಹೇಳುವುದಾದರೆ ರಾಜಕುಮಾರರಿಗೆ ವಿದ್ಯೆ ಕಲಿಸುವ ಮತ್ತು ಮನರ್ಂಜನೆಯನ್ನು ಕೊಡುವುದರ ಜೊತೆಗೆ ಈ fafafsfaಫ಼ೇಬಲ್ ಗಳು ಪರೋಕ್ಶವಾಗಿ ರಾಜನೀತಿಯನ್ನು ಕಲಿಸುತ್ತಿದ್ದುದು ಸ್ಪಶ್ಟವಾಗುತ್ತದೆ. ರಾಜಾಡಳಿತ ಬದಲಾಗಿ ಮನರಂಜನೆಯನ್ನು ಕೊಡುವುದರ ಜೊತೆಗೆ ಈ ಕತೆಗಳು ಪರೋಕ್ಶವಾಗಿ ರಾಜನೀತಿಯನ್ನು ಕಲಿಸುತ್ತಿದ್ದುದು ಸ್ಪಶ್ಟವಾಗುತ್ತದೆ. ರಾಜಾಡಳಿತ ಬದಲಾಗಿ ಪ್ರಜಾತಂತ್ರ ಬಂದಿದ್ದರೂ ಕತೆಗಳು ಯವುದೇ ವಿಧದಲ್ಲೂ ತಮ್ಮ ಪರಸ್ತುತತೆಯನ್ನು ಕಳೆದುಕೊಂಡಿಲ್ಲ. ಪ್ರಾಣಿಗಳ ಕತೆ ಮಕ್ಕಳಿಗೆ ಎಂದೂ ಆಕರ್ಶಣೀಯವೆ. ಕತೆಯ ವಿಶಯಗಳೂ ಸಹ ಈಗಲೂ ಹಸುರಾಗಿಯೆ ಇವೆ. ಮತ್ತೆ ಮತ್ತೆ ಓದಿಸಿಕೊಳ್ಳುತ್ತವೆ. ಬಹಳ ಸಂಕೀರ್ಣ ವಿಶಯಗಳನ್ನು ಬಹಳ ಸರಳವಾದ ಭಾಶೆಯಲ್ಲಿ ಹೇಳಿರುವುದು ವಿಶ್ನು ಶರ್ಮನಿಗೆ ತಾನು ಹೇಳುತ್ತಿರುವ ವಿಶಯದ ಬಗ್ಗೆ ಇರುವ ಸಂಪೂರ್ಣಾ ಹಿಡಿದತವನ್ನು ಸೂಚಿಸುತ್ತದೆ. ಕತೆ ಹೇಳುವ ಕಲೆಯಲ್ಲಿ ಈತ ಪರಿಪೂರ್ಣತೆಯನ್ನು ಸಾಧಿಸಿದಂತೆ ಕಾಣುತ್ತದೆ.
 
ಇದಾದ ಮೇಲೆ ನಮಗೆ ೧೧ನೇ ಶತಮಾನದಲ್ಲಿ ಸೋಮದೇವ ವಿರಚಿತ 'ಕಥಾಸರಿತ್ಸಾಗರ' ಸಿಗುತ್ತದೆ. ಹೆಸರೇ ಹೇಳುವಂತೆ ಇದೊಂದು ಕತೆಗಳ ಸಾಗರ. ಕತೆಗಳು ನದಿಗಳಂತೆ ಹರಿದು ಬಂದು ಒಂದೆಡೆ ಸೇರಿ ಸಾಗರವಾಗಿರುವ ಪುಸ್ತಕ 'ಕಥಾಸರಿತ್ಸಾಗರ'. ಇಲ್ಲಿ ಮಕ್ಕಳಿಗೆ (ಬಹುಶ: ಎಲ್ಲ ವಯಸಿನ ಮಕ್ಕಳಿಗೆ! ) ಓದಬಹುದಾದ ವೈವಿದ್ಯಮಯ ಕತೆಗಳು ಸಿಕ್ಕುತ್ತವೆ. ಇಲ್ಲಿರುವ ಕತೆಗಳ ವಿಶಯದ ವೈವಿದ್ಯತೆಯ ವಿಸ್ತಾರ ಬೆರಗುಗೊಳಿಸುವಂತಹದ್ದು. ಮುಂದೆ ೧೪ನೇ ಶತಮಾನದಲ್ಲ್ಲಿ ನಾರಾಯಣ ಪಂಡಿತ ವಿರಚಿತ 'ಹಿತೋಪದೇಶ' ಕತೆಗಳು ಸಿಕ್ಕುತ್ತವೆ. ಇವನ್ನು ನೀತಿ, ವ್ಯವಹಾರ ಮತ್ತು ಒಳಿತು, ಕೆಡಕು ಹೀಗೆ ೪ ಭಾಗಗಳಾಗಿ ವಿಂಗಡಣೆ ಮಾದಲಾಗಿದೆ. ಮಗುವಾಗಿದಾಗಲೆ ನೀತಿಗಳನ್ನು ಉಪದೇಶ ಮಾಡಬೇಕೆಂಬುದು ನಾರಾಯಣ ಪಂಡಿತನ ಉದ್ದೇಶ ಎಂಬುದು ಅವನೇ ಹೇಳಿಕೊಂಡಿದ್ದಾನೆ. ಈ ಎಲ್ಲ ಕೃತಿಗಳು ಕನ್ನಡಕ್ಕೆ ಭಾಶಾಂತರವಾಗಿವೆ. ಭಾರತದ ಎಲ್ಲಾ ಭಾಶೆಗಳಿಗೂ ಭಾಶಾಂತರವಾಗಿದೆ ಎಂದು ಕೇಳಿ ತಿಳಿದಿದ್ದೇನೆ. ಈ ಕೃತಿಗಳು ಪರಂಪರೆಯಿಂದ ನಮಗೆ ಸಿಕ್ಕಿರುವ ಸಾಹಿತ್ಯ. ಹೀಗೆ ಸಂಸ್ಕೃತದಲ್ಲಿ ಮತ್ತು ಭಾಶಾಂತರದ ಮೂಲಕ ರಾಜ್ಯ ಭಾಶೆಗಳಲ್ಲಿ ಕಾಲಕಾಲಕ್ಕೆ ಮಕ್ಕಳಿಗೆ ಬೇಕಾಗುವ ಕತೆಗಳು ನಮ್ಮಲ್ಲಿ ರಚಿಸಲ್ಪಡುತ್ತಿದ್ದವು. ಪ್ರಪಂಚದ ಬಹಳ ಭಾಶೆಗಳಲ್ಲಿ ಇಶ್ಟು ಪುರಾತನ ಸಾಹಿತ್ಯ ದೊರೆಯುವುದಿಲ್ಲ.
೧೪ನೇ ಶತಮಾನದ ಮೇಲೆ ನಮ್ಮಲ್ಲಿ ಜಾತಕದ ಕತೆಗಳು ಬಂದವು. ಈಸೋಪನ ಕತೆಗಳು ಅಂದರೆ ( ತೋಳ ಬಂತು ತೋಳ, ನರಿ ಮತ್ತು ದ್ರಾಕ್ಶಿ, ಕುರಿಯ ವೇಶದಲ್ಲಿ ನರಿ ) ಇತ್ಯಾದಿಗಳು ಅಥೆನ್ಸ್ ನಗರದಲ್ಲಿ ಒಬ್ಬ ಗ್ರೀಕ್ ಹೇಳಿದ ಕತೆಗಳು. ಜಿಂದಾಬಾದನ ಸಾಹಸಗಳು, ಅರೇಬಿಯನ್ ನೈಟ್ಸ್, ಅಲಿ ಬಾಬಾ ಮತ್ತು ೪೦ ಕಳ್ಳರು ಇತ್ಯಾದಿಗಳು ಭಾಶಾಂತರದಲ್ಲಿರುವ ಹೊರ ದೇಶದ ಕತೆಗಳು. ಆದರೆ ಈ ಕತೆಗಳು ಮಕ್ಕಳಿಗೆ ಅತ್ಯುತ್ತಮವಾಗಿವೆ. ಇವುಗಳು ನಮ್ಮ ಸ್ಂಸ್ಕೃತಿಯಲ್ಲಿ ಎಶ್ಟು ಸೇರಿ ಹೋಗಿವೆ ಎಂದರೆ ಅವುಗಳ ಹೊರ ಸ್ಂಸ್ಕೃತಿಯಿಂದ ಎಂಬುದು ನಗಮನಕ್ಕೆ ಬರುವುದಿಲ್ಲ. ಪ್ಂಚತಂತ್ರ, ಕಥಾಸರಿತ್ಸಾಗರ ಹೇಗೆ ಪ್ರಪಂಚ ಸಾಹಿತ್ಯಕ್ಕೆ ಸೇರಿದೆವೋ ಹಾಗೆ ಭಾರತದ ಸಂಸ್ಕೃತಿಯಲ್ಲಿ ಈ ಕತೆಗಳು ಸೇರಿ ಹೋಗಿವೆ.
 
ಈ ಸಂಕಲನದಲ್ಲಿ ೧೦೪ ಕತೆಗಳಿವೆ. ಕತೆಗಳ ವಸ್ತುವಿನಲ್ಲಿ ವೈವಿಧ್ಯತೆ ಇದೆ. ಇದೇ ೨೦ ನೆ ಶತಮಾನದ ವಿಶೇಶವೆಂದರೆ ತಪ್ಪಾಗಲಾರದು. ಪ್ರಾಣಿಗಳು ಕತೆಯಲ್ಲಿ ಪಾತ್ರರಾಗಿ ಇನ್ನೂ ಉಳಿದಿವೆ. ಉದಾಹರಣೆಗೆ, ಜಯಂತ ಕಾಡದೆವರ ' ತೋಳ ನರಿ ಮತ್ತು ಚಿರತೆ', ನಾಗರಾಜ ಶೆಟ್ಟಿಯವರ 'ನಾಚಿದ ಬೀಜಣ್ಣ', ಸತ್ಯ ಕಲಾ ಧ್ವನಿಯವರ ' ಪ್ರೀತಿಯ ಗುಬ್ಬಿ' ಬಿ.ಟಿ ಸತೀಶ್ ರವರ ' ನಾಯಿ ಮತ್ತು ಯಜಮಾನ' ಹೀಗೆ ಹಲವಾರ್ಯ್ ಉದಾಹರಣೆಗಳು ದೊರಕುತ್ತವೆ. ಪ್ರಾಣಿಗಳ ಮುಗ್ಧತೆಯಿಂದಲೋ ಅಥವಾ ಒಡನಾಡುವ ಪ್ರಾಣಿಗಳ ವಿಧೇಯತೆಯಿಂದಲೋ ಮಕ್ಕಳಿಗೂ ಪ್ರಾಣಿಗಳಿಗೂ ಇರುವ ಸಂಬಂಧ ವಿವರಿಸಲಾಗದಶ್ಟು ಅನ್ಯೋನ್ಯವಾಗಿ ಬೆಳೆದು ಬಂದಿದೆ. ಬಹುಶ: ಇದು ಎಂದೆಂದಿಗೂ ಉಳಿಯುತ್ತದೆ. ಈ ಕತೆಗಳ ಏನು ಹೇಳುತ್ತವೆ ಎನ್ನುವುದಕ್ಕಿಂತ ಪ್ರಾಣಿಗಳ ಹಕತೆ ಹೇಳಿದರೆ ಮಕ್ಕಳ ಗಮನವನ್ನು ಸುಲಭವಾಗಿ ಸೆಳೆಯಬಹುದು; ಮತ್ತು ಅಂತಹ ಕತೆಗಳ ಮೂಲಕ ಕೆಲವು ಸಂದೇಶಗಳನ್ನು ತಲುಪಿಸುವುದು ಸುಲಭ ಎನ್ನುವುದು ಇಲ್ಲಿ ಮುಖ್ಯ ಪಂಚರತಂತ್ರ ಕತೆಗಳಲ್ಲಿ ಕಾಣುವ ಈ ತಿಳುವಳಿಕೆ ಇನ್ನೂ ನಮ್ಮ ಬರಹಗಾರರನ್ನು ಮರ್ಗದರ್ಶನ ಮಾಡುತ್ತಿದೆ ಎನ್ನುವುದು ಒಂದು ವಿಧದಲ್ಲಿ ಆಶ್ಚರ್ಯದ ಸಂಗತಿಯಾದರೂ ಇನ್ನೊಂದು ವಿಧದಲ್ಲಿ ಅಲ್ಲ. ಅಂತಹ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಅತ್ಯಂತ ಪ್ರತಿಭಾವಂತ ಬರಹಗಾರನಿಗೂ ಕಶ್ಟವಿದೆ.ಬರಿ ಪ್ರಾಣಿಗಳ ಕತೆಯಶ್ಟೇ ಅಲ್ಲ. ಗಾಂಧಿಯ ಕೆಲವು ಆದರ್ಶಗಳು ಇನ್ನೂ ಉಳಿದಿವೆ ಎನ್ನುವುದಕ್ಕೆ ಶಂ.ಗು ಬಿರಾದಾರ ಅವರ ' ಅಜ್ಜ ಹೆಳಿದ ಕತೆ ' ಉದಾಹರಣೆಯಾಗಬಹುದು. " ಸತ್ಯ ಹೇಳಿದನೆಲ್ಲಾ ಎಂಬ ಸ್ಂತೋಶದಲ್ಲಿ ತಾಯಿಯನ್ನು ತಬ್ಬಿಕೊಂಡ". ಕತೆಯ ಕೊನೆಯ ಪ್ಯಾರದಲ್ಲಿ ಹುಡುಗ ಹೇಳುವ ಈ ವಾಕ್ಯ ಭಾವುಕತೆಗೆ ತಿರುಗುತ್ತದೆ. ಆದರೂ ಮಕ್ಕಳಿಗೆ ಸೂಚ್ಯ ಭಾಶೆಯನ್ನುಪಯೋಗಿಸಿದರೆ ಬುದ್ಧಿ ಸಮ್ಮತಮವಾಗಿ ಸಂವಹದ ಪ್ರಶ್ನೆ ಬರುತ್ತಿತ್ತ್ಂದು ಹಾಗೆ ಬರೆದಿದ್ದರೆಂದು ಭಾವಿಸಬಹುದು. ಮನಿಯಾಲ್ ಗಣೀಶ್ ಶೆಣೈ ಅವರ ' ಹೋತದ ಜಾಣತನ ' ಶಕ್ತಿಯಿಂದ ಗೆಲ್ಲಲಾಗದ ಸಂದರ್ಭಗಳನ್ನೂ, ವೈರಿಗಳನ್ನೂ ಸಮಯ ಅರಿವಿನಿಂದ ಗೆಲ್ಲಬಹುದು ಎಂದು ಹೇಳಿದ್ದಾರೆ. ಮೂರ್ತಿ ರಾಮನಾಥಪುರ ಅವರ ' ವಿದ್ಯೆ ಉಪಾಸನೆ ' ಮಕ್ಕಳಿಗೆ ಚ್ಂತನೆ ಮಾಡಲು ಸಾಧ್ಯವಾಗುವಂತಿದೆ.
 
ಬಹುತೇಕ ಸಮಕಾಲೀನ ಮಕ್ಕಳ ಕತೆಗಳಲ್ಲಿ ಭಾವನೆಗಳು ದುಡಿಸಿಕೊಳ್ಳುವ ಪ್ರಯತ್ನವಿದೆಯೇ ಹೊರತು ಮಕ್ಕಳ ಬುದ್ದ್ಧಿಯನ್ನು ದುಡಿಸಿಕೊಂಡು ಯೋಚನೆ ಮಾಡುವಂತೆ ಪ್ರಚೋದಿಸುವ ಕತೆಗಳು ಕೆಲವು ಕಾಣುತ್ತವೆ. ಅಂತಹದರಲ್ಲಿ ಸಂಪಟೂರು ವಿಶ್ವನಾಥ್ ಅವರ ' ಋಣಭಾರ' ವನ್ನು ಒಂದು ಉದಾಹರಣೆಯಾಗಿ ನೋಡಬಹುದು.ಇವರ ಕಥೆಯಲ್ಲಿ ಇರುವುದು ಕೇವಲ ಎರಡೇ ಪಾತ್ರಗಳು.ಬದುಕಿನ ಸಂದರ್ಭಗಳಲ್ಲಿ ನಡೆಯುವ ಘಟನೆಗಳಿಗೆ ಒಂದೇ ಅರ್ಥವಿರುವುದಿಲ್ಲ ಎಂಬುದು ಮಕ್ಕಳಿಗೂ ಅರಿವಾಗಬೇಕು. ಬದಲಾಗುತ್ತಿರುವ,ಬದಲಾಗಿರುವ ಸಂಕೀರ್ಣ ಬದುಕಿನ ಸನ್ನಿವೇಶಗಳಿಗೆ ಹಲವು ಅರ್ಥಗಳಿರುತ್ತವೆ ಎಂಬುದು ಮಕ್ಕಳಿಗೆ ಎಳೆಯೆ ವಯಸ್ಸಿನಿಂದಲೇ ಪರಿಚಯ ಮಾಡಿಸುವುದು ಅವರ ಮುಕ್ತ ವಿವೇಚನೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಸಂದೇಶವನ್ನು ಹಾಗು ತಿಳುವಳಿಕೆಯನ್ನು ಸಾರಲು ಕತೆಗಳು ಉತ್ತಮ ಮಾಧ್ಯಮಗಳು.
==ಸಂಗ್ರಹಗಳು==
# ಶತಮಾನದ ಮಕ್ಕಳ ಸಾಹಿತ್ಯ - ಸಂ.ಎನ್.ಎಸ್.ರಘುನಾಥ್ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. ೨೦೦೧</ref>.
# ಕನ್ನಡ ವಿಶ್ವಕೋಶ ಸಂಪುಟ ಮೂರು. ಕನ್ನಡ ಅಧ್ಯಯನ ಸಂಸ್ಥೆ , ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು. ೧೯೯೧.</ref>
# ಎನ್.ಶ್ರೀನಿವಾಸ ಉಡುಪ, ಕುಂಬಕಣ‍ನ ನಿದ್ದೆ. ನವಕರ್ನಾಟಕ ಪ್ರಕಾಶನ ಬೆಂಗಳೂರು - ೧೯೯೯.</ref>
"https://kn.wikipedia.org/wiki/ಮಕ್ಕಳ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ