ಉಡುಪಿ ಬಿ.ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
==ಬಾಲ್ಯ ಜೀವನ==
 
ಜಯರಾಂ ತಮ್ಮ ೫ನೆ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, '''ಚಿಕಮ್ಮ ಭವಾನಿಯ''' ಆಶ್ರಯದಲ್ಲಿ ಬೇಡದ ಮಗುವಾಗಿ ಬೆಳೆದರು.ಅವರ ಗುಣ ಸ್ವಬಾವ ಹೇಳಲು ಹೊರಟರೆ ತಮ್ಮನ್ನು ಪ್ರೀತಿಸದ ಚಿಕ್ಕಮ್ಮನ ಸ್ವಭಾವದ ಬಗ್ಗೆ ಜಯರಾಂ ಒಂದು ಮಾತನ್ನು ಆಡಿದವರಲ್ಲ. ಅದರ ಬದಲಾಗಿ 'ನಿಂದಕರಿರ ಬೇಕಯ್ಯಾ' ಎನ್ನುವ ದಾಸವಾಣಿಯನ್ನು ಒಪ್ಪಿಕೊಂಡು, ಇಂದಿನ ತಮ್ಮ ಉನ್ನತಿಗೆ ಚಿಕ್ಕಮ್ಮನೇ ಕಾರಣ ,ಎಲ್ಲರಂತೆ ತನಗೂ ತಯಿಯ ಪ್ರೀತಿ ದೊರಕಿದ್ದರೆ ತಾನು ಕೇವಲ ಗ್ರಾಮಕ್ಕೆ ಸೀಮಿತವಾಗುತ್ತಿದ್ದೆ ಎಂದಂದ್ದುಕೊಂಡು ಸಮಾಧಾನ ಪಟ್ಟುಕೊಳ್ಳುತಿದ್ದರು. ಅವರು ಅಜಾತಶತ್ರು.ಅವರನ್ನು ಪ್ರೀತಿಸದವರು ಇರಲು ಸಾಧ್ಯ ವಿಲ್ಲ ಎನ್ನ ಬಹುದು. ಅವರಿಗೆ ಸುತ್ತ ಹತ್ತೂ ಹಳ್ಳಿಯವರು ಕರೆಯುತ್ತಿದ್ದು ಕುಟ್ಟಿ ಹರಿದಾಸರೆಂದು. ಅವರೆಂದರೆ ಎಲ್ಲರಿಗು ಅಚ್ಚು-ಮೆಚ್ಚು.ಬಾಲ್ಯ ದಲ್ಲಿ ಇವರು '''ಪದ್ಮನಾಭ ಭಟ್ಟರಲ್ಲಿ''' [[ಸಂಗೀತ]]ವನ್ನು ಕಲಿತರು.ಉಡುಪಿ ಜಯರಾಂನವರು ಜೀವನ ಬಾಲ್ಯ ಸರಳವಾಗೀನೂ ಇರಲಿಲ್ಲ. ಮಲೆನಾಡಿನಲ್ಲಿ ಅಡಕೆ ವಾಣಿಜ್ಯ ಬೆಳೆ. ಅಡಕೆ ಕುಯ್ಲಿನ ಸಮಯದಲ್ಲಿ ಎಲ್ಲರ ಮನೆಯಲ್ಲಿ ಅಡಕೆ ಸುಲಿಸುವ ಕೆಲಸ. ರಾತ್ರಿಯಲ್ಲಿ ಕೆಲಸಮಾಡುವಾಗ ನಿದ್ದೆ ಬರದಿರಲೆಂದು ಭಟ್ಟರನ್ನು ಹಾಡಲು, ಕಥೆ ಹೇಳಲು ಕರೆಸುತ್ತದ್ದರು. ಬಟ್ಟರಿಗೆ ಸುಸ್ತಾದಾಗ ಆ ಕೆಲಸ ಜಯರಾಂ ಪಾಲಿಗೆ ಬರುತ್ತಿತ್ತು. ಇದಕ್ಕೆ ಪ್ರತಿಯಾಗಿ ಅವರಿಗೆ ಊಟ ಹಾಗು ಸ್ವಲ್ಪ ಅಡಿಕೆ ಸಿಗುತ್ತಿತ್ತು. ಅದನ್ನು ಮಾರಿ ಮುಂದಿನ ಸಂಚಾರದವರಿಗೆ ಕುಟುಂಬ ನಿರ್ವಹಣೆಗೆ ಹಣ ಒಟ್ಟು
ಮಾಡಿಕೊಳ್ಳುತ್ತಿದ್ದರು. ಕಿರಿಯ ಹೆಂಡತಿ ಮಗನನ್ನು ಸರಿಯಾಗಿ ನೂಡಿಕೊಳ್ಳುವುದಿಲ್ಲ ಎಂದು ಮಗನನ್ನು ಕರೆದೊಯ್ಯುತ್ತಿದ್ದರು. ಹೀಗೆ ಪ್ರಯಾಣಿಸುವಾಗ ಒಮ್ಮೆ ಕಾಲಿಗೆ ಹಾವು ಕಚ್ಚಿ ಸಾವು ಬದುಕಿನ ಮಧ್ಯ ಇದ್ದ ಮಗನನ್ನು ಉಳಿಸಿಕೊಂಡಿದ್ದು ಸಾಧನೆಯೇ ಸರಿ.
ಹೀಗೆ ಕಷ್ಟದಲ್ಲೆ ಬೆಳೆದ ಜಯರಾಮನಿಗೆ ತಂದೆಯ ಪ್ರೀತಿಯೇ ಅವರಿಗೆ ಸರ್ವಸ್ವ ವಾಗಿತ್ತು. ಹೀಗೆ ಹಾಡುತ್ತಾ ತಮ್ಮ ಸಂಗೀತ ಕಲಿಕೆಯ ವಿಭಾಗಗಳನ್ನು ಹಲವಾರು ವಾಧ್ಯಗಳನ್ನು ನುಡಿಸುವತ್ತ ಅಬ್ಯಾಸ ಮಾಡತೊಡಗಿದರು. ಅವರ ಬಾಲ್ಯದ ಗೆಳೆಯ ಪೇಜಾವರ ಮಠದ ವಿಶ್ವೆಶ್ವರ ತೀರ್ಥ ಸ್ವಾಮಿಜಿ ಸಹಪಾಠಿಯೂ ಹೌದು. ಇಬ್ಬರನ್ನು ಒಂದುಗೊಡಿಸಿದ್ದು ಸಂಗೀತವಂದರೆ ತಪ್ಪಾಗಲಾರದು. ಇವರು ಜೀವನದ ಮತ್ತೊಂದು ತಿರುವು ಬಾವ ಕೃಷ್ಣಕಾರಂತರು ಬಳಿ ಸೇರಿದ್ದು. ಇವರ ಅಕ್ಕ ಸುಶೀಲ ತಮ್ಮನ ಜೀವನಕ್ಕೆ ಎನಾದರು ದಾರಿ ಮಾಡಲೇಬೆಕೆಂಬ ಹಂಬಲದಿಂದ ಯಾರಿಗೂ ತಿಳಿಯದಂತೆ ದುಡ್ಡು ಹೊಂದಿಸಿ ತಮ್ಮನನ್ನು ತನ್ನ ತೀರಿ ಹೋದ ಸಹೋದರಿಯ ಗಂಡ ಕೃಷ್ಣಕಾರಂತರ ಹೂಟೆಲ್, ಅಲ್ಲಿದ್ದ ವಾಟರ್ ಫಾಲ್ಸ್ಸನಿಂದ ಅದ್ಬುತವಾಗಿ ನಡೆಯುತಿತ್ತು. ಕಾರಂತರು ಉದಾಸೀನ ಮಾಡದೆ ಜಯರಾಮರಿಗೆ ಆಶ್ರಯ ವಿತ್ತರು. ಆದರೆ ಜಯರಾಮರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿಕೊಂಡು ಕಾರಂತರೇ ಸೈ ಎನ್ನುವಂತೆ ನಡೆದುಕೊಂಡರು. ಹಾಡುಗಾರಿಕೆಯನ್ನು ಎಷ್ಟೇ ನಿಷ್ಟೆಯಿಂದ ಹೊಟೆಲಿನ ಸಮಸ್ತ ಜವಾಬ್ದಾರಿ ಹೊತ್ತರು. ಹೀಗೆ ಇರುವಾಗ ಅವರ ಜೀವನದ ಮತ್ತೊಂದು ತಿರುವುತೆಗೆದುಕೊಂಡದ್ದು ಭಾವನ ಅಣ್ಣನ ಮಗ ಸೀತಾರಾಮ ಕಾರಂತರು ಜಯರಾಮನಿಗೆ ಸ್ನೇಹಿತ ಫಿಲಾಸಫರ್, ಗೈಡ್ ಎಲ್ಲವೂ ಆದರು.
"https://kn.wikipedia.org/wiki/ಉಡುಪಿ_ಬಿ.ಜಯರಾಂ" ಇಂದ ಪಡೆಯಲ್ಪಟ್ಟಿದೆ