ತ್ರಿವೇಣಿ ಸಂಗಮ, ತಿರುಮಕೂಡಲು ನರಸೀಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
=ಇತರೆ ಆಕರ್ಷಣೆಗಳು=
ಈ ತ್ರಿವೇಣಿ ಸಂಗಮವು ಕೇವಲ ಮೈಸೂರಿನವರನ್ನು ಅಲ್ಲದೆ ರಾಜ್ಯದ ಮೂಲೆಗಳಿಂದ ಹಾಗು ನೆರೆಯ ರಾಜ್ಯಗಳಿಂದ ಸಹ ಯಾತ್ರಿಗಳನ್ನು ಆಕರ್ಷಿಸುತ್ತಿದೆ. ಈ ಸ್ಥಳ ಕೇವಲ ತೀರ್ಥ ಸ್ಥಳವಾಗದೆ ಇನ್ನಿತರ ಯಾತ್ರಿಗಳನ್ನೂ ಸಹ ತನ್ನೆಡೆಗೆ ಸೆಳೆಯುತ್ತಿದೆ. ನದಿಯಲ್ಲಿ ಒಂದು ದಡದಿಂದ ಮತ್ತೊಂದು ದಡಕ್ಕೆ ಹೋಗಲು ಸಹಾಯವಾಗುವಂತೆ ತೆಪ್ಪಗಳು ಸಹ ಇವೆ. ನದಿಯಲ್ಲಿ ಈಜಲು ಬಯಸುವ ಯಾತ್ರಿಗಳು ಸಹ ಇಲ್ಲಿಗೆ ಬರುತ್ತಾರೆ. ಇಲ್ಲಿನ ಸಂಗಮವು ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಜೊತೆಗೆ ಬೇರೆಯವರನ್ನು ಸಹ ಆಕರ್ಷಿಸುವಷ್ಟು ಪ್ರಸಿದ್ಧವಾಗಿದೆ. ತ್ರಿವೇಣಿ ಸಂಗಮಕ್ಕೆ ಹೊಂದುಕೊಂಡಂತೆ ಸ್ವಲ್ಪ ದೂರದಲ್ಲಿ ಗರ್ಗೇಶ್ವರಿ ಎಂಬ ಊರಿದೆ. ಪುರಾಣದ ಪ್ರಕಾರ ಇಲ್ಲಿ ಗಾರ್ಗ ಋಷಿಗಳು ಪ್ರತಿಷ್ಠಾಪಿಸಿದ ಈಶ್ವರ ದೇವಾಲಯವಿದೆ. ಇಲ್ಲಿ ಬಹಳ ಪ್ರಸಿದ್ಧವಾದ ಗಣೇಶನ ಮೂರ್ತಿಯೊಂದಿದೆ. ಈ ಮೂರ್ತಿಯು ಚಿಕ್ಕದಾಗಿದೆ ಹಾಗು ಈ ಮೂರ್ತಿಗೆ ಆದಿಶಂಕರಾಚಾರ್ಯರು ತಮ್ಮ ಪ್ರವಾಸದ ಕಾಲದಲ್ಲಿ ತಂಗಿದ್ದಾಗ ಯಂತ್ರವನ್ನು ಕಟ್ಟಿದ್ದರು. ಹಾಗಾಗಿ ಈ ಮೂರ್ತಿಗೆ ಮತ್ತೊಂದು ಹೆಸರು ಯಂತ್ರ ಪ್ರಶ್ನೆ ಗಣಪತಿ. ಈ ಕಾರಣದಿಂದ ಭಕ್ತಿಯಂದ ಹರಸಿಕೊಂಡು, ಗಣೇಶನನ್ನು ಸ್ಮರಿಸಿ ಮೂರು ಬಾರಿ ಪ್ರಯತ್ನಿಸಿದಲ್ಲಿ ಕಾರ್ಯಸಿದ್ಧಿಯ ಫಲಿತಾಂಶ ತಿಳಿಯಬಹುದು.
ಇಲ್ಲಿ ಪ್ರತಿ ವರ್ಷವು ರಥೋತ್ಸವ ನಡೆಯುತ್ತದೆ. ನಂಜನಗೂಡಿನಲ್ಲಿ ಪಂಚ ರಥೋತ್ಸವನಡೆಯುವ ದಿನದಂದೇ ಇಲ್ಲಿಯೂ ರಥೋತ್ಸವ ನಡೆಯುತ್ತದೆ. ಅಂದು ಅಗಸ್ತ್ಯೇಶ್ವರ ಸ್ವಾಮಿ ಹಾಗು ಪೂರ್ಣಮಂಗಳ ಕಾಮಾಕ್ಷಿ ಅಮ್ಮನವರ ಉತ್ಸವ ಮೂರ್ತಿಗಳನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ, ಪೂಜಾನಂತರ ರಥದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಇಲ್ಲಿ ಪ್ರಸಿದ್ಧ ಕುಂಭ ಮೇಳ ಸಹ ನಡೆಯುತ್ತದೆ, ಮೂರು ವರ್ಷಗಳಿಗೊಮ್ಮೆ ಮಾಘ ಶುದ್ಧ ಹುಣ್ಣಿಮೆಯಂದು ಇದು ನಡೆಯುತ್ತದೆ. ಈ ತ್ರಿವೇಣಿ ಸಂಗಮವನ್ನು ನೋಡಬೇಕಾದರೆ ಬೆಂಗಳೂರಿನಿಂದ ಬಸ್ ವ್ಯವಸ್ಥೆ ಇದೆ. ಮೈಸೂರಿನಿಂದ ಸಹ ಹಲವಾರು ಬಸ್ಗಳಿವೆ.--[[ವಿಶೇಷಸದಸ್ಯ:Contributions/14.99.243.70Smitha venkatesh|Smitha venkatesh]] ([[ಸದಸ್ಯರ ಚರ್ಚೆಪುಟ:Smitha venkatesh|14.99.243.70talk]]) ೧೬:೪೧೪೫, ೩೧ ಜನವರಿ ೨೦೧೪ (UTC)