ತ್ರಿವೇಣಿ ಸಂಗಮ, ತಿರುಮಕೂಡಲು ನರಸೀಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೮ ನೇ ಸಾಲು:
=ಶ್ರೀ ಅಗಸ್ತ್ಯೇಶ್ವರ ದೇವಾಲಯದ ಇತಿಹಾಸ=
ತಿರುಮಕೂಡಲಿನಲ್ಲಿ ನಾವು ಪ್ರಸಿದ್ಧ ದೇವಲಯವಾದ ಶ್ರೀ ಅಗಸ್ತ್ಯೇಶ್ವರ ದೇವಾಲಯವನ್ನು ಕಾಣಬಹುದು. ಪುರಾಣದ ಪ್ರಕಾರ ಇದನ್ನು ಮಹಾತ್ಮರಾದ ಶ್ರೀ ಅಗಸ್ತ್ಯ ಋಷಿಗಳು ಪ್ರತಿಷ್ಠಾಪಿಸಿದ್ದಾರೆ. ಈ ತ್ರಿವೇಣಿ ಸಂಗಮವು ಎಷ್ಟು ಪುಣ್ಯ ಸ್ಥಳವೆಂದರೆ ಒಮ್ಮೆ ಅಗಸ್ತ್ಯ ಋಷಿಗಳು ಈ ದಾರಿಯಲ್ಲಿ ಚಲಿಸುತ್ತಿದ್ದಾಗ ಈ ಪ್ರದೇಶದಲ್ಲಿ ನಿಲ್ಲುತ್ತಾರೆ. ಇಲ್ಲಿನ ನದಿಗಳು ಸೇರುವ ಸಂಗಮವನ್ನು ಕಂಡು ಈ ಸ್ಥಳ ಬಹಳ ಪುಣ್ಯ ಪವಿತ್ರ ಸ್ಥಳವೆಂದು ಅರಿಯತ್ತಾರೆ. ಹೀಗೆ ಈ ಪುಣ್ಯ ಸ್ಥಳದಲ್ಲಿ ಈಶ್ವರ ಲಿಂಗವೊಂದನ್ನು ಸ್ಥಾಪಿಸಬೇಕೆಂದು ನಿರ್ಧರಿಸುತ್ತಾರೆ. ಹೀಗೆ ನಿರ್ಧರಿಸಿದಾಗ ಅವರು ಲಿಂಗವನ್ನು ಎಲ್ಲಿಂದ ತರಬೇಕೆಂದು ಯೋಚಿಸುತ್ತಾರೆ. ಆಗ ಅವರಿಗೆ ಪವನಪುತ್ರ ಹನುಮಂತನ ನೆನಪಾಗುತ್ತದೆ. ಅವರು ನೆನಸಿಕೊಂಡಾಗ ಹನುಮಂತನು ಅವರ ಬಳಿ ಪ್ರತ್ಯಕ್ಷನಾಗುತ್ತಾನೆ. ಆಗ ಅಗಸ್ತ್ಯರು ಈ ಸ್ಥಳದ ಬಗ್ಗೆ ವಿವರಿಸಿ, ಅವರ ಯೋಜನೆಯ ಕುರಿತು ತಿಳಿಸುತ್ತಾರೆ. ಅಗಸ್ತ್ಯರು ಹನುಮಂತನಿಗೆ ಶ್ರೀ ಕ್ಷೇತ್ರ ಕಾಶಿಗೆ ಹೋಗಿ ಶಿವ ಲಿಂಗವನ್ನು ತರುವಂತೆ ಆದೇಶಿಸುತ್ತಾರೆ. ಆಗ ಅಗಸ್ತ್ಯರ ಆದೇಶದಂತೆ ಶ್ರೀ ಕ್ಷೇತ್ರ ಕಾಶಿಗೆ ಹೋದ ಹನುಮಂತನು ಪವಿತ್ರ ಗಂಗೆಯಲ್ಲಿ ಮಿಂದು ಲಿಂಗವೊಂದನ್ನು ಹುಡುಕುತ್ತಾನೆ. ಆಗ ಅವನಿಗೆ ಒಂದು ಶಿವ ಲಿಂಗವು ದೊರೆಯುತ್ತದೆ. ಮಹಾ ಪರಾಕ್ರಮಿಯಾದ ಹನುಮಂತನಿಗೆ ಆ ಲಿಂಗವು ಗಾತ್ರದಲ್ಲಿ ಬಹಳ ಚಿಕ್ಕದೆಂಬ ಭಾವನೆ ಮೂಡುತ್ತದೆ. ಆದರೂ ವಿಧಿಯಿಲ್ಲದೆ ಅದೇ ಲಿಂಗವನ್ನು ತರುತ್ತಾನೆ.
ಇತ್ತ ಅಗಸ್ತ್ಯ ಋಷಿಗಳು ಹನುಮಂತನಿಗಾಗಿ ಕಾಯುತ್ತಿರುತ್ತಾರೆ. ನಂತರ ಅಗಸ್ತ್ಯ ಋಷಿಗಳು ಲಿಂಗ ಪ್ರತಿಷ್ಠಾಪಿಸಲು ಶುಭ ಮುಹೂರ್ತ ಮಿಂಚಿ ಹೋಗುತ್ತದೆ ಎಂದು ಭಾವಿಸಿ ಸೈಕತ ಲಿಂಗವನ್ನು ತಿರುಮಕೂಡಲಿನ ಅಂದರೆ ತ್ರಿವೇಣಿ ಸಂಗಮದ ದಡದಲ್ಲಿ ಪ್ರತಿಷ್ಠಾಪಿಸುತ್ತಾರೆ. ಸೈಕತ ಲಿಂಗ ಎಂದರೆ ಮರಳಿನಿಂದ ಮಾಡಿದ ಲಿಂಗ ಎಂದು ಅರ್ಥ.--[[ಸದಸ್ಯ:Ramya.p1994|Ramya.p1994]] ([[ಸದಸ್ಯರ ಚರ್ಚೆಪುಟ:Ramya.p1994|talk]]) ೧೬:೩೩, ೩೧ ಜನವರಿ ೨೦೧೪ (UTC)ಆಗ ಹನುಮಂತನು ಬಂದು ಆಗಲೇ ಲಿಂಗ ಪ್ರತಿಷ್ಟಾಪನೆಗೊಂಡಿರುವುದನ್ನು ಕಂಡು ಬಹಳ ಕೋಪಗೊಳ್ಳುತ್ತಾನೆ. ಆ ಕೋಪದಲ್ಲಿ ಅವನು ತನ್ನ ವಜ್ರ ಮುಷ್ಠಿಯಿಂದ ಲಿಂಗದ ಮೇಲೆ ಹೊಡೆಯುತ್ತಾನೆ. ಆ ಹೊಡೆತಕ್ಕೆ ಶಿವ ಲಿಂಗದ ಮೇಲ್ಭಾಗವು ಸೀಳಿಕೊಂಡು ಅಲ್ಲಿಂದ ಗಂಗೆ ಉತ್ಪತ್ತಿಯಾಗಲು ಆರಂಭಿಸುತ್ತಾಳೆ. ಹನುಮಂತನು ಆಗ ಮೂರ್ಛೆ ಬೀಳುತ್ತಾನೆ. ಆಗ ಅಲ್ಲಿದ್ದ ಅಗಸ್ತ್ಯ ಋಷಿಗಳು ತಮ್ಮ ಕಮಂಡಲದಲ್ಲಿ ಇದ್ದಂತಹ ನೀರನ್ನು ಮಂತ್ರೋಪದೇಶದೊಂದಿಗೆ ಹನುಮಂತನ ಮೇಲೆ ಹಾಕುತ್ತಾರೆ. ಹನುಮಂತನು ಕಾಶಿಯಿಂದ ತಂದಿದ್ದಂತಹ ಲಿಂಗವನ್ನು ಊರಿನ ಮಧ್ಯದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ, ಲಿಂಗಕ್ಕೆ ಹನುಮಂತೇಶ್ವರ ಎಂದು ಹೆಸರಿಸುತ್ತಾರೆ. ಊರಿನ ಎಲ್ಲಾ ದೇವರುಗಳ ದರ್ಶನ ಪಡೆದು ಕೊನೆಗೆ ಹನುಮಂತೇಶ್ವರನ ದರ್ಶನ ಮಾಡದಿದ್ದರೆ ಫಲ ದೊರೆಯುವುದಿಲ್ಲ ಎಂಬ ನಂಬಿಕೆ ಇದೆ. ಈ ಅಗಸ್ತ್ಯೇಶ್ವರನ ದೇವಾಲಯದಲ್ಲಿ ಪೂರ್ಣಮಂಗಳ ಕಾಮಾಕ್ಷಿ ಅಮ್ಮನವರ ಸನ್ನಿಧಾನವನ್ನು ಸಹ ನಾವು ಕಾಣಬಹುದು. ಅಮ್ಮನವರ ಬಳಿ ಹರಕೆ ಹೊತ್ತು ವಸ್ತ್ರಗಳನ್ನು ದಾನವಾಗಿ ನೀಡಿದರೆ ಹರಕೆ ಪೂರೈಸುವುದು ಎಂಬ ನಂಬಿಕೆ ಇದೆ.
 
=ಇತರೆ ದೇವಾಲಯಗಳು=