ಸದಸ್ಯ:Prathap.P.S./sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ನಾವು ಹೇಳುವುದುಂಟು ನಮ್ಮ ಮಕ್ಕಳೇ ನಮ್ಮ ಆಸ್ತಿಎಂದು, ನಮಗಿಂತ ನಮ್ಮ ಮಕ್ಕಳು ಅವರ ಭವಿಷ್ಯದಲ್ಲಿ ಒಳ್ಳೆಯ ಸ್ಥಾನಮಾನ ಪಡೆಯಬೇಕು. ವೈದ್ಯನಾಗಿಯೋ, ಇಂಜಿನಿಯರ್ ಆಗಿಯೋ.......ಇತ್ಯಾದಿ ಪೋಷಕರ ಆಸೆ ಆಕಾಂಕ್ಷೆಗಳು ಅಥವಾ ಹಗಲು ಕನಸುಗಳೊ ಅವು ಈಡೇರಿದರೆ ಮನಸ್ಸಿಗೆ ತೃಪ್ತಿ.ಅಪ್ಪಿ ತಪ್ಪಿ ಎಲ್ಲಿಯಾದರೂ ನಮ್ಮ ಮಕ್ಕಳು ಕಲಿಕೆಯಲ್ಲಿ ಬಹಳ ಹಿಂದೆ ಉಳಿದು ಮೊದಲನೇ ಎರಡನೇ ರಾಂಕ್ ಪಡೆಯದೇ ಇದ್ದರಂತೂ ಮುಗಿಯಿತು ಕತೆ. ಪೋಷಕರ ಮನಸಿನಲ್ಲಿ ನೆಮ್ಮದಿಯೇಇಲ್ಲ ಸದಾ ಸಿಡುಕು ಜಿಗುಪ್ಸೆ, ಯಾವುದೇ ಶಾಲೆಯಲ್ಲಿ ಆದರೂ ಮೂರು ಮಕ್ಕಳಲ್ಲಿ ಇಪ್ಪತ್ತು ಮಕ್ಕಳಾದರೂ (ಶೇ 20) ಕಲಿಕೆಯಲ್ಲಿ ಹಿಂದುಳಿದವರಿಗಿಂತ ಅಂಕ ಪಟ್ಟಿಯಲ್ಲಿ ಕಡಿಮೆ ಅಂಕಗಳನ್ನು ಪಡೆದಿರಬಹುದು. ಇದಕ್ಕೆಲ್ಲಾ ನಾವು ಕಾರಣಗಳು ತಿಳಿಯುವುದು ತೀರಾ ಅಗತ್ಯ.
(ಕಾರಣ ಒಂದಲ್ಲ ಹಲವಾರು)
* ಬೇರೆ ಮಕ್ಕಳ ಜೊತೆಗೆ ಹೋಲಿಸಿದಾಗ ಬುದ್ಧಿ ಶಕ್ತಿ ಸ್ವಲ್ಪ ಕಡಿಮೆ ಇರಬಹುದು.
* ಕಣ್ಣಿನ ದೃಷ್ಟಿಯಲ್ಲಿ, ಕಿವಿ ಕೇಳುವಿಕೆಯಲ್ಲಿ, ಅಲ್ಪ ಪ್ರಮಾಣದ ಲೋಪದೋಷಗಳು ಇರಬಹುದು.
*ಬೆಳವಣಿಗೆಯ ಹಂತಗಳು ವಿಳಂಬವಾಗಿರಬಹುದು.
*ಬುದ್ಧಿ ಮಾಂಧ್ಯತ್ವ ಇರಬಹುದು.
*ಗಮನದ ಅವಧಾನ ಕೊರತೆ ಇರಬಹುದು.
*ಗಮನದ ಅವಧಾನ ಕೊರತೆ ಜೊತೆಗೆ ಮಿತಿ ಮೀರಿದ ತೀವ್ರತೆ (ಉದ್ವೇಗ) ಇರಬಹುದು.
*ಕಲಿಕೆಯೆಲ್ಲಿ ವಿಕಲತೆ ಇರಬಹುದು.
*ಭಾವನೆಯಲ್ಲಿ ಅವ್ಯವಸ್ಥೆ ಇರಬಹುದು.
*ಮನೆಯಲ್ಲಿ ಸದಾ ತಾಯಿ ತಂದೆಯರ ಜಗಳ/ಮನೆಯ ಅವ್ಯವಸ್ಥೆಯ ಮತ್ತು ಕಲುಶಿತ ವಾತಾವರಣ ಕೂಡಾ ಒಂದು ಕಾರಣವಾಗಬಹುದು.
*ಶಾಲೆಯ ವಾತಾವರಣಕ್ಕೆ ಮಗುವು ಹೊಂದಿಕೊಳ್ಳದೇ ಇರಬಹ್ದುದು.
ಮಾನವನಾಗಿ ಜನ್ಮ ತಾಳಿದಾಗ ಹಾಗೂ ನಂತರ ನಾವೆಲ್ಲರೂ ಒಂದೇ ಸಾಮಾನವಾಗಿರುವುದಿಲ್ಲ. ಅಂದರೆ ಒಬ್ಬ ಇನ್ನೊಬರ ಹಾಗೆ ಇರುವುದಿಲ್ಲ.ಹೆಬ್ಬೆರಳಿನ ರೇಖೆಯ ಗುರುತುಗಳು,ಮುಖ ಚರ್ಯ,ಧ್ವನಿ,ಸ್ವರ,ಮೈಬಣ್ಣ, ಮೈ ಗಾತ್ರ, ಶರೀರದೆತ್ತರ,ಯೋಚನೆ ಶಕ್ತಿ,ಬುದ್ಧಿ ಶಕ್ತಿ,ಕೌಶಲ್ಯತೆ,ಪ್ರತಿಭೆ,ಎಲ್ಲವೂ ಒಂದು ತರಹ/ ಒಂದೇ ಸಮಾನವಾಗಿರುತ್ತದೆಯೊ.ಇವೆಲ್ಲವೂ ವಿಬ್ಭಿನ್ನವಲ್ಲವೇ?
ಹಾಗೆಯೇ ಎಲ್ಲರು ಅಲ್ಪ ಕೆಲವರಾದರೂ ಅಂಗವಿಕಲತೆಯಾಗಿ ಹುಟ್ಟುವುದಿಲ್ಲವೆ? ಉದಾಹರಣೆ :
1. ಕಣ್ಣಿದ್ದು ಹುಟ್ಟಬಹುದು-ಪೂರ್ತಿ ದೃಷ್ಟಿ ಇರುವುದಿಲ್ಲ-ಕುರುಡ
2. ಕಿವಿ ಇದ್ದು ಹುಟ್ಟಬಹುದು-ಪೂರ್ತಿ ಕೆಳುವುದಿಲ್ಲ -ಕಿವುಡ
3. ಬಾಯಿ, ನಾಲಿಗೆ ಇದ್ದು ಹುಟ್ಟಬಹುದು-ಮಾತನಾಡಲು ಆಗುವುದಿಲ್ಲ---ಹೀಗೆ ಮೂಗ,ಕಿವುಡ,ಕುರುಡ,ಮೂಕ ಎಂದು ವಿವಿಧ ವಿಕಲತೆಗಳಿಂದ ಹುಟ್ಟುವ ಮಕ್ಕಳನ್ನು ನಾವು ನೋಡುವಾಗ ಅಂತಹ ಗೋಚರಣವಾಗುತ್ತದೆ.
"https://kn.wikipedia.org/wiki/ಸದಸ್ಯ:Prathap.P.S./sandbox" ಇಂದ ಪಡೆಯಲ್ಪಟ್ಟಿದೆ