"ರೊಮಾನಿ ಜಾನಪದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ದೆಹವನ್ನು ಸುದುವವರೆಗೂ ಅದರಲ್ಲಿ ಆತ್ಮ ಇರುತ್ತದೆ ಎಂದು ಜಿಪ್ಸಿಗಳು ನಂಬುತ್ತಾರೆ. ಸತ್ತವರನ್ನು ಕಡೆಗಣೆಸಿದರೆ ಅವರು ವಾಪಸ್ಸು ಬಂದು ಜೀವಂತವಾಗಿರುವವರನ್ನು ಕಾಡುತ್ತಾರೆ. ಯುದ್ದ ಕಾಲದಲ್ಲಿ ಕೂಡು ಜಿಪ್ಸಿಗಳು ಯೋಧರ ಹೆಣ ಹುಡುಕಿ ಕೊಂಡು ಸುಡುತ್ತಿದರು . ಎಷ್ಟೇ ಶಿಕ್ಷೆ ವಿಧಿಸುವ ಬೆದರಿಕೆ ಹಾಕಿದರೂ ಅವರು ಈ ಕೆಲಸ ನಡೆಸಿಯೇ ತೀರುತ್ತಿದ್ದರು . ಸ್ಥಳೀಯ ವ್ಯತ್ಯಾಸಗಳು ಇದ್ದರೂ ಜಿಪ್ಸಿಗಳ ಶವಸಂಸ್ಕಾರ ವಿಧಿಗಳು ಎಲ್ಲ ಕಡೆಯೂ ಒಂದೇ ರೀತಿ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.ಒಂದೇ ಪ್ರದೇಶಕ್ಕೆ ಅವರು ಅಂಟಿಕೊಳ್ಳುವವರಲ್ಲವಾದ್ದರಿಂದ , ಕಡಿಮೆ ಉಪಕರಣಗಳನ್ನು ಬಯಸುವ ವೃತ್ತಿಗಳನ್ನು ಅವರು ಕರಗತಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಿಪ್ಸಿ ಗಂಡಸರು , ಕುಂಬಾರರೋ ಲೋಹದ ಕೆಲಸಗಾರರೋ ಆಗಿರುತ್ತಾರೆ. ಪೂರ್ವಯೂರೋಪಿನಲ್ಲಿ ಅವರು ಸಂಗೀತಗಾರರಾಗಿ , ಹಾಡುಗಾರರಾಗಿ, ನರ್ತಕರಾಗಿ , ಬೊಂಬೆಯಾಟದವರಾಗಿ ಪ್ರಸಿದ್ಧರಾಗಿದ್ದಾರೆ . ಕುದುರೆ ಮತ್ತು ಹಂದಿ ಮಾರಾಟಗಾರರಾಗಿಯೂ ಅವರು ಖ್ಯಾತರಾಗಿದ್ದಾರೆ . ಅವರಿಗೆ ಕುದುರೆ ಕಂಡರೆ ಬಹಳ ಪ್ರೀತಿ ಇರುವುದರಿಂದ ಕುದುರೆಯ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತರಂತೆ . ಕುದುರೆಗಳ ಮದುವೆ ಮಾಡುತ್ತಾರೆ . ಅದಕ್ಕೆ ವೈದ್ಯವನ್ನೂ ಅವರು ತಿಳಿದಿದ್ದಾರೆ. ಆದರೆ ಈಗೀಗ ಈ ಜ್ಞಾನ ಅವರಲ್ಲಿ ನಶಿಸಿ ಹೋಗುತ್ತಿದೆ . ಜಿಪ್ಸಿಗಳ ಪ್ರಯಾಣದ ವೇಗವನ್ನು ವಾಹನಗಳ ಬಳಕೆ ಒಂದಿಷ್ಟೂ ತಗ್ಗಿಸಿಲ್ಲ . ಜಿಪ್ಸಿಗಳ ಕುದುರೆ ಗಾಡಿಗಳ ಹಾಗೆಯೇ ಅವರ ಕ್ಯಾರವಾನ್ ಕೂಡ ವರ್ಣರಂಜಿತವಾದದ್ದು . ಹೆಂಗಸರು ಕಸೂತಿ ಕೆಲಸ . ಕಣಿ ಹೇಳುವುದರಲ್ಲಿ ಪ್ರವೀಣರು . ಅವರು ಬೇರೆ ಹೆಂಗಸರ ಬಂಜೆತನವನ್ನು ನಿವಾರಿಸುವ ಮಾಂತ್ರಿಕ ಶಕ್ತಿಯನ್ನು ಪಡೆದುಕೊಂಡಿರುತ್ತಾರತೆ . ಓಡಿಹೋದ ಗಂಡಂದಿರನ್ನು ವಾಪಸು ಬರಿಸುವ , ಒಲ್ಲದ ಪ್ರೇಮಿಗಳನ್ನು ಹೆಂಗಸರ ಬಳಿ ತರಿಸುವ ಶಕ್ತಿಯನ್ನೂ ಅವರು ಪಡೆದಿರುತ್ತಾರಂತೆ.
 
ಕೊಲೆ ಬಿಟ್ಟರೆ ಮಿಕ್ಕೆಲ್ಲ ಅಪರಾಧಗಳನ್ನು ಅವರು ಮಾಡುತ್ತಾರೆಂದು ರೊಮಾನಿಗಳ ಬಗ್ಗೆ ಬರೆದಿರುವವರು ಹೇಳಿದ್ದಾರೆ . ಜಿಪ್ಸಿಗಳು ರಕ್ತ ಚೆಲುವುದಿಲ್ಲವಾದ್ದರಿಂದ ಕೊಲೆಯನ್ನು ಅವರು ಮಾಡುವುದಿಲ್ಲ . ವರ್ಜಿನ್ ಮೇರಿ ಜೇಸೆಫ್ ಮತ್ತು ಕ್ರಿಸ್ತ ಶಿಶುವಿಗೆ ಆದರ ನೀಡಲು ನಿರಾಕರಿಸಿದ್ದರಿಂದ ಜಿಪ್ಸಿಗಳು ಅಲೆಮಾರಿಗಳಾಗಬೇಕಾಯಿತೆಂದು ಕಥೆಯಿದೆ . ಕ್ರಿಸ್ತನ ಶಿಲುಬೆಗೆ ಜಿಪ್ಸಿ ಕುಮ್ಮಾರನೊಬ್ಬನು ಮೊಳೆಗಳನ್ನು ತಯಾರಿಸದ್ದರಿಮ್ದ ಅವರಿಗೆ ಶಾಪ ತಗುಲಿದೆಯೆಂದು ರುಮಾನಿಯಾದಲ್ಲಿ ಕಥೆಯಿದೆ . ಆದರೆ ಜಿಪ್ಸಿ ಕುಮ್ಮಾರನು ಕಡಿಮೆ ನೋವಾಗುವಂಥೆ ತೆಳ್ಳನೆ ಮೊಳೆಗಳನ್ನು ತಯಾರಿಸಿಕೊಟ್ಟನೆಂದು ಜಿಪ್ಸಿಗಳು ಇದಕ್ಕೆ ಪ್ರತಿಕಥೆ ಹೇಳುತ್ತಾರೆ . ಇದರಿಂದ ಮೇರಿಯು ಅವರನ್ನು ಹರಸಿ , ಅವರು ಕೆಲಸ ಹಗುರವಾಗಿ . ಲಾಭ ಹೆಚ್ಚಾಗಿರುವಂತೆ ಮಾಡಿದಳೆಂದು ಹೇಳುತ್ತಾರೆ . ಜಿಪ್ಸಿ
ಹೆಂಗಸೊಬ್ಬಳು , ಶಿಲುಬೆಗೇರಿಸುವುದನ್ನು ತಡೆಯಲು ಮೊಳೆಗಳನ್ನು ಕದಿಯಲು ನೋಡಿದಳು . ಆದರೆ ಒಂದೇ ಮೊಳೆ ಕದಿಯಲು ಸ್ಯಾಧ್ಯವಾದದ್ದು . ಇದರಿಂದ ಕ್ರಿಸ್ತನ ಶಿಲುಬೆಗೆ ಕೈಗಳಿಗೆರಡು , ಕಾಲಿಗೊಂದು ಹೀಗೆ ಮೂರೇ ಹೊಡೆಯಲಾಯಿತು ಎಂಬ ಕಥೆಯಿದೆ .
 
 
ಇವರ ವಿವಾಹ ಸಂಬಂಧಗಳಲ್ಲಿ ಆಂಥ ಕಟ್ಟುನಿಟ್ಟೇನಿಲ್ಲ. ಗಂಡಸರು ತಮ್ಮ ಸೋದರಸೊಸೆಯರನ್ನು, ಸೋದರರ ಹೆಣ್ಣು ಮಕ್ಕಳನ್ನು , ಮೊಮ್ಮಕ್ಕಳನು , ಬಲಸೋದರಿಯರನ್ನು ಒಮ್ಮೊಮ್ಮೆ ಅತ್ತೆ ಚಿಕ್ಕಮ್ಮಂದಿರನ್ನು ಸಹ ಮದವೆಯಾಗುತ್ತಾರೆ . ಸೋದರ ಮಾವನ ಮಗಳಿಗೆ ಇಂಥ ಕಡೆ ಬೇಡಿಕೆ ಹೆಚ್ಚು . ಜಿಪ್ಸಿ ಮದುವೆ ಸಂಪ್ರದಾಯಗಳು ಬಂಡಟ್ಟುಗಳ್ಳು ನೆಲೆನಿಂತ ಸ್ಥಳ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತವೆ . ಪ್ರೇಮ ಮುಗಿದು ಹೋದರೆ ಒಬ್ಬರನ್ನೂಬ್ಬರು ಬಿಟ್ಟುಬಿಡುವ ಪ್ರತಿಜ್ಞೆಯನ್ನು ಗಂಡು ಹೆಣ್ಣುಗಳು ಕೈಕೊಳ್ಳುವುದೂ ಮದುವೆ ಸಂಪ್ರದಾಯಗಳಲ್ಲಿ ಒಂದು . ಅವರಲ್ಲಿ ಪಾತಿವ್ರತ್ಯದ ಬಗ್ಗೆ ಗೌರವ ಹೆಚ್ಚು ನಂಬಿಕೆಗೇಡಿಯಾದವಳ ನಾಲಿಗೆಯನ್ನು ಗಂಡನು ಸಾರ್ವಜನಿಕವಾಗಿ ಕಡಿದುಹಾಕುವ ರೂಢಿ ಉಂಟು . ಇದಕ್ಕೆ ಲುಬುನಿಚುಂಬನ ಎಂದು ಹೆಸರು , ರಕ್ತ ಮದುವೆ ಸಂಪ್ರದಾಯವೂ ಇವರಲ್ಲಿದೆ . ಗಂಡು ಹೆಣ್ಣುಗಳ ಮುಂಗೈನ ಚೂರುಭಾಗ ಕತ್ತರಿಸಿ . ಅವರ ರಕ್ತ ಒಂದಕ್ಕೊಂದು ಸೇರುವ ಹಾಗೆ ಕೈಗಳನ್ನು ಕಟ್ಟಲಾಗುತ್ತದೆ . 'ಜಿಪ್ಸಿ ಮದುವೆ ' ಎಂದರೆ "ಮದುವೆಯೇ ಇಲ್ಲ" ಎಂಬ ಅರ್ಥ ಇತ್ತು . ಏಕೆಂದರೆ ಒಂದು ಕಸಬರಿಗೆಯ ಮೇಲೆ ಜಿಗಿಯುವುದರಲ್ಲಿ ಅನೇಕ ಜಿಪ್ಸಿಗಳ ಮದುವೆ ಮುಗಿದು ಹೋಗುತ್ತಿತ್ತು . ಅನೇಕ ಜಿಪ್ಸಿಗಳ ಮದುವೆ ಮುಗಿದು ಹೋಗುತ್ತಿತ್ತು . ಅನೇಕ ಕಡೆಗಳಲ್ಲಿ ಅದರಲ್ಲೂ ಜರ್ಮನಿ ನೆದರ್ಲ್ಯಾಂಡ್ಸ್ ನ್ಲ್ಲಿ . ಇದು ಸಂಪ್ರದಾಯವಾಗಿತ್ತು .
 
ರೊಮಾನಿಗಳು ಅವರು ಸಂಗೀತ ಮತ್ತು ನೃತ್ಯಕ್ಕೆ ಪ್ರಸಿದ್ದರು.
೮೩

edits

"https://kn.wikipedia.org/wiki/ವಿಶೇಷ:MobileDiff/413480" ಇಂದ ಪಡೆಯಲ್ಪಟ್ಟಿದೆ