ರೊಮಾನಿ ಜಾನಪದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ಕೊಲೆ ಬಿಟ್ಟರೆ ಮಿಕ್ಕೆಲ್ಲ ಅಪರಾಧಗಳನ್ನು ಅವರು ಮಾಡುತ್ತಾರೆಂದು ರೊಮಾನಿಗಳ ಬಗ್ಗೆ ಬರೆದಿರುವವರು ಹೇಳಿದ್ದಾರೆ . ಜಿಪ್ಸಿಗಳು ರಕ್ತ ಚೆಲುವುದಿಲ್ಲವಾದ್ದರಿಂದ ಕೊಲೆಯನ್ನು ಅವರು ಮಾಡುವುದಿಲ್ಲ . ವರ್ಜಿನ್ ಮೇರಿ ಜೇಸೆಫ್ ಮತ್ತು ಕ್ರಿಸ್ತ ಶಿಶುವಿಗೆ ಆದರ ನೀಡಲು ನಿರಾಕರಿಸಿದ್ದರಿಂದ ಜಿಪ್ಸಿಗಳು ಅಲೆಮಾರಿಗಳಾಗಬೇಕಾಯಿತೆಂದು ಕಥೆಯಿದೆ . ಕ್ರಿಸ್ತನ ಶಿಲುಬೆಗೆ ಜಿಪ್ಸಿ ಕುಮ್ಮಾರನೊಬ್ಬನು ಮೊಳೆಗಳನ್ನು ತಯಾರಿಸದ್ದರಿಮ್ದ ಅವರಿಗೆ ಶಾಪ ತಗುಲಿದೆಯೆಂದು ರುಮಾನಿಯಾದಲ್ಲಿ ಕಥೆಯಿದೆ . ಆದರೆ ಜಿಪ್ಸಿ ಕುಮ್ಮಾರನು ಕಡಿಮೆ ನೋವಾಗುವಂಥೆ ತೆಳ್ಳನೆ ಮೊಳೆಗಳನ್ನು ತಯಾರಿಸಿಕೊಟ್ಟನೆಂದು ಜಿಪ್ಸಿಗಳು ಇದಕ್ಕೆ ಪ್ರತಿಕಥೆ ಹೇಳುತ್ತಾರೆ . ಇದರಿಂದ ಮೇರಿಯು ಅವರನ್ನು ಹರಸಿ , ಅವರು ಕೆಲಸ ಹಗುರವಾಗಿ . ಲಾಭ ಹೆಚ್ಚಾಗಿರುವಂತೆ ಮಾಡಿದಳೆಂದು ಹೇಳುತ್ತಾರೆ . ಜಿಪ್ಸಿ
ಹೆಂಗಸೊಬ್ಬಳು , ಶಿಲುಬೆಗೇರಿಸುವುದನ್ನು ತಡೆಯಲು ಮೊಳೆಗಳನ್ನು ಕದಿಯಲು ನೋಡಿದಳು . ಆದರೆ ಒಂದೇ ಮೊಳೆ ಕದಿಯಲು ಸ್ಯಾಧ್ಯವಾದದ್ದು . ಇದರಿಂದ ಕ್ರಿಸ್ತನ ಶಿಲುಬೆಗೆ ಕೈಗಳಿಗೆರಡು , ಕಾಲಿಗೊಂದು ಹೀಗೆ ಮೂರೇ ಹೊಡೆಯಲಾಯಿತು ಎಂಬ ಕಥೆಯಿದೆ .
 
ಜಿಪ್ಸಿಗಳ ಭಾಷೆ ಇಂಡೋ-ಯೂರೋಪಿಯನ್ ವರ್ಗಕ್ಕೆ ಸೇರಿದ್ದು , ಸಂಸ್ಕೃತ ಮೂಲವನ್ನು ಹೊಂದಿದೆ . ಸ್ಥಳಿಯ ಭಿನ್ನತೆಗಳನ್ನು ಒಳಗೊಂಡಿದ್ದರೂ ಭಾಷೆಯನ್ನು ಎಲ್ಲೆ ಅಡಲಿ ಅದು ಒಂದೇ ಆಗಿರುತ್ತದೆ . ಬೇರೆ ಎಲ್ಲದಕ್ಕಿಂತ ಅದು ಹಿಂದಿ ಭಾಷೆಗೆ ಹತ್ತಿರವಾಗಿದೆ . ಟರ್ಕಿಷ್ ಜಿಪ್ಸಿ. ವಲ್ಷ್ ಜಿಪ್ಸಿ ಇಬ್ಬರೂ ಮಾತನಾಡಿ ಪರಸ್ಪರ ಅರ್ಥ ಮಾಡಿಕೊಳ್ಳಬಲ್ಲರು. ಜಿಪ್ಸಿಗಳಿಗೆ ಪಟ್ಟೆರಾನ್ ಎಂಬ ಸಂಕೇತ ಭಾಷೆಯೂ ಗೊತ್ತು ಅದು ಅವರಿಗೆ ಮಾತ್ರ ಅರ್ಥವಾಗುತ್ತದೆ . ಎರಡು ಸಣ್ಣ ರೆಂಬೆ , ಒಂದು ಎಲೆ . ಇಷ್ಟನ್ನು ಅವರು ಬೇರೆ ಬೇರೆ ಆಕಾರದಲ್ಲಿ ಪ್ರತಿ ನೊರಡಿಗೊಮ್ಮೆ ಜೋಡಿಸಿಡುತ್ತಾರೆ . ಹಿಂದೆ ಬರುತ್ತಿರುವ ಜಿಪ್ಸಿಗಳಿಗೆ ಇದು ಯಾವುದಾದರೂ ಸಂಕೇತವನ್ನು ತಿಳಿಸುತ್ತದೆ . ಜಗತ್ತಿನಲ್ಲಿರುವ ಸಾಮಾಜಿಕ ರಚನೆಯ ಪ್ರತಿಯೊಂದು ಮಾದರಿಯೂ ಜಿಪ್ಸಿ ಬಂಡಕಟ್ಟುಗಳಲ್ಲಿದೆ .
"https://kn.wikipedia.org/wiki/ರೊಮಾನಿ_ಜಾನಪದ" ಇಂದ ಪಡೆಯಲ್ಪಟ್ಟಿದೆ