ವಿನಿಗರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{ICCU}} =='''ವಿನಿಗರ್'''== ಹುದುಗಿಸುವ ಉತ್ಪನ್ನಗಳಲ್ಲಿ ವಿನಿಗರ್ ಅತ್ಯಂತ ಹಳೆಯದೆನ್...
 
No edit summary
೬ ನೇ ಸಾಲು:
ವಿನಿಗರ್ ಪ್ರಬಲತೆ : ವಿನಿಗರ್‌ದಲ್ಲಿರುವ ಶೇಕಡಾ ಅಸಿಟಿಕ್ ಆಮ್ಲದ ಆಧಾರದಮೇಲೆ ಉತ್ಪಾದಕರು ಮತ್ತು ಮಾರಾಟಗಾರರು ವಿನಿಗರ್ ಪ್ರಬಲತೆಯ ಮಟ್ಟವನ್ನು ನಿರ್ಧರಿಸುತ್ತಾರೆ. ವಿನಿಗರ್‌ನಲ್ಲಿರುವ ಅಸಿಟಿಕ್ ಆಮ್ಲದ ಶೇಕಡಾ ಪ್ರಮಾಣದ ಹತ್ತರಷ್ಟು ಈ ರೀತಿ ವಿನಿಗರ್ ಪ್ರಬಲತೆ ಯ ಮಟ್ಟವಾಗುತ್ತದೆ. ಉದಾಹರಣೆಗೆ, ಶೇಕಡಾ ೫ ಅಸಿಟಿಕ್ ಆಮ್ಲವಿರುವ ವಿನಿಗರನ್ನು ೫೦ ಪ್ರಬಲತೆಯದು ಎನ್ನುತ್ತಾರೆ.
=='''ವಿನಿಗರ್ ಬಗೆಗಳು'''==
ಹಲವು ಬಗೆಯ ಹಣ್ಣು ಮತ್ತು ಸಕ್ಕರೆಗಳಿಂದ ವಿನಿಗರ್ ತಯಾರಿಸಬಹುದು. ಮುಂದಿನ ಪುಟಗಳಲ್ಲಿ ಕೆಲವು ಪ್ರಮುಖ ವಿನಿಗರ್‌ಗಳನ್ನು ವಿವರಿಸಲಾಗಿದೆ :.
==='''ಸೈಡರ್ ವಿನಿಗರ್'''=== : ಸೇಬುರಸವನ್ನು ಹುದುಗಿಸಿ ಸಿದ್ಧಗೊಳಿಸಿದ ವಿನಿಗರ್‌ಗೆ ಸೈಡರ್ ವಿನಿಗರ್ ಅಥವಾ ಸೇಬು ಸೈಡರ್ ವಿನಿಗರ್ ಎನ್ನುತ್ತಾರೆ. ಇದರಲ್ಲಿ (೧) ಪ್ರತಿ ೧೦೦ ಘನ ಸೆಂ.ಮೀ.ನಲ್ಲಿ ಕನಿಷ್ಠ ೧.೬ ಗ್ರಾಂ. ಸೇಬಿನ ಘನವಸ್ತುಗಳಿರಬೇಕು. ಈ ಪೈಕಿ ಶೇಕಡಾ ೫೦ಕ್ಕಿಂತ ಹೆಚ್ಚಾಗಿ ಗ್ಲೂಕೋಸ್ ಗುಂಪಿನ ಸಕ್ಕರೆ ಮತ್ತು (೨) ಪ್ರತಿ ೧೦೦ ಘ.ಸೆಂ.ಮೀ. ವಿನಿಗರ್‌ನಲ್ಲಿ ೨೦೦ ಸೆ. ಉಷ್ಣತೆಯಲ್ಲಿ ಕನಿಷ್ಠ ೫ ಗ್ರಾಂ ಅಸಿಟಿಕ್ ಆಮ್ಲವಿರಬೇಕು.
===ವೈನ್ ಅಥವಾ ದ್ರಾಕ್ಷಿ ವಿನಿಗರ್=== : ಅಸಿಟಿಕ್ ಆಮ್ಲ ಉತ್ಪಾದನೆ ಮಾಡುವಂತೆ ದ್ರಾಕ್ಷಿರಸ ಹುದುಗಿಸಿದಾಗ ಈ ಬಗೆಯ ವಿನಿಗರ್ ದೊರೆಯುತ್ತದೆ. ವೈನ್ ಅಥವಾ ದ್ರಾಕ್ಷಿ ವಿನಿಗರ್‌ನಲ್ಲಿ ಪ್ರತಿ ೧೦೦ ಘನ. ಸೆಂ.ಮೀ. ಮತ್ತು ೨೦೦ ಸೆ. ಉಷ್ಣತೆಯಲ್ಲಿ ಕನಿಷ್ಠ ಒಂದು ಗ್ರಾಂ ದ್ರಾಕ್ಷಿಯ ಘನವಸ್ತುಗಳಿರಬೇಕು. ಇದಲ್ಲದೆ, ಇದರ ಜೊತೆಗೆ ೦.೧೩ ಗ್ರಾಂ ದ್ರಾಕ್ಷಿಯ ಭಸ್ಮ ಮತ್ತು ೪ ಗ್ರಾಂ ಅಸಿಟಿಕ್ ಆಮ್ಲ ಪ್ರತಿ ೧೦೦ ಘನ ಸೆಂ.ಮೀ. ವಿನಿಗರ್‌ನಲ್ಲಿರಬೇಕು.
==='''ಸ್ಪಿರಿಟ್ ವಿನಿಗರ್'''=== : ದುರ್ಬಲ ಈಥೈಲ್ ಆಲ್ಕೋಹಾಲ್ ಹುದುಗಿಸಿ ಅಸಿಟಿಕ್ ಆಮ್ಲ ಉತ್ಪಾದಿಸಿದರೆ ಅದಕ್ಕೆ ಸ್ಪಿರಿಟ್ ವಿನಿಗರ್ ಎನ್ನುತ್ತಾರೆ. ಪ್ರತಿ ೧೦೦ ಘನ ಸೆಂ.ಮೀ. ಸ್ಪಿರಿಟ್ ವಿನಿಗರ್‌ನಲ್ಲಿ ೨೦೦ ಸೆ. ಉಷ್ಣತೆಯಲ್ಲಿ ಕನಿಷ್ಠ ೪ ಗ್ರಾಂ ಅಸಿಟಿಕ್ ಆಮ್ಲವಿರಬೇಕು. ಇದಕ್ಕೆ ಕ್ಯಾರಾಮೆಲ್ ಸೇರಿಸಿ ಬಣ್ಣ ನೀಡಬಹುದು. ಈ ವಿನಿಗರ್‌ಅನ್ನು ಬಟ್ಟಿಯಿಳಿಸಿದ ವಿನಿಗರ್ ಅಥವಾ ಗ್ರೈನ್ ವಿನಿಗರ್ ಎನ್ನಬಹುದು.
ಬಟ್ಟಿಯಿಳಿಸಿದ ವಿನಿಗರ್‌ನ್ನು ಬಿಳಿ ವಿನಿಗರ್ ಎಂದೂ ಕರೆಯುತ್ತಾರೆ. ಬಟ್ಟಿಯಿಳಿಸಿದ ವಿನಿಗರ್‌ ಎನ್ನುವ ಪದ ಅಪಾರ್ಥಕ್ಕೆ ಎಡೆಮಾಡಿಕೊಡುತ್ತದೆ. ಕಾರ್ಯತಃ ವಿನಿಗರನ್ನು ಇಲ್ಲಿ ಬಟ್ಟಿಯಿಳಿಸುವುದಿಲ್ಲ. ಆದರೆ ಬಟ್ಟಿಯಿಳಿಸಿದ ಆಲ್ಕೋಹಾಲ್‌ನಿಂದ ಮತ್ರ ವಿನಿಗರ್ ತಯಾರಿಸುವುದಾಗಿದೆ.
"https://kn.wikipedia.org/wiki/ವಿನಿಗರ್" ಇಂದ ಪಡೆಯಲ್ಪಟ್ಟಿದೆ