"ಹಗಲು" ಆವೃತ್ತಿಗಳ ಮಧ್ಯದ ಬದಲಾವಣೆಗಳು

No edit summary
ಸಾಮಾನ್ಯವಾಗಿ [[ಭೂಮಿ|ಭೂಗ್ರಹ]]ದ ಅರ್ಧದಷ್ಟು ಪ್ರದೇಶವು ಸೂರ್ಯ ಪ್ರಕಾಶದಿಂದ ಯಾವಾಗಲೂ ಬೆಳಗಲ್ಪಟ್ಟಿರುತ್ತದೆ. ಸೂರ್ಯನಿಗೆ ಎದುರಾಗಿ, ನೇರವಾಗಿ ಬೆಳಗಲ್ಪಟ್ಟಂತಹ ಭೂಭಾಗವು ಸುಮಾರಾಗಿ ಭೂಮಿಯ ಅರ್ಧದಷ್ಟಿದ್ದರೂ,[[ಭೂಮಿಯ ವಾತಾವರಣ]]ವು [[ಬೆಳಕು|ಬೆಳಕ]]ನ್ನು ಚದುರಿಸುವುದರಿಂದ ಮತ್ತು ವಾಯುಮಂಡಲದ ಇನ್ನಿತರ ವಿದ್ಯಮಾನಗಳಿಂದ ಇನ್ನೂ [[ಸೂರ್ಯೋದಯ]]ವಾಗದ ಮತ್ತು [[ಸೂರ್ಯಾಸ್ತ]]ವಾದ ಭೂಭಾಗಳೂ ಕೊಂಚ ಬೆಳಕನ್ನು ಪಡೆಯುತ್ತವೆ. ಹಾಗಾಗಿ ಸೂರ್ಯನಿಂದ ಬೆಳಗಲ್ಪಡುವ ಭೂಮಿಯ ಒಟ್ಟು ಪ್ರದೇಶ ಭೂಮಿಯ ಅರ್ಧಕ್ಕಿಂತ ಕೊಂಚ ಹೆಚ್ಚೇ.
 
ಭೂಮಿಯು ತನ್ನ ಅಕ್ಷದ ಮೇಲೆ ತಿರುಗುವುದರಿಂದಾಗಿ, ಹೀಗೆ ಬೆಳಗಲ್ಪಡುವ ಭೂಪ್ರದೇಶವು (ಖಗೋಳಾರ್ಧ) ಭೂಮಿ ತನ್ನ ಅಕ್ಷದ ಸುತ್ತ ತಿರುಗುವಿಕೆಯಿಂದ ಪ್ರತಿಕ್ಷಣವು ಬದಲಾಗುತ್ತಿರುತ್ತದೆ. ಈ ಅಕ್ಷರೇಖೆ ಸೂರ್ಯನ ಸುತ್ತ ಚಲಿಸುವ ಭೂಮಿಯ ಕಕ್ಷೆಯ ಸಮಕ್ಷೇತ್ರಕ್ಕೆ ನಿಖರವಾಗಿ ಲಂಬವಾಗಿರುವುದಿಲ್ಲವಾದರಿಂದ ಹಗಲುಒಂದು ಹೊತ್ತಿನಪ್ರದೇಶದಿಂದ ಸಮಯವುಇನ್ನೊಂದು ಒಂದುಪ್ರದೇಶಕ್ಕೆ ಸ್ಥಳದಿಂದಹಗಲು ಇನ್ನೊಂದುಹೊತ್ತಿನ ಸ್ಥಳಕ್ಕೆಸಮಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ.
[[ವರ್ಗ:ಕಾಲ]]
[[ವರ್ಗ:ಖಗೋಳಶಾಸ್ತ್ರ]]
"https://kn.wikipedia.org/wiki/ವಿಶೇಷ:MobileDiff/408549" ಇಂದ ಪಡೆಯಲ್ಪಟ್ಟಿದೆ