ಆದಿ ಶಂಕರರು ಮತ್ತು ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೨ ನೇ ಸಾಲು:
ಶೃಂಗೇರಿಯಿಂದ ಕೇರಳಕ್ಕೆ ಬಂದು ಉತ್ತರಕ್ಕೆ ಹೊರಡುವಾಗ ಕೇರಳದ ರಾಜ ಸುಧನ್ವನು ಅವರಿಗೆ ಬೆಂಗಾವಲಾಗಿ ಬಂದನು. ಅವರು ತಮಿಳುನಾಡು ಕಂಚಿ ಯನ್ನು ದಾಟಿ ಆಂದ್ರಪ್ರದೇಶದ ಮೂಲಕ ವಿದರ್ಭಕ್ಕೆ ಬಂದರು; ಅಲ್ಲಿ ಪ್ರಯಾಣ ಮಾಡುವಾಗ ಸಶಸ್ತ್ರ ಕಾಪಾಲಿಕರು ಇವರನ್ನು ಎದುರಿಸಿದರು. ಸುಧನ್ವ ರಾಜನು ಅವರನ್ನು ನಿವಾರಿಸಿ, ಪುನಃ ಕರ್ನಾಟಕಕ್ಕೆ ಬಂದು, ಗೋಕರ್ಣಕ್ಕೆ ಸುರಕ್ಷಿತವಾಗಿ ತಲುಪಿಸಿದನು. ಅಲ್ಲಿ ಅವರು ಶೈವ ಪಂಥದವರೊಡನೆ ವಾದ ಮಾಡಿ ಜಯಿಸಿ ಶಿಷ್ಯರನ್ನಾಗಿ ಮಾಡಿಕೊಂಡರು.
ಅಲ್ಲಿಂದ ಸೌರಾಷ್ಟ್ರ [ಹಳೆಯ ಕಾಂಬೋಜ] ಕ್ಕೆ ಬಂದು ಪುಣ್ಯ ಕ್ಷೇತ್ರಗಳಾದ ಗಿರಿನಾರ, ಸೋಮನಾಥ, ಪ್ರಭಾಸ ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಯ ಪಂಡಿತರನ್ನು ವಾದದಲ್ಲಿ ಸೋಲಿಸಿ ಅದ್ವೈತ ತತ್ವವನ್ನು ಎತ್ತಿ ಹಿಡಿದರು. ಅಲ್ಲಿಂದ ದ್ವಾರಕೆಗೆ ಬಂದು ಅಲ್ಲಿ ಪ್ರಸಿದ್ಧರಾದ ಬೇಧಾಬೇಧ ಪಂಡಿತರಾದ ಭಟ್ಟ ಭಾಸ್ಕರರನ್ನು ವಾದದಲ್ಲಿ ಸೋಲಿಸಿದರು.. ದ್ವಾರಕೆಯ ಪಂಡಿತರೆಲ್ಲಾ ಅದ್ವೈತ ತತ್ವವನ್ನು ಒಪ್ಪಿಕೊಂಡರು. ಬಾಹ್ಲೀಕದಲ್ಲಿ ಜೈನಪಂಡಿತರನ್ನು ವಾದದಲ್ಲಿ ಹಿಮ್ಮಟ್ಟಿಸಿದರು. ಅಲ್ಲಿಂದ ಕಾಂಬೋಜಕ್ಕೆ [ಉತ್ತರಕಾಶ್ಮೀರ] ದಾರದ [ದಬೀಸ್ಥಾನ್] ಕ್ಕೆ ಬಂದು ಅಲ್ಲಿಯ ಸಂನ್ಯಾಸಿಗಳನ್ನೂ ಪಂಡಿತರನ್ನೂ ವಾದದಲ್ಲಿ ಸೋಲಿಸಿದರು ಎತ್ತರದ ಶಿಖರ ,ಕಣಿವೆಗಳನ್ನು ದಾಟಿ ಕಾಶ್ಮಿರ, ನಂತರ ಕಾಮರೂಪಕ್ಕೆ ಬಂದು ಅಲ್ಲಿ ನವಗುಪ್ತನೆಂಬ ತಾಂತ್ರಿಕನನ್ನು ಎದುರಿಸಿದರು.
*ಕಾಶ್ಮೀರದಲ್ಲಿ ಸರ್ವಜ್ಞ ಪೀಠದ ಪ್ರವೇಶ ಮಾಡಿ ಅಲ್ಲಿಯ ಎಲ್ಲಾ ದರ್ಶನಗಳ ಪಂಡಿತರನ್ನೂ ವಾದದಲ್ಲಿ ಮಣಿಸಿ ಸರ್ವಜ್ಞ ಪೀಠವನ್ನು [ ಶಾರದಾ ಪೀಠ] ವನ್ನು ಏರಿದರು (ಕ್ರಿ.ಶ. ೮೨೦ <sup>೨</sup> ?) . ಆ ಸರ್ವಜ್ಞ ಪೀಠಕ್ಕೆ ನಾಲ್ಕು ದಿಕ್ಕಿಗೆ ನಾಲ್ಕು ಬಾಗಿಲಿದ್ದು ದಕ್ಷಿಣ ಭಾರತದಿಂದ ಯಾರೂ ಶ್ರೇಷ್ಠ ಪಂಡಿತರು ಬಾರದೇ ಇದ್ದುದರಿಂದ ದಕ್ಷಿಣದ ಬಾಗಿಲು ತರೆದೇ ಇರಲಿಲ್ಲವಂತೆ. ಇವರು ಅದನ್ನು ತೆರೆಸಿ ಪ್ರವೇಶಮಾಡಿ, ಎಲ್ಲರನ್ನೂ ವಾದದಲ್ಲಿ ಜಯಿಸಿದರು.
*ಅವರ ಜೀವನದ ಕೊನೆಯ ಭಾಗದಲ್ಲಿ ಹಿಮಾಲಯಕ್ಕೆ ಪ್ರಯಾಣ ಮಾಡಿ ಅಲ್ಲಿ ಕೇದಾರ ದೇವಾಲಯದ ಹತ್ತಿರ ವಿದೇಹ ಮುಕ್ತಿಯನ್ನು ಪಡೆದರೆಂದು ಹೇಳುತ್ತಾರೆ. ಕೇದಾರದ ಕೇದಾರನಾಥ ದೇವಾಲಯದ ಹಿಂಭಾಗದಲ್ಲಿ ಶ್ರೀ ಶಂಕರರ ಸಮಾಧಿ ಇದೆ ; ಶಿಲಾಪ್ರತಿಮೆಯೂ ಇದೆ. ಕೇರಳದವರು ಕೇರಳದ ತ್ರಿಶೂರಿನಲ್ಲಿ ಅವರು ಸಮಾಧಿಸ್ಥ ರಾದರೆನ್ನುತ್ತಾರೆ, ತಮಿಳನಾಡಿನವರು ಆ ನಾಡಿನ ಕಂಚಿ ಯಲ್ಲಿ ಶಂಕರರು ವಿದೇಹ ಮುಕ್ತಿ ಪಡೆದರೆನ್ನುತ್ತಾರೆ. ಕೇರಳ, ಕಂಚಿಗಳಲ್ಲಿಯೂ ಅವರ ಸಮಾಧಿಗಳಿವೆ. ಆದರೆ ಎಲ್ಲಕ್ಕೂ ಪ್ರಾಚೀನ ವಾದ ಮಾಧವ ಶಂಕರ ವಿಜಯದಲ್ಲಿ ಕೇದಾರದಲ್ಲಿ ಅವರು ವಿದೇಹ ಮುಕ್ತಿಪಡೆದರೆಂದು ಹೇಳಿದೆ.