ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಶಿವ ಸಾಯುಜ್ಯ: ಮುಂದುವರೆಸಿದೆ
೨೬ ನೇ ಸಾಲು:
== ಶಿವ -ಶಕ್ತಿ ==
:ಶಿವನಲ್ಲಿ ಇಚ್ಛೆಯಾದಾಗ '''ಸ್ಪಂದನ'''ವುಂಟಾಗುವುದು. ಅದೇ ಶಕ್ತಿ . ಹಾಗೆ '''ಶಿವ- ಶಕ್ತಿ''' ಎಂದು ಎರಡು ರೂಪ ಹೊಂದುವುದು. ಶಕ್ತಿ ವಿಮರ್ಶರೂಪದ್ದು - ಅಹಂ ಭಾವನೆಯದು ; ಸೃಷ್ಟಿಯಲ್ಲಿ ಅದು ವಿಶ್ವಾಕಾರ ; ಸ್ಥಿತಿಯಲ್ಲಿ ವಿಶ್ವಪ್ರಕಾರ ; ಸಂಹಾರದಲ್ಲಿ ವಿಶ್ವ ಸಂಹರಣ ರೂಪ ತಾಳುವುದು. ಈ ಶಕ್ತಿಯ ಸ್ಪುರಣವಿಲ್ಲದಿದ್ದರೆ , ಶಿವನಲ್ಲಿ ತನ್ನ ಪ್ರಕಾಶದ ಅರಿವಾಗದು ಅದು ಶಾಂತ ರೂಪ ತಾಳುವುದು. ಆದರೂ ಶಿವ ಶಕ್ತಿಯರು ಒಂದೇ -ಚಂದ್ರ -ಚಂದ್ರಿಕೆಯಂತೆ ;. ಶಿವ ಶಕ್ತಿಯರ ಅಂತರ ನಿವೇಶಕ್ಕೆ (ಒಂದುಗೂಡುವಿಕೆಗೆ ) ಸದಾಶಿವವೆಂದೂ, ಬಾಹ್ಯನಿವೇಶಕ್ಕೆ ಈಶ್ವರನೆಂದೂ ಹೆಸರು. ಇವರಿಂದ ಐದು ಶಕ್ತಿ ತತ್ವಗಳು ಉಂಟಾಗುತ್ತವೆ ; ಅವು '''ಚಿತ್ , ಆನಂದ , ಇಚ್ಛಾ , ಜ್ಞಾನ , ಕ್ರಿಯಾ .''' ಇದಕ್ಕೆ ತತ್ವಗಳು (ಹೆಸರು) ಶಿವ , ಶಕ್ತಿ , ಸದಾಶಿವ , ಈಶ್ವರ , ಶುದ್ಧವಿದ್ಯಾ (ಐದು) .
== ಮಾಯೆ ==
:'''ಮಾಯೆಯು ಪರಮೇಶ್ವರನ ಶಕ್ತಿ''' . ಶರೀರೇಂದ್ರಿಯಗಳನ್ನು ನಾನು ಎಂದು ತಿಳಿಯುವುದು ಮಾಯೆಯಿಂದ. ಶಿವನ ಸರ್ವ ಕರ್ತೃತ್ವ , ಸರ್ವಜ್ಞತ್ವ , ಪ್ರರ್ಣತ್ವ , ನಿತ್ಯತ್ವ , ವ್ಯಾಪಕತ್ವ ; ಸಂಕೋಚಗೊಂಡು , ಕಲಾ, ವಿದ್ಯಾ , ರಾಗ, ಕಾಲ ಮತ್ತು ನಿಯತಿಗಳೆಂಬ ಪಂಚ ಕಂಚುಕಗಳಾಗಿ ಜೀವನನ್ನು ಆವರಿಸಿರುವುದು ಮಾಯೆಯ ಪ್ರಭಾವದಿಂದ.
'''ಹೀಗೆ ಮಾಯೆಯಿಂದಾವರಿಸಲ್ಪಟ್ಟವನೇ ಪುರುಷ''' . ತಾನು ಶಿವನೇ ಆಗಿದ್ದರೂ, ವಿಸ್ಮೃತಿಯಿಂದ ಜೀವನಾಗಿದ್ದಾನೆ. ಪುರುಷ ಹನ್ನೆರಡನೆಯ ತತ್ವ. ; ದೇಹೇಂದ್ರಿಯಗಳನ್ನು ಕೊಡುವ ಪ್ರಕೃತಿ ಹದಿಮೂರನೆಯ ತತ್ವ . ಅನಂತರ ಬುದ್ಧಿ ಅಹಂಕಾರ ಇತ್ಯಾದಿ ಸೇರಿ '''ಒಟ್ಟು ೨೩ ತತ್ವಗಳು .'''
 
== ಪ್ರತ್ಯಭಿಜ್ಞಾ - ಉಪಸಂಹಾರ ==
:ಪರುಷನು (ಜೀವನು) ತಾನೇ ಶಿವನೆಂದು ಅರಿತುಕೊಳ್ಳುವುದು -ಪ್ರತ್ಯಭಿಜ್ಞೆ. . ಗುರೂಪದೇಶದಿಂದ ಅಹಂ ಮಹೇಶ್ವರ ಎಂಬ ಅರಿವಾದಾಗ - ಜ್ಞಾನ ದೊರಕಿತೆಂದು ಅರ್ಥ. ಅದೇ ಮೋಕ್ಷ. ಮುಕ್ತಿ ಪಡೆಯಲು ಜ್ಞಾನ -ಭಕ್ತಿಗಳೆರಡೂ ಅವಶ್ಯ.
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ