ಮರಾಠಿ ಸಾಹಿತ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ನಾಮದೇವ ಢಸಾಳ್ ಬರಹಕ್ಕೆ ಕೊಂಡಿ
೨೦ ನೇ ಸಾಲು:
 
 
ನಲವತ್ತರ ದಶಕದಲ್ಲಿ ಬಿ.ಎಸ್.ಮರ್ಧೇಕರರ ನವ್ಯಕಾವ್ಯದೊಂದಿಗೆ ಮರಾಠಿ ಸಾಹಿತ್ಯ ಹೊಸ ದಾರಿಯಲ್ಲಿ ಪ್ರವೇಶಿಸಿತು. ಐವತ್ತರ ದಶಕದಲ್ಲಿ'little magazine movement' ವೇಗದಿಂದ ಬೆಳೆಯತೊಡಗಿತು. ಈ ಚಳುವಳಿಯಲ್ಲಿ ಸಂಪ್ರದಾಯವಿರೋಧಿ, ಕ್ರಾಂತಿಕಾರಿ, ಪ್ರಾಯೋಗಿಕ ಕೃತಿಗಳನ್ನು ಪ್ರಕಾಶಿಸಲಾಯಿತು. ಇದು ದಲಿತ ಸಾಹಿತ್ಯದ ಬೆಳವಣಿಗೆಗೂ ಕುಮ್ಮಕ್ಕು ಕೊಟ್ಟಿತು. [[ಬಿ.ಆರ್.ಅಂಬೇಡ್ಕರ್ | ಡಾ. ಬಾಬಾಸಾಹೇಬ ಅಂಬೇಡ್ಕರರ]] ಬೋಧನೆಗಳಿಮಧ ಪ್ರಭಾವಿತವಾಗಿದ್ದ ದಲಿತ ಸಾಹಿತ್ಯ , ಮಧ್ಮಮವರ್ಗೀಯ, ಉಚ್ಚಜಾತೀಯ ಮತ್ತು ನಗರಕೇಂದ್ರಿತವಾಗಿದ್ದ ಪ್ರಸಕ್ತ ಮರಾಠಿ ಸಾಹಿತ್ಯ ವ್ಯವಸ್ಥೆಗೆ ಸವಾಲೆಸೆಯಿತು. ಖ್ಯಾತ ಕಾದಂಬರಿಕಾರ, ಕವಿ ಹಾಗೂ ವಿಮರ್ಶಕ ಭಾಲಚಂದ್ರ ನೇಮಾಡೆಯವರಂತಹ ಬರಹಗಾರರನ್ನು little magazine movement ಬೆಳಕಿಗೆ ತಂದಿತು. ಅರುಣ್ ಕೋಲಾಟ್ಕರ್, ದಿಲೀಪ್ ಚಿತ್ರೆ, [[ನಾಮದೇವ ಢಸಾಳ್]], ವಸಂತ ಅಬಾಜಿ ಡಹಾಕೆ, ಮನೋಹರ ಓಕ್ ಇತ್ಯಾದಿ ನವ್ಯ ಪಂಥೀಯರ ಕಾವ್ಯ ಸಂಕೀರ್ಣವಷ್ಟೇ ಅಲ್ಲದೆ , ವಿವರಗಳಿಂದ ಶ್ರೀಮಂತವಾಗಿ , ಓದುಗರನ್ನು ಬಡಿದೆಬ್ಬಿಸುವಂಥಹವುಗಳಾಗಿದ್ದವು. ಭಾವು ಪಾಧ್ಯೆ, ವಿಲಾಸ್ ಸಾರಂಗ್ , ಶ್ಯಾಮ್ ಮನೋಹರ್ ಮತ್ತು ವಿಶ್ರಾಮ್ ಬೇಡೇಕರ್ ಕೆಲು ಹೆಸರಾಂತ ಕಥೆಗಾರರು.
 
1990ರ ದಶಕದಲ್ಲಿ ಅಭಿಧನಂತರ ಎಂಬ ನವ್ಯ ಕಾವ್ಯ ಪ್ರಕಾರದೊಂದಿಗೆ ಮರಾಠಿ ಸಾಹಿತ್ಯ ಮತ್ತೊಂದು ಮಜಲನ್ನು ಮೆಟ್ಟಿತು. ಅದರ ನಂತರ ಭರದಿಂದ ಬೆಳೆಯತೊಡಗಿದ ಈ "ಕಿರು ಪತ್ರಿಕಾ ಚಳುವಳಿ" ಯ ಹರಿಕಾರರಾದ ಮನ್ಯಾಜೋಶಿ, ಹೇಮಂತ ದಿವಾಟೆ, ಸಚಿನ್ ಕೇಟ್ಕರ್, ಮಂಗೇಶ್ ಕಾಳೆ, ಸಲಿಲ್ ವಾಘ್ ನಿತಿನ್ ಕುಲಕರ್ಣಿ, ವಜ್ರೇಶ್ ಸೋಲಂಕಿ ಮೊದಲಾದವರು ನವ್ಯೋತ್ತರ ಜೀವನದ ಹೊಸ ಆಯಾಮಗಳನ್ನು ತೆರೆದಿಟ್ಟರು. ಅಭಿಧನಂತರ ಪ್ರಕಾಶನ ಹೊರತಂದ ಕವಿತಾ ಸಂಗ್ರಹಗಳು ಮತ್ತು ಅಭಿಧನಂತರ ನಿಯತಕಾಲಿಕೆಯ ಪ್ರತಿಗಳು ಮರಾಠಿ ಸಾಹಿತ್ಯವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿವೆ.
"https://kn.wikipedia.org/wiki/ಮರಾಠಿ_ಸಾಹಿತ್ಯ" ಇಂದ ಪಡೆಯಲ್ಪಟ್ಟಿದೆ