ಶೈವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
'''ಶೈವ ಪಂಥ'''ವು [[ಹಿಂದೂ ಧರ್ಮ]]ದ ನಾಲ್ಕು ಅತಿ ವ್ಯಾಪಕವಾಗಿ ಅನುಸರಿಸಲಾಗುವ ಪಂಥಗಳ ಪೈಕಿ ಒಂದು, ಮತ್ತು ಇದು ಶಿವನನ್ನು ಪರಮಾತ್ಮ ಹಾಗು ಪವಿತ್ರನೆಂದು ಭಾವಿಸುತ್ತದೆ. ಶೈವರು ಎಂದು ಕರೆಯಲ್ಪಡುವ ಶೈವ ಪಂಥದ ಅನುಯಾಯಿಗಳು ಶಿವನು ಎಲ್ಲವೂ ಮತ್ತು ಎಲ್ಲದರಲ್ಲೂ ಇದ್ದಾನೆ, ಎಲ್ಲದರ ಸೃಷ್ಟಿಕರ್ತ, ಸಂರಕ್ಷಕ, ವಿನಾಶಕ, ಬಹಿರಂಗಪಡಿಸುವವನು ಹಾಗು ಮರೆಮಾಡುವವನು ಎಂದು ನಂಬುತ್ತಾರೆ. ಶೈವ ಪಂಥವು ಭಾರತ, ನೇಪಾಳ ಹಾಗು ಶ್ರೀಲಂಕಾದ ಆದ್ಯಂತ ವ್ಯಾಪಕವಾಗಿದೆ.
== ಶೈವ ಸಿದ್ಧಾಂತಗಳು ==
:ಶಿವ ಅಥವಾ ರುದ್ರನ ಉಪಾಸನೆಯು ತುಂಬಾ ಪ್ರಾಚೀನವಾದುದು. ಸಿಧೂ ಸಂಸ್ಸೃತಿಯ ಅವಶೇಷಷಗಳಲ್ಲಿ (ಕ್ರಿ.ಪೂ.೩೦೦೦-೪೦೦೦) ಶಿವೋಪಾಸನೆ ಇತ್ತೆಂಬ ಕುರುಹುಗಳಿವೆ. ಅದನ್ನು ಪಶುಪತಿ ಎಂದು ಗುರುತಿಸಿದ್ದಾರೆ. ಪಾಶುಪತ ಪಂಥ ಅಥವಾ[[ಪಾಶುಪತ ದರ್ಶನ]] ದ ಪ್ರವರ್ತಕರು ಯಾರೆಂದು ತಿಳಿಯದು .
:ಪಾಶುಪತವು ದಾರ್ಶನಿಕ ವಿಚಾರಕ್ಕಿಂತ ಸಾಧನೆ ಮುಖ್ಯವೆಂದು ಹೇಳುತ್ತದೆ.
ಕಾರ್ಯ, ಕಾರಣ , ಯೋಗ , ವಿಧಿ , ಮತ್ತು ದುಃಖಾಂತ ಎಂಬ ಐದು ಅಂಶಗಳನ್ನು ಹೇಳುತ್ತಾರೆ. ಕಾರ್ಯವೆಂದರೆ ದೃಷ್ಟಿ ; ಕಾರಣ -ಶಿವ ನಿಮಿತ್ತ ಕಾರಣ ; ಜೀವನು ಪಶು ; ಶಿವಾನುಗ್ರಹದಿಂದ ದುಃಖದಿಂದ ಬಿಡುಗಡೆ ಪಡೆಯುತ್ತಾರೆ. ಯೋಗ ಮತ್ತು ವಿಧಿಗಳು ಸಾಧನಾ ಮಾರ್ಗ . ಅದರಲ್ಲಿ ಸ್ಮಶಾನ ವಾಸ , ನರ-ಕಪಾಲದಲ್ಲಿ ಆಹಾರ ಭಕ್ಷಣ, ಭಸ್ಮ ಭಕ್ಷಣ , ಮದ್ಯಪಾನ , ಮೊದಲಾದವೂ ಸೇರಿವೆ .
"https://kn.wikipedia.org/wiki/ಶೈವ_ಪಂಥ" ಇಂದ ಪಡೆಯಲ್ಪಟ್ಟಿದೆ